ದಾನಿಗಳಿಂದ ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆಗೆ ದೇಣಿಗೆ
By: Purushottam Timmanna Nayak
ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆ.
ಯಲ್ಲಾಪುರ (ಉತ್ತರ ಕನ್ನಡ)
ಮಾನ್ಯ ಸಮಾಜ ಬಾಂಧವರಲ್ಲಿ ಸವಿನಯ ವಿನಂತಿ.
ಈ ಹಿಂದೆ ನಮ್ಮ ಸೇವಾ ಸಂಸ್ಥೆಯ ಪರವಾಗಿ ತಮ್ಮೆಲ್ಲರಿಂದ ಆರ್ಥಿಕ ಸಹಾಯವನ್ನು ಅಪೇಕ್ಷಿಸಿ ಒಂದು ಮನವಿಯನ್ನು ಹಾಕಿದ್ದೆವು. ನಮ್ಮ ಸಂಸ್ಥೆಯ ಸದಸ್ಯರೆಲ್ಲರೂ ಸೇರಿ ಸಾಧ್ಯವಾದ ಮಟ್ಟಿಗೆ ವರ್ಗಣಿ ಸೇರಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳಿಗೆ ಕಿಂಚಿತ್ ಆರ್ಥಿಕ ನೆರವು ನೀಡುವ ವಿಚಾರ ಮಾಡಿದ್ದೇವೆ. ಈಗಾಗಲೇ ತಮ್ಮ ಮುಂದಿನ ವಿದ್ಯಾಭ್ಯಾಸದ ಸಲುವಾಗಿ ನೆರವು ಅಪೇಕ್ಷಿಸಿ ಕೆಲವು ಬೇಡಿಕೆಗಳು ನಮ್ಮ ಜಿಲ್ಹೆಯ ಎಲ್ಲ ತಾಲೂಕುಗಳಿಂದ ಬಂದಿವೆ. ಅವುಗಳು ಪರಿಶೀಲನೆಯ ಹಂತದಲ್ಲಿವೆ. ಇನ್ನೂ ಹಲವು ವಿನಂತಿಗಳು ಬರಬಹುದು. ತನ್ಮಧ್ಯೆ ನಾವು ಸಂಪನ್ಮೂಲ ಕ್ರೋಢೀಕರಣ ಪ್ರಾರಂಭಿಸಿ ಸಮಾಜದ ದಾನಿಗಳಲ್ಲಿ ಹಾಗೂ ಮುಖಂಡರಲ್ಲಿ ತಮ್ಮಯ ಶಕ್ಯಾನುಸಾರ ಸಹಾಯ ಮಾಡಲು ವಿನಂತಿಸುತ್ತಿದ್ದೇವೆ. ದಯವಿಟ್ಟು ಈ ಕೈಂಕರ್ಯದಲ್ಲಿ ಸಹಾಯಹಸ್ತ ನೀಡಿ ಸಮಾಜದ ಬಡ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವಾಗಿ.
ಈ ಹಿಂದೆ ನಮ್ಮ ಸಂಸ್ಥೆಯ ವಿನಂತಿಗೆ ಈ ಕೆಳಗೆ ನಮೂದಿಸಿದ ಇಬ್ಬರು ಮಹನೀಯರು ಸ್ಪಂದಿಸಿ ನಮ್ಮ ಸೇವಾ ಸಂಸ್ಥೆಯ ಖಾತೆಗೆ ತಮ್ಮ ಸಹಾಯದ ಮೊತ್ತವನ್ನು ಜಮೆ ಮಾಡಿದ್ದಾರೆ. ಅವರಿಗೆ, ನಮ್ಮ ಸಂಸ್ಥೆಯ ಹಾಗೂ ಬಡ ವಿದ್ಯಾರ್ಥಿಗಳ ಪರವಾಗಿ ಹಾರ್ದಿಕ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ.
1. ಶ್ರೀಯುತ ಎಚ್. ಕೆ. ನಾಯ್ಕ(ತದಡಿ). ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳು ಸಿರ್ಸಿ. Rs. 1,000/-
೨. ಡಾ. ಅಶ್ವಥ್ ದೇವರಾಯ ನಾಯ್ಕ ಪಿ.ಎಚ್.ಡಿ. (ಅಳವೇಕೋಡಿ.ಕುಮಟಾ) Rs. 1,000/-
ದಾನಿಗಳ ಅನುಕೂಲಕ್ಕಾಗಿ ಈ ಹಿಂದೆ ನೀಡಿದ ಪ್ರಕಟಣೆಯನ್ನು ಪುನರಾವರ್ತಿಸಿದ್ದೇವೆ. ದಯವಿಟ್ಟು ಸ್ಪಂದಿಸಿ ಹಾಗೂ ಬಡ ವಿದ್ಯಾರ್ಥಿಗಳಿಗೆ ನಿಮ್ಮ ನೆರವು ನೀಡಿ.
ಶ್ರೀ ಪುರುಷೋತ್ತಮ ಟಿ. ನಾಯಕ
ಅಧ್ಯಕ್ಷರು.
ಹಾಗೂ ಸಂಸ್ಥೆಯ ಪದಾಧಿಕಾರಿಗಳು