ಮುಂಡಗೋಡ ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸ್ನೇಹ ಸಮ್ಮೀಲನ ಮತ್ತು ಪ್ರತಿಭಾ ಪು
ಮುಂಡಗೋಡ : ದಿನಾಂಕ 07/032021 ರಂದು ರವಿವಾರ, ಮುಂಡಗೋಡ ತಾಲೂಕು ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸ್ನೇಹ ಸಮ್ಮೀಲನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವು ಕೂರ್ಲಿ ಗ್ರಾಮದಲ್ಲಿ ಸಂಘದ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ಜರುಗಿತು.
.ತಾಲೂಕು ನಾಮಧಾರಿ ಸಂಘದ ಅಧ್ಯಕ್ಷರಾದ ಶ್ರೀ ಎಚ್ ಎಮ್ ನಾಯ್ಕ ಉದ್ಘಾಟಿಸಿದರು. ತಾಲೂಕಿನ ಪ್ರತಿಭಾವಂತ SSLC & PUC ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಹಳೆಪೈಕರು - ನಾಮಧಾರಿ ಗಳ ಕುಲಮೂಲ ಕೃತಿ ರಚಿಸಿದ ಶಿರಸಿ ಬೀಳೂರು PU ಕಾಲೇಜಿನ ಉಪನ್ಯಾಸಕರಾದ ಶ್ರೀ ಉಮೇಶ್ ನಾಯ್ಕ ರವರಿಗೆ ಅಭಿನಂದನಾ ಸನ್ಮಾನ ಅರ್ಪಿಸಲಾಯಿತು.
ಮುಂಡಗೋಡ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಶ್ರೀ ಗಂಗಾಧರ ನಾಯ್ಕ ರವರು ಉಪನ್ಯಾಸ ನೀಡಿದರು. ಶ್ರೀ ಲೋಕೇಶ್ ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು.ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮನೋಜ ನಾಯ್ಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾದ ಶ್ರೀ ದಯಾನಂದ ನಾಯ್ಕ, ಆರೋಗ್ಯ ಇಲಾಖೆಯ ಜಿಲ್ಲಾ ಸಲಹೆಗಾರರಾದ ಶ್ರೀ ಪ್ರೇಮಕುಮಾರ ನಾಯ್ಕ , ಶ್ರೀ ಆರ್ ಜಿ ನಾಯ್ಕ ,ಶ್ರೀ ಹರಿ ನಾಯ್ಕ, ತಾಲೂಕು ಕಾರ್ಯದರ್ಶಿ ಮಂಜುನಾಥ ನಾಯ್ಕ, ಶ್ರೀ ಉದಯ ನಾಯ್ಕ ಮುಂತಾದವರು ಭಾಗವಹಿಸಿದ್ದರು. ಶ್ರೀ ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಎಲ್ಲರ ಸಹಕಾರ ದಿಂದ ಅಚ್ಚುಕಟ್ಟಾಗಿ ಜರುಗಿತು.