logo logo

ಶಿರಸಿ ಪೊಲೀಸ್ ಡಿವೈಎಸ್‌ಪಿ ರವಿ ಡಿ. ನಾಯ್ಕ ಅವರಿಗೆ 2021ರ ಮುಖ್ಯಮಂತ್ರಿ ಬಂಗಾರದ ಪದಕ

ಸಿರ್ಸಿ : ಕಳೆದ ನಾಲ್ಕು ತಿಂಗಳುಗಳಿಂದ ಶಿರಸಿ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿ ಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಡಿ. ನಾಯ್ಕ ಅವರಿಗೆ 2021ರ ಮುಖ್ಯಮಂತ್ರಿ ಬಂಗಾರದ ಪದಕ ಘೋಷಣೆಯಾಗಿದೆ.

20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿ ಅಲ್ಲಿ ನಿವೃತ್ತಿಯಾಗಿ ನಂತರ ಪೊಲೀಸ್ ಇಲಾಖೆಗೆ ಸೇರಿದ ರವಿ ಡಿ. ನಾಯ್ಕ ಅವರು ಮೂಲತಃ ಕುಮಟಾ ತಾಲೂಕಿನ ಬಾಡದವರು.

ಮೊದಲು ಧಾರವಾಡದಲ್ಲಿ ಕಾರ್ಯನಿರ್ವಹಿಸಿ ಅಲ್ಲಿನ ಹಲವು ಅಪರಾಧ ಪ್ರಕರಣಗಳು, ಕೊಲೆ, ಸುಲಿಗೆ, ದರೋಡೆ ಮುಂತಾ ಹಲವು ಪ್ರಕರಣಗಳನ್ನು ಭೇಧಿಸಿ ಆರೋಪಿಗಳನ್ನು ಜೈಲಿಗೆ ಅಟ್ಟಿದ್ದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಇವರ ಈ ಕಾರ್ಯವನ್ನು ನೋಡಿ ಸರಕಾರ 2021ರ ಮುಖ್ಯ ಮಂತ್ರಿ ಪದಕಕ್ಕೆ ಆಯ್ಕೆ ಮಾಡಿದ್ದು, ಅವರು ಶಿರಸಿಯಲ್ಲಿ ಅವರ ಸ್ವ ಜಿಲ್ಲೆಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವಾಗಲೇ ಮುಖ್ಯಮಂತ್ರಿ ಪದಕ ಸಿಕ್ಕಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂತಸದ ವಿಷಯವಾಗಿದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್