ಸಿಹಿ ಅಕ್ಕಿ ಶಾವಿಗೆ
By: Veena
ಬೇಕಾಗುವ ಪದಾರ್ಥಗಳು:
ಉಪ್ಪು
ಅಕ್ಕಿ
ಬೆಲ್ಲ
ಮಾಡುವ ವಿಧಾನ:
1. ಅಕ್ಕಿಯನ್ನು ಒಂದೆರಡು ಗಂಟೆ ನೆನೆಸಬೇಕು.
2. ನಂತರ ಅಕ್ಕಿಯನ್ನು ದೋಸೆ ಹಿಟ್ಟಿನ ಹದಕ್ಕೆ ಬೀಸಿ.
3. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು + ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಪಾತ್ರೆಯನ್ನು ಒಲೆಯ ಮೇಲಿಟ್ಟು, ಮಿಶ್ರಣ ಗಟ್ಟಿಯಾಗುವವರೆಗೆ ಕಲಕಬೇಕು.
4. ಮಿಶ್ರಣವನ್ನು ಉಂಡೆಯಾಕಾರ ಮಾಡಿ, ಕುಕ್ಕರ್ ನಲ್ಲಿಟ್ಟು, (ಕುಕ್ಕರ್ ನ ವೇಟ್ ಹಾಕಬೇಡಿ) ಉಗಿ ಬರುವವರೆಗೆ ಇಡಬೇಕು.
ಈಗ ಶಾವಿಗೆ ಒರಳಿನಲ್ಲಿ ಹಾಕಿದರೆ ಸಿಹಿ ಶಾವಿಗೆ ರೆಡಿ.