logo

ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆ, ಯಲ್ಲಾಪುರ ವತಿಯಿಂದ ವಿನಂತಿ

By: Purushottam Timmanna Nayak
ಮಾನ್ಯ ಸಮಾಜ ಬಾಂಧವರಲ್ಲಿ ಸವಿನಯ ವಿನಂತಿ.

ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆ, ಯಲ್ಲಾಪುರ ಇದು ಒಂದು ಸಾರ್ವಜನಿಕ ಸಂಸ್ಥೆಯಾಗಿದ್ದು ಶ್ರೀ ಪುರುಷೋತ್ತಮ ನಾಯಕರ ಅಧ್ಯಕ್ಷತೆ ಹಾಗೂ ಪೋಷಣೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಸಂಸ್ಥೆಯ ಸದಸ್ಯರ ಸಹಕಾರದಿಂದ, ಕಿಂಚಿತ್ ಧನಸಹಾಯವನ್ನು ಮಾಡುತ್ತಾ ಬಂದಿದೆ. ಈ ವರ್ಷವೂ ಸಹ, ಈ ಕಾರ್ಯವನ್ನು ಸಮಾನ ಮನಸ್ಕ ಸಂಘಸಂಸ್ಥೆಗಳ ಹಾಗೂ ದಾನಿಗಳ ಸಹಕಾರ/ನೆರವಿನಿಂದ ಮುಂದುವರಿಕೆ ಮಾಡುವ ಉದ್ದೇಶ ಹೊಂದಿದ್ದೇವೆ. ಎಲ್ಲರ ಸಹಕಾರ, ಅಸಹಾಯಕ ಬಡ ವಿದ್ಯಾರ್ಥಿಗಳಿಗೆ ಕಿಂಚಿತ್ ಪ್ರಯೋಜನ ಆಗಬಹುದೆಂಬ ನಿರೀಕ್ಷೆ ನಮ್ಮದು. ಅದರೊಂದಿಗೇ, ವಿದ್ಯಾರ್ಜನೆಗೆ ಕಿಂಚಿತ್ ಬೆಂಬಲ ನೀಡಿದ ಸಾರ್ಥಕತೆಯೂ ಸಹ ನಿಮ್ಮ, ನಮ್ಮದಾಗುವ ನಿರೀಕ್ಷೆ ಇದೆ.

ಆಸಕ್ತ ಬಂಧುಗಳು ತಮ್ಮ ಶಕ್ತಿಗೆ ಹಾಗೂ ವಿವೇಚನೆಗೆ ಅನುಸಾರವಾಗಿ, ಎಷ್ಟೇ ಚಿಕ್ಕ ಮೊತ್ತ ಆದರೂ ಸರಿ, ಈ ಕೆಳಗೆ ತೋರಿಸಿದ ಉಳಿತಾಯ ಖಾತೆಗೆ ಜಮಾ ಮಾಡಬಹುದು. ಇದಕ್ಕೆ ಯಾವದೇ ರೀತಿಯ ಒತ್ತಾಯವಿಲ್ಲ. ಈ ಸತ್ಕಾರ್ಯದಲ್ಲಿ ದಾನಿಗಳ ಸಹಕಾರ ನಮಗೆ ಹೆಚ್ಚಿನ ಬಲ ನೀಡುತ್ತದೆ. ನಿಮಗೆ ಅನುಕೂಲವಾದಾಗಲೆಲ್ಲ ಸಾಧ್ಯವಾದ ಸಹಕಾರ ಮುಂದುವರಿಸುವಿರೆಂದು ಆಶಿಸುತ್ತೇವೆ. ದಯವಿಟ್ಟು ಸ್ಪಂದಿಸಿ, ಸಹಕರಿಸಿ.

ವಂದನೆಗಳೊಂದಿಗೆ,
ಬ್ರಹ್ಮರ್ಷಿ ನಾರಾಯಣಗುರು ಸೇವಾ ಸಂಸ್ಥೆ. ಯಲ್ಲಾಪುರ. (ಉ.ಕ.)
ಜಂಟೀ ಉಳಿತಾಯ ಖಾತೆ ಸಂಖ್ಯೆ
32374836327
IFSC. SBIN0001315
ಭಾರತೀಯ ಸ್ಟೇಟ್ ಬ್ಯಾಂಕ್,
ಯಲ್ಲಾಪುರ ಶಾಖೆ.

ವಿ.ಸೂ.: ಸ್ಟೇಟ್ ಬ್ಯಾಂಕ್ ಏಟಿಎಮ್ ಕಾರ್ಡಿನಿಂದ POS ಯಂತ್ರದ ಮೂಲಕ ನೇರವಾಗಿ ಉದ್ದೇಶಿತ ಮೊತ್ತವನ್ನು ತಮಗೆ ಅನುಕೂಲ ಎನಿಸಿದಾಗ ಜಮಾ ಮಾಡಬಹುದು.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್