ನಾಮಧಾರಿ ವಿದ್ಯಾರ್ಥಿಗಳು ಪ್ರಶಂಸಾರ್ಹ ಸಾಧನೆ ಮಾಡಿದ್ದು SSLC ಯಲ್ಲಿ 6 ರಾಂಕ್
By: Hareesh.N
ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಪ್ರತಿ ವರ್ಷವೂ SSLC PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡುತ್ತಾ ಬಂದಿದ್ದು ಈ ವರ್ಷವೂ ಈ ಒಳ್ಳೆಯ ಕಾರ್ಯವನ್ನು ಮುಂದುವರಿಸಿ ಕೊಂಡುಹೋಗುವ ನಿಟ್ಟಿನಲ್ಲಿ ಅರ್ಜಿಯನ್ನು ಆಹ್ವಾನಮಾಡಲಾಗಿತ್ತು. ಈ ಕುರಿತು ನ್ಯೂಸ್.ನಾಮಧಾರಿ.ಕಂ ನಲ್ಲಿ ಪ್ರಕಟಣೆಯನ್ನು ಪ್ರಕಟಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕ ಅರ್ಜಿಗಳ ಪೈಕಿ PUC ಮತ್ತು SSLC ಯಲ್ಲಿ ಕ್ರಮವಾಗಿ 19 ಮತ್ತು 45 ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ನಾಮಧಾರಿ ಸಮುದಾಯದ ವಿದ್ಯಾರ್ಥಿಗಳು ಪ್ರಶಂಸಾರ್ಹ ಸಾಧನೆ ಮಾಡಿದ್ದು SSLC ಯಲ್ಲಿ 6 ರಾಂಕ್ ಗಳಿಸಿದ್ದಾರೆ ಎಂಬುದು ತುಂಬಾ ಹೆಮ್ಮೆಯ ವಿಷಯವಾಗಿದೆ. ರಾಂಕ್ ಪಡೆದವರು,
1. ನಂದಿನಿ ಎಂ. ನಾಯ್ಕ, ಕುಮಟಾ - ಎರಡನೇ ರಾಂಕ್
2. ಭಾರ್ಗವ್ ಲಕ್ಷ್ಮೀನಾರಾಯಣ ನಾಯ್ಕ, ಕುಮಟಾ - ನಾಲ್ಕನೇ ರಾಂಕ್
3. ದಿಶಾ ಮೋಹನ ನಾಯ್ಕ, ಹೊನ್ನಾವರ - ನಾಲ್ಕನೇ ರಾಂಕ್
4. ಪೂರ್ವಿ ಮಂಜುನಾಥ ನಾಯ್ಕ, ಮುರುಡೇಶ್ವರ - ಆರನೇ ರಾಂಕ್
5. ವಿನಯಾ ಅಶೋಕ ನಾಯ್ಕ, ಹೊನ್ನಾವರ - ಏಳನೇ ರಾಂಕ್
6. ಮೇಘನಾ ಜಿ ಕೆ, ಬಂಕಿಕೊಡ್ಲ - (ರಾಂಕ್ ಖಾತ್ರಿ ಪಡಿಸಿಲ್ಲ)
"ಈ ರೀತಿ ಸಮುದಾಯದ ಹೆಮ್ಮೆಗೆ ಪಾತ್ರವಾದ ಪ್ರತಿಭೆಗಳನ್ನು ಸಾದ್ಯವಾದ ಮಟ್ಟಿಗೆ ಪುರಸ್ಕರಿಸಲು ಸಂಘವು ಇಚ್ಛಿಸಿರುತ್ತದೆ. ಈ ನಿಟ್ಟಿನಲ್ಲಿ ಯಾರಾದರೂ ಧಾನಿಗಳು ತಮ್ಮ ಕೈಲಾದಷ್ಟು ಧನ ಸಹಾಯಮಾಡಲು ಇಚ್ಛಿಸಿದಲ್ಲಿ ಸಂಘಕ್ಕೆ ಚೆಕ್ ಮೂಲಕ / NEFT ಮೂಲಕ ಹಣ ಪಾವತಿಮಾಡಬೇಕೆಂದು ಕೋರಿಕೆ" ಎಂದು ಸಂಘದ ಕಾರ್ಯದರ್ಶಿ ಶ್ರೀ ಡಿ.ಕೆ. ನಾಯಕರವರು ಮನವಿ ಮಾಡಿದ್ದಾರೆ. ದಾನಿಗಳಿಗೆ ರಸೀದಿ ತಕ್ಕ ರೀಸಿದಿ ನೀಡುವುದಲ್ಲದೆ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಹೆಚ್ಚಿನ ವಿವರಕ್ಕೆ ಸಂಪರ್ಕಿಸಿ: ಶ್ರೀ ಡಿ.ಕೆ. ನಾಯಕ, ಕಾರ್ಯದರ್ಶಿಗಳು - 9900324053, 8041684578.
Bank details of net transfer
Beneficiary: Namadhari welfare association
AN A/C No: 06622010016753.
IFSC : SYNB0000662
Bank: Syndicate bank R M V Layout Bangalore 560094