Paneer | ಪನೀರ್ ಕ್ಯಾಪ್ಸಿಕಂ ಮಸಾಲ
By: Nitya
ಬೇಕಾಗುವ ಸಾಮಾಗ್ರಿಗಳು:
200gm ಪನೀರ್ ,
ಈರುಳ್ಳಿ 2-3 ,
ಟಮೋಟೋ ನಾಲ್ಕು ,
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮೂರು ಚಮಚ,
ಚಕ್ಕೆಲವಂಗ+ ಏಲಕ್ಕಿ +ಜೀರಿಗೆ, ಸ್ವಲ್ಪ ....
ಧನಿಯಾ ಪುಡಿ ಒಂದು ಚಮಚ ,
ಮೆಣಸಿನಕಾಯಿ ಪುಡಿ ಎರಡು ಚಮಚ,
ಗರಂ ಮಸಾಲೆ ಪುಡಿ ಮುಕ್ಕಾಲು ಚಮಚ ,
ಕಸೂರಿ ಮೇಥಿ ಸ್ವಲ್ಪ ,
ಪುದೀನಾ +ಕೊತ್ತಂಬರಿಸೊಪ್ಪು ಸ್ವಲ್ಪ,
ಟಮೋಟೋ ಸಾಸ್ ಎರಡು ಚಮಚ ,
ಕಾರ್ನ್ ಫ್ಲೋರ್ ನೀರು ಅರ್ಧ ಲೋಟ,
ಉಪ್ಪು ರುಚಿಗೆ ,
ಕರಗಿಸಿದ ಬೆಣ್ಣೆ ನಾಲ್ಕು ಚಮಚದಷ್ಟು

ಮಾಡುವ ವಿಧಾನ:
ಈರುಳ್ಳಿ ಟಮೋಟೋ ಬೇರೆ ಬೇರೆಯಾಗಿ ಕೆಂಪಾಗಿ ಹುರಿದು ಪೇಸ್ಟ್ ಮಾಡಿಕೊಳ್ಳಿ
ಬಾಣಲಿಗೆ ಎಣ್ಣೆ ಹಾಕಿ ಜೀರಿಗೆ ಏಲಕ್ಕಿ ಚಕ್ಕೆಲವಂಗ ಈರುಳ್ಳಿ ಪೇಸ್ಟ್ ಹಾಕಿ ಘಮ್ ವಾಸನೆ ಬರುವರೆಗೆ ಹುರಿಯಿರಿ
ಇದಕ್ಕೆ ಬೇಕಾದಲ್ಲಿ ಪಲಾವ್ ಪತ್ರೆ ಹಾಕಿ ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ , ಟಮೋಟೋ ಪೇಸ್ಟ್ ಹಾಕಿ ಹುರಿಯಿರಿ
ನಂತರ ಧನಿಯಾ/ಮೆಣಸಿನಕಾಯಿ/ಗರಂಮಸಾಲ ಪುಡಿಗಳನ್ನು ಹಾಕಿ
ಟಮೋಟೋ ಸಾಸ್ ಸಹ ಹಾಕಿ ಕುದಿಸಿ
ಇದಕ್ಕೆ ಕಸೂರಿಮೇಥಿ ಹಾಕಿ
ಕಾರ್ನ್ ಫ್ಲೋರ್ ನೀರು ಬೆರೆಸಿ ಗಟ್ಟಿಯಾದ ಗ್ರೇವಿ ಆಗುತ್ತದೆ
ಪುದೀನಾ ಕೊತ್ತಂಬರಿ ಸೊಪ್ಪು ಉದುರಿಸಿ
ಬೆರೆ fry pan ಅಲ್ಲಿ ಸ್ವಲ್ಪ ಎಣ್ಣೆ ಬಿಟ್ಟು ಕತ್ತರಿಸಿದ ಪನೀರ್ ರೋಸ್ಟ್ ಮಾಡಿಕೊಳ್ಳಿ
ಅದನ್ನೂ ಸಹ ಗ್ರೇವಿ ಇಳಿಸುವ ಮುನ್ನವೇ ಹಾಕಿ ಸ್ಟೌ ಆಫ್ ಮಾಡಿದ ನಂತರ ಬೆಣ್ಣೆ ಹಾಕಿ
ಇದನ್ನು ಪೂರಿ/ಚಪಾತಿ/ರೋಟಿ/ನಾನ್/ಕುಲ್ಚಾ ಜೊತೆ ಸವಿಯಿರಿ