ಮದ್ದೂರು ವಡೆ
By: Shymala S. naik
ಬೇಕಾಗುವ ಪದಾರ್ಥಗಳು:
ಅಕ್ಕಿ ಹಿಟ್ಟು- ಒಂದು ಕಪ್ (ಮೀಡಿಯಂ ಕಪ್)
ಹುರಿದ ಚಿರೋಟಿ ರವೆ- ಅರ್ಧ ಕಪ್
ಮೈದಾ ಹಿಟ್ಟು- ಕಾಲು ಕಪ್
ಗೋಧಿ ಹಿಟ್ಟು- ಮೂರು ಚಮಚ
ತೆಂಗಿನ ತುರಿ- ಒಂದು ಹೋಳು
ಹಸಿ ಮೆಣಸಿನ ಕಾಯಿ-3-4
ಈರುಳ್ಳಿ- ಒಂದು (ದೊಡ್ಡದು)
ಕರಿಬೇವು- ಅರ್ಧ ಕಂತೆ (ಕಟ್ಟು)
ತುಪ್ಪ- 4-5 ಚಮಚ
ಕರಿಯಲು ಎಣ್ಣೆ
ಸೋಡ- ಚಿಟಕಿ
ಉಪ್ಪು- ರುಚಿಗೆ ತಕ್ಕಷ್ಟು
1. ಮೂರು ಬಗೆಯ ಹಿಟ್ಟುಗಳನ್ನೂ, ಹುರಿದಿಟ್ಟ ಚಿರೋಟಿ ರವೆಯನ್ನೂ ಒಟ್ಟುಗೂಡಿಸಿ ಒಂದು ಫ್ರೈಯಿಂಗ್ ಪ್ಯಾನ್‍ಲ್ಲಿ ಕೇವಲ 2-3 ನಿಮಿಷ ಸ್ವಲ್ಪ ಬಿಸಿಯಾಗುವಂತೆ ಹುರಿದುಕೊಳ್ಳಿ.
2. ಈಗ ಅವನ್ನೆಲ್ಲಾ ಒಂದು ಅಗಲವಾದ ಪಾತ್ರೆಗೆ ವರ್ಗಾಯಿಸಿ. 4-5 ಚಮಚ ತುಪ್ಪವನ್ನು ಕರಗಿಸಿ ಈ ಹಿಟ್ಟುಗಳ ಮಿಶ್ರಣಕ್ಕೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನೂ, ಚಿಟಕಿ ಸೋಡವನ್ನೂ ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
3. ತೆಂಗಿನ ತುರಿ ಮತ್ತು ಹಸಿ ಮೆಣಸನ್ನು ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿ ಮೇಲಿನ ಹಿಟ್ಟಿನ ಮಿಶ್ರಣಕ್ಕೆ ಹಾಕಿ, ಚಪಾತಿ ಹಿಟ್ಟಿನ ಹದದಲ್ಲಿ ಚೆನ್ನಾಗಿ ಕಲಸಿಕೊಳ್ಳಿ. ಹೀಗೆ ಕಲಸಿದಂತಹ ಹಿಟ್ಟನ್ನು ಎರಡು ಭಾಗಗಳನ್ನಾಗಿ ಮಾಡಿಡಿ.
4. ಈರುಳ್ಳಿ, ಕರಿಬೇವನ್ನು ಸಣ್ಣಗೆ ಹೆಚ್ಚಿ ಅದನ್ನೂ ಎರಡು ಭಾಗ ಮಾಡಿ. ಕಲಸಿಟ್ಟ ಹಿಟ್ಟಿನ ಒಂದು ಭಾಗಕ್ಕೆ ಹೆಚ್ಚಿದ ಈರುಳ್ಳಿ, ಕರಿಬೇವಿನ ಒಂದು ಭಾಗ ಹಾಕಿ ಕಲಸಿಕೊಂಡು ಉಂಡೆ ಮಾಡಿ.
5. ಸ್ಟವ್ ಮೇಲೆ ಫ್ರೈಯಿಂಗ್ ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾದಾಗ, ಮಾಡಿಟ್ಟ ಉಂಡೆಯನ್ನು ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಮುಟ್ಟಿಕೊಂಡು, ಪೂರಿಯಷ್ಟು ದೊಡ್ಡದಾಗಿ ತಟ್ಟಿ ಎಣ್ಣೆಯಲ್ಲಿ ಬಿಡಿ. ತುಂಬಾ ತೆಳ್ಳಗೆ ತಟ್ಟಬಾರದು.
6. ಮದ್ಯಮ ಉರಿಯಲ್ಲಿ ಸ್ವಲ್ಪ ಕೆಂಪು ಬಣ್ಣ ಬರುವವರೆಗೆ ಕರಿದು ಈಚೆ ತೆಗೆಯಿರಿ.