logo

ಮೈಸೂರ್ ಪಾಕ್

By: Pavitra S
ಮೈಸೂರ್ ಪಾಕ್ ತಯಾರಿಸಲು ಬೇಕಾಗುವ ಪದಾರ್ಥಗಳು
ತುಪ್ಪ – ಒಂದೂವರೆ ಬಟ್ಟಲು
ಕಡಲೆ ಹಿಟ್ಟು – 1 ಬಟ್ಟಲು
ಸಕ್ಕರೆ – 2 ಬಟ್ಟಲು

ಮೈಸೂರ್ ಪಾಕ್ ತಯಾರಿಸುವ ವಿಧಾನ

- ಒಂದು ದಪ್ಪ ತಳದ ಪಾತ್ರೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಕಡಲೆಹಿಟ್ಟನ್ನು ಹಸಿ ವಾಸನೆ ಹೋಗುವ ವರೆಗೆ ಹುರಿದುಕೊಳ್ಳಿ. ಹುರಿದ ಹಿಟ್ಟನ್ನು ಒಂದು ತಟ್ಟೆಯಲ್ಲಿ ತೆಗೆದಿಡಿ.
- ಒಲೆಯ ಮೇಲೆ ಪಾತ್ರೆಯಿಟ್ಟು ನೀರನ್ನು ಬಿಸಿ ಮಾಡಿಕೊಳ್ಳಬೇಕು. ನಂತರ ಸಕ್ಕರೆಯನ್ನು ಹಾಕಬೇಕು. ಒಂದು ಎಳೆ ಪಾಕ ಬರುವವರೆಗೆ ಪಾಕ ತಯಾರಿಸಿ.
- ಇದಕ್ಕೆ ಸ್ವಲ್ಪ ಸ್ವಲ್ಪ ಹುರಿದ ಹಿಟ್ಟನ್ನು ಸೇರಿಸಿ. ಎಲ್ಲ ಹಿಟ್ಟು ಪಾಕದಲ್ಲಿ ಚೆನ್ನಾಗಿ ಹೊಂದಿಕೊಂಡ ನಂತರ, ಸ್ವಲ್ಪ ಸ್ವಲ್ಪ ಬಿಸಿ ತುಪ್ಪ ಸೇರಿಸುತ್ತಾ ಹಾಗೆಯೇ ಚೆನ್ನಾಗಿ ಕೈ ಆಡಿಸುತ್ತ ಬನ್ನಿ. (ಗಂಟಾಗದಂತೆ ಚೆನ್ನಾಗಿ ತಿರುವುತ್ತಿರಬೇಕು.) ಎಲ್ಲ ತುಪ್ಪ ಮುಗಿಯುವವರೆಗೆ ತಳ ಬಿಡುತ್ತದೆ,
- ತಳಹಿಡಿಯದಂತೆಯೇ 10-15 ನಿಮಿಷ ಒಲೆಯ ಮೇಲಿಟ್ಟು ಇಳಿಸಬೇಕು.
- ತಟ್ಟೆಯೊಂದನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸವರಿ, ತಯಾರಾದ ಮೈಸೂರ್ ಪಾಕನ್ನು ಹಾಕಿ ತಣ್ಣಗಾಗಲು ಬಿಡಬೇಕು.
- 1 ಗಂಟೆ ಬಳಿಕ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿಕರವಾದ ಹಾಗೂ ವಿಶೇಷವಾದ ಮೈಸೂರ್ ಪಾಕ್ ಸವಿಯಲು ಸಿದ್ಧ.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್