logo

ನಾಮಧಾರಿ ವಿದ್ಯಾರ್ಥಿನಿಲಯ ಮತ್ತು ಸಭಾಭವನ ಕಟ್ಟಡ ಸಮಿತಿ, ಹೊನ್ನಾವರ : ವಿಜ್ಞಾಪನೆ

By: ಎಂ ಜಿ ನಾಯ್ಕ (ಮಾಹಿತಿ)
ನಾಮಧಾರಿ ವಿದ್ಯಾರ್ಥಿನಿಲಯದ ಬಹುಮಹಡಿ ಕಟ್ಟಡಕ್ಕಾಗಿ ಏಪ್ರಿಲ್ 29 ರಂದು ಹೊನ್ನಾವರದಲ್ಲಿ ಶಂಕುಸ್ಥಾಪನೆ ನೆರವೇರಿದ್ದು ಈ ಕುರಿತು ನ್ಯೂಸ್.ನಾಮಧಾರಿ.ಕಂ ನಲ್ಲಿ ವರದಿ ಪ್ರಕಟವಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಈ ಮೂರಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಕಟ್ಟಡ ಸಮಿತಿಯು ಸಮಾಜದ ದಾನಿಗಳ ಸಹಾಯ ಹಸ್ತದ ನೆರವು ಕೇಳಿದೆ.
ಹಿರಿಯ ವಕೀಲರಾದ ದಿ|| ವಿ. ಜಿ. ನಾಯ್ಕ, ವಕೀಲರು ಮತ್ತು ಸಂಘದ ಸದಸ್ಯರು 1965-1966ನೇ ಸಾಲಿನಲ್ಲಿ ಜಿಲ್ಲೆಯ ಸಮಾಜ ಭಾಂದವರ ಸಹಕಾರದಿಂದ "ನಾಮಧಾರಿ ಅಭಿವೃದ್ಧಿ ಸಂಘ (ರಿ) ಹೊನ್ನಾವರ (ಉ.ಕ.)" ಸ್ಥಾಪಿಸಿ ಸಮಾಜವನ್ನು ಸಂಘಟಿಸಿದರು. ಸಂಘ ಹೊನ್ನಾವರ ನಗರದ ಹೃದಯ ಭಾಗದಲ್ಲಿ ಸರಕಾರದಿಂದ 12 ಗುಂಟೆ ಸ್ಥಳವನ್ನು ಮಂಜೂರಿ ಪಡೆದು ಸಮಾಜದ ಮಕ್ಕಳಿಗಾಗಿ ಒಂದು ವಿದ್ಯಾರ್ಥಿ ನಿಲಯವನ್ನು ದೇಣಿಗೆ ಹಣದಿಂದ ಕಟ್ಟಿಸಿ ಬಡವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡುವ ಅವಕಾಶದ ಹೆಬ್ಬಾಗಿಲನ್ನು ತೆರೆದಿಟ್ಟಿತ್ತು. ಈ ವಿದ್ಯಾರ್ಥಿ ನಿಲಯದಲ್ಲಿ ಸಹಸ್ರ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯೆ ಕಲಿತು ಉದ್ಯೋಗಸ್ಥರಾಗಿದ್ದಾರೆ.

logo

ಈ ಸಂಘಕ್ಕೆ ಈಗ ಐವತ್ತರ ಹರೆಯದ (1966 -2016 )ಸುವರ್ಣ ಕ್ಷಣ. ಈ ಐವತ್ತು ವರ್ಷಗಳಲ್ಲಿ ಸಮಾಜ ಸರ್ವತೋಮುಖವಾಗಿ ಗಣನೀಯವಾಗಿ ಬೆಳೆದಿದೆ. ಹಳೆಯ ವಿದ್ಯಾರ್ಥಿ ನಿಲಯದ ಸ್ಥಳದಲ್ಲೇ ಸಂಪೂರ್ಣ ಸಮಾಜದ ಉಪಯೋಗಕ್ಕಾಗಿ ಅತ್ಯಂತ ಸುಸಜ್ಜಿತವಾಗಿ, ವಿಶಾಲವಾದ ಸುಂದರ ಸಭಾಭವನವನ್ನು ನಿರ್ಮಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ಈ ಬ್ರಹತ್ ಕಾರ್ಯಕ್ಕೆ ಸುಮಾರು 5 ಕೋಟಿ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ಈ ಬ್ರಹತ್ ಕಟ್ಟಡ ನಿರ್ಮಾಣ ಮತ್ತು ಉಳಿದೆಲ್ಲ ಕಾರ್ಯಗಳ ಸುಸೂತ್ರ ನಿರ್ವಹಣೆಗೆ ತಾಲ್ಲೂಕಿನಾದ್ಯಂತ ಇರುವ ಸಮಾಜದ ಎಲ್ಲ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ "ನಾಮಧಾರಿ ವಿದ್ಯಾರ್ಥಿನಿಲಯ ಮತ್ತು ಸಭಾಭವನ ಕಟ್ಟಡ ಸಮಿತಿ, ಹೊನ್ನಾವರ (ಉ.ಕ.)" ಎಂಬ ಸ್ವತಂತ್ರ ಸಮಿತಿಯನ್ನು ರಚಿಸಲಾಗಿದೆ ಮತ್ತು ಕಟ್ಟಡ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಲಾಗಿದೆಯಂತೆ.
logo
ಈಗ ಸಮಿತಿಯು ಈ ಬ್ರಹತ್ ಕಾರ್ಯಕ್ಕೆ ದೇಣಿಗೆಯನ್ನು ಸಂಗ್ರಹಿಸುತಿದ್ದು, ದಾನಿಗಳು ಒಂದು ಕೋಣೆಗೆ ರೂಪಾಯಿ 5 ಲಕ್ಷ ನೀಡಿ ಆ ಕೋಣೆಗೆ ತಮ್ಮ ಹೆಸರು ದಾಖಲಿಸಿ ಮಹಾಪೋಷಕರಾಗುವ ಅವಕಾಶವಿದೆಯಂತೆ. ಕಂತಿನ ರೂಪದಲ್ಲಿಯೂ ಆ ಹಣವನ್ನು ಸಂದಾಯ ಮಾಡುವ ಅವಕಾಶ ಕಲ್ಪಿಸಲಾಗಿದೆಯಂತೆ. ಈ ಕುರಿತು ಮಾಹಿತಿಯನ್ನು ನ್ಯೂ.ನಾಮಧಾರಿ.ಕಂ ನೊಂದಿಗೆ ಮಾಹಿತಿ ಹಂಚಿಕೊಂಡ ಕಟ್ಟಡ ನಿರ್ಮಾಣ ಸಮಿತಿಯ ಖಜಾಂಚಿ ಶ್ರೀ ಎಂ ಜಿ ನಾಯ್ಕ ರವರು, ಸಮಾಜಭಾಂದವರಲ್ಲಿ ಸಮಿತಿ ಪರವಾಗಿ ತಮ್ಮ ಸವಿನಯ ಮನವಿಮಾಡಿಕೊಂಡಿದ್ದಾರೆ. "ಒಂದು ಕೋಣೆಗೆ ರೂಪಾಯಿ 5 ಲಕ್ಷ ನೀಡಿ ಆ ಕೋಣೆಗೆ ತಮ್ಮ ಹಿರಿಯರ ಹೆಸರು ದಾಖಲಿಸಿ ಮಹಾಪೋಷಕರಾಗಿ, ತಮ್ಮ ಹಿರಿಯರಿಗೆ ನೀವು ಕೊಡುವ ಶಾಶ್ವತ ನೆನಪಿನ ಕೊಡುಗೆ ಇದಾಗಲಿ, ದಾನಿಗಳಿಂದ ಹಿಡಿದು ಮಹಾಪೋಷಕರಾಗುವ ಎಲ್ಲ ಅವಕಾಶ ತಮಗಿದೆ. ಆಯ್ಕೆ ತಮ್ಮದು ...ಬಲವಂತ ಇಲ್ಲ" ಎಂದು ನಮ್ಮ ಸವಿನಯ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗೆ 9449264205 ಫೋನ್ ನಂಬರ್ ನಲ್ಲಿ ಶ್ರೀ ಎಂ ಜಿ ನಾಯ್ಕ ಅವರನ್ನು ಸಂಪರ್ಕಿಸಬಹುದಾಗಿದೆ.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್