ರವೆ ಇಡ್ಲಿ | Rava idli
By: ಮಮತಾ
ರವೆ ಇಡ್ಲಿ | Rava idli
ಸಾಮಗ್ರಿಗಳು
ಲೋಕಲ್ ರವೆ - 1 ಕಪ್
ಮೊಸರು - 1 ಕಪ್
ಈರುಳ್ಳಿ - ಸ್ವಲ್ಪ
ಶುಂಠಿ - ಒಂದು ಇಂಚು
ಗೋಡಂಬಿ - 6
ಕ್ಯಾರೇಟ್ ತುರಿದದ್ದು - ಸ್ವಲ್ಪ
ತೆಂಗಿನ ತುರಿ - ಸ್ವಲ್ಪ
ಕರಿಬೇವು - ಸ್ವಲ್ಪ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಟೊಮ್ಯಾಟೊ 1
ಕಡಲೆ ಬೇಳೆ - ಸ್ವಲ್ಪ
ಉದ್ದಿನ ಬೇಳೆ - ಸ್ವಲ್ಪ
ಉಪ್ಪು - ಸ್ವಲ್ಪ
ಎಣ್ಣೆ - 2 ಸ್ಪೂನ್
ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕಡಲೆ ಬೇಳೆ, ಉದ್ದಿನ ಬೇಳೆ, ಶುಂಠಿ, ಕರಿಬೇವು, ಕತ್ತರಿಸಿದ ಈರುಳ್ಳಿ, ಸೇರಿಸಿ ಸ್ವಲ್ಪ ಬಾಡಿಸಿ.
2. ಇದಕ್ಕೆ ರವೆ ಸೇರಿಸಿ 2 ನಿಮಿಷ ಹುರಿಯಿರಿ.
3. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಸೋಡಾ ಹಾಕಿ ಮಿಕ್ಸ್ ಮಾಡಿ.
4. ಇದು ತಣ್ಣಗಾದ ಮೇಲೆ ಮೊಸರು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಿಡಿ.
5. ಈ ಹಿಟ್ಟು ಇಡ್ಲಿ ಹಿಟ್ಟಿನ ಹದವಿರಬೇಕು. ಇಪ್ಪತ್ತು ನಿಮಿಷಗಳ ನಂತರ ಇಡ್ಲಿ ತಟ್ಟೆಯಲ್ಲಿ ಕೊತ್ತಂಬರಿ ಸೊಪ್ಪು, ತೆಂಗಿನ ತುರಿಯನ್ನು ಹಾಕಿ, ಅದರ ಮೇಲೆ ಇಡ್ಲಿ ಹಿಟ್ಟನ್ನೂ ಸುರಿದು ಹಬೆಯಲ್ಲಿ ಬೇಯಿಸಿ.