ರುಚಿಯಾದ ಪಡ್ಡು -
By: Deepa M
ಬೇಕಾಗುವ ಸಾಮಾನು"
ನಾಲ್ಕು ಲೋಟ ಅಕ್ಕಿ,
ಅರ್ಧ ಬಟ್ಟಲು ಉದ್ದಿನ ಬೇಳೆ,
ಕಾಲು ಬಟ್ಟಲು ಕಡಲೆಬೇಳೆ,
ಎರಡು ಚಮಚದಷ್ಟು ಮೆಂತೆ,
ಎಲ್ಲವನ್ನೂ ನೀರಿನಲ್ಲಿ ನೆನೆಸಿ ಇಡಬೇಕು ,
4 ತಾಸಿನ ನಂತರ ನುಣ್ಣಗೆ ರುಬ್ಬಿಕೊಳ್ಳಿ,
12 ತಾಸು ಹುಳಿಯಾಗಲು ಬಿಡಬೇಕು,
ಮಾಡುವ ವಿಧಾನ-
ರುಬ್ಬಿಟ್ಟ ಹಿಟ್ಟಿಗೆ ಈರುಳ್ಳಿ ಮತ್ತು ಸೌತೆಕಾಯಿ ಹಸಿಮೆಣಸು ಹಸಿ ಶುಂಠಿ ಕರಿಬೇವು ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚ್ಚಿ ಹಾಕಬೇಕು.
ಉಪ್ಪು ಹಾಕಿ ಗೊಟಾಯಿಸಿ
ಪಡ್ಡಿನ ಕಾವಲಿಗೆ ಹಾಕಿ, ಮೇಲೆ ಮುಚ್ಚಳವನ್ನು ಮುಚ್ಚಬೇಕು.
ಪಡ್ಡು ರೆಡಿ.

ಚಟ್ನಗೆ ಬೇಕಾಗುವ ಸಾಮಾನು ,
ಅರ್ಧ ಹೋಳು ಕಾಯಿತುರಿ,
4 ಹಸಿಮೆಣಸು,
ಚೂರು ಹುಣಸೆ ರಸ,
ಉಪ್ಪು,
ಚೂರು ಶುಂಠಿ
ಚಟ್ನ ಮಾಡುವ ವಿಧಾನ-
ಎಲ್ಲ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ, ಅದಕ್ಕೆ ಒಣಮೆಣಸು ಕರಿಬೇವು ,ಇಂಗು ಹಾಕಿ ಒಗ್ಗರಣೆ ಕೊಡಿ .
ಪಡ್ಡು , ಚಟ್ನಿ ಸವಿಯಲು ಸಿದ್ಧ.