ಅಪಘಾತದಲ್ಲಿ ಕಾಲನ್ನು ಶಾಶ್ವತವಾಗಿ ಕಳೆದುಕೊಂಡು ಸುನಿಲ ನಾಯ್ಕ
By: Uday Naik
ಹೆಗಡೆ ರಸ್ತೆಯ ಕಾಲೇಜಿನ ಎದುರುಗಡೆ ನವೆಂಬರ 04 ರಂದು ರಾತ್ರಿ 08:30 ಕ್ಕೆ ನಡೆದ ಅಪಘಾತದಲ್ಲಿ ಸುನಿಲ ಹನುಮಂತ ನಾಯ್ಕ (32) ತೀವ್ರವಾಗಿ ಗಾಯಗೊಂಡಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ.ಹೆಗಡೆ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಶಸ್ತ್ರಕ್ರಿಯೆಯಿಂದ ಕಾಲನ್ನು ಕತ್ತರಿಸಲಾಗಿತ್ತು. ದುರಾದ್ರಷ್ಟದಿಂದ ಕಾಲನ್ನು ಶಾಶ್ವತವಾಗಿ ಕಳೆದುಕೊಂಡು ಕಂಗಾಲಾಗಿರುವ ಸುನಿಲ ಹನುಮಂತ ನಾಯ್ಕ ಮತ್ತು ಆಸ್ಪತ್ರೆಯ ಲಕ್ಷಗಟ್ಟಲೆ ಚಿಕಿತ್ಸಾ ವೆಚ್ಚದಿಂದ ಬಡವಾಗಿರುವ ಇವರ ತಂದೆ ಹನುಮಂತ ನಾಯ್ಕರವರು ಈಗ ದಾನಿಗಳಿಂದ ಅರ್ಥಿಕ ಸಹಾಯ ಕೋರಿದ್ದಾರೆ. ದೊಡ್ದಮನಸ್ಸಿನ ದಾನಿಗಳು ತಮ್ಮ ಕೈಯಲ್ಲಿ ಅದಷ್ಟು ಅರ್ಥಿಕ ನೆರವು ನೀಡಿ ನಾಯ್ಕರವರಿಗೆ ಸಹಾಯ ಹಸ್ತ ಚಾಚಬೇಕೆಂದು ಕೋರಿಕೆ.

ನ್ಯೂಸ್.ನಾಮಧಾರಿ.ಕಂ ಗೆ ದೊರತಿರುವ ಮಾಹಿತಿ ಪ್ರಕಾರ ಸುನಿಲ್ ಹನುಮಂತ ನಾಯ್ಕರ ಬ್ಯಾಂಕ್ ಅಕೌಂಟ ವಿವರಗಳು,
ಬ್ಯಾಂಕ್ ವಿವರ,
Sunil Hanamanth Naik
SB A/c: 89068895526
Karnataka Vikas Gramina Bank, Kumata.
IFSC code: KVGB0009355
ದಾನಿಗಳು ತಮ್ಮ ವಿವರವನ್ನು ನ್ಯೂಸ್.ನಾಮಧಾರಿ.ಕಂ ನೊಂದಿಗೆ ಹಂಚಿಕೊಂಡರೆ, ಆ ಮಾಹಿತಿಯನ್ನು ಪ್ರಕಟಿಸಲಾಗುವುದು.
ಸೂಚನೆ: ಸುನಿಲ ಹನುಮಂತ ನಾಯ್ಕರವರ ಬ್ಯಾಂಕ್ ವಿವರವನ್ನು ನ್ಯೂಸ್.ನಾಮಧಾರಿ.ಕಂ ಪರಿಶಿಲಿಸಿರುವುದಿಲ್ಲ ಹಾಗೂ ದಾನಿಗಳು ಕುದ್ದಾಗಿ ಪರಿಶಿಲಿಸತಕ್ಕದ್ದು.