logo

ಮೆಂತ್ಯೆಸೊಪ್ಪಿನ ದೋಸೆ

By: Jyothi naik
ಬೇಕಾಗುವ ಪದಾರ್ಥಗಳು:

ದಪ್ಪ ಅಕ್ಕಿ- 2 ಲೋಟ

ಉದ್ದಿನಬೇಳೆ- 5-6 ಚಮಚ

ಮೆಂತ್ಯೆ- ಕಾಲು ಚಮಚ

ತೆಂಗಿನ ತುರಿ- 1 ಹೋಳು

ಮೆಂತ್ಯೆ ಸೊಪ್ಪು- 4 ಕಟ್ಟು

ಬೆಲ್ಲ- 2 ಉಂಡೆ (optional)

ಬ್ಯಾಡಗಿ ಮೆಣಸಿನ ಕಾಯಿ- 6-7

ಕೊತ್ತುಂಬರಿ ಬೀಜ- 2 ಚಮಚ

ಜೀರಿಗೆ- 1 ಚಮಚ

ಅರಿಶಿನ- ಕಾಲು ಚಮಚ

ಇಂಗು- 1 ಬೇಳೆ ಗಾತ್ರ

ಉಪ್ಪು- ರುಚಿಗೆ ತಕ್ಕಷ್ಟು

ಎಣ್ಣೆ- ದೋಸೆ ಮಾಡಲು


ಮಾಡುವ ವಿಧಾನ:
1. ಹಿಂದಿನ ದಿನ ಸಂಜೆ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯೆಯನ್ನು ನೀರಲ್ಲಿ ನೆನೆಸಿ, 2-3 ಗಂಟೆಯ ನಂತರ ಗ್ರೈಂಡರ್/ಮಿಕ್ಸರ್‍ಗೆ ಹಾಕಬೇಕು.
2. ಜೊತೆಯಲ್ಲಿ ಕಾಯಿತುರಿ, ಮೆಣಸಿನ ಕಾಯಿ, ಕೊತ್ತುಂಬರಿ ಬೀಜ, ಜೀರಿಗೆ, ಅರಿಶಿನ, ಇಂಗು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. (ಉದ್ದಿನ ದೋಸೆಯ ಹಿಟ್ಟಿನ ಹದವಿರಲಿ)
3. ಮರುದಿನ ಬೆಳಿಗ್ಗೆ ಮೆಂತ್ಯೆಸೊಪ್ಪನ್ನು ಚೆನ್ನಾಗಿ ತೊಳೆದು ಅದರಲ್ಲಿನ ನೀರು ಹೋಗುವಂತೆ ಒಂದು ಜರಡಿಯಲ್ಲಿ ಹಾಕಿಡಿ.
4. ಸ್ವಲ್ಪ ಸಮಯದ ನಂತರ, ಅದನ್ನು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಹಾಕಿ. ಹಾಗೇ ಉಪ್ಪನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
5. ದೋಸೆ ಕಾವಲಿಯು ಕಾದಾಗ ಒಂದು ಚಮಚ ಎಣ್ಣೆ ಹಾಕಿ, ಒಂದು ಸೌಟು ಹಿಟ್ಟನ್ನು ಹಾಕಿ ಹರಡಿ ಉರಿ ಸಣ್ಣಗಿರಲಿ.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್