logo

ಮಾವಿನ ಹಣ್ಣಿನ ಕೇಕ್‍ ಕುಕ್ಕರ್ ನಲ್ಲಿ ಕೇಕ್ ಮಾಡುವ ವಿಧಾನ

By: Bhagya
ಬೇಕಾಗುವ ಸಾಮಾಗ್ರಿಗಳು:
ಸಕ್ಕರೆ – 1/2 ಕಪ್
ಎಣ್ಣೆ – 1/4 ಕಪ್
ಹಾಲು – 3/4 ಕಪ್
ನಿಂಬೆ ರಸ – 1 ಟೇಬಲ್ ಚಮಚ
ಮ್ಯಾಂಗೋ ಸಿರಪ್ ಅಥವಾ ಮಾವಿನ ಹಣ್ಣಿನ ರಸ – 1 ಟೀ ಸ್ಪೂನ್
ಮೈದಾ ಹಿಟ್ಟು – 1 1/4 ಕಪ್
ಬೇಕಿಂಗ್ ಸೋಡಾ – 1/4 ಕಪ್
ಬೇಕಿಂಗ್ ಪೌಡರ್ – 1 ಟೀ ಸ್ಪೂನ್
ಉಪ್ಪು – 1/8 ಟೀ ಸ್ಪೂನ್

ತಯಾರಿಸುವ ವಿಧಾನ:
ಕೇಕ್ ಹಿಟ್ಟು ತಯಾರಾಗುವ 5 ನಿಮಿಷ ಮೊದಲು, ಕುಕ್ಕರ್ ನಲ್ಲಿ ಮೊದಲಿಗೆ ಸ್ವಲ್ಪ ಉಪ್ಪು ಹಾಕಿ ಬಿಸಿಯಾಗಲು ಇಡಿ. ಇದಕ್ಕೆ ನೀರನ್ನು ಸೇರಿಸಬೇಕಾಗಿಲ್ಲ, ಕುಕ್ಕರ್ ನ ಮುಚ್ಚಳದ ವಿಶಲ್ ಮತ್ತು ರಬ್ಬರ್ ನ್ನು ತೆಗೆದು ಮುಚ್ಚಿ. .
ಕುಕ್ಕರ್ ನಲ್ಲಿ ಉಪ್ಪು ಮೊದಲು ಬಿಸಿ ಮಾಡಿ ಇಟ್ಟುಕೊಳ್ಳುವುದರಿಂದ ಮೈಕ್ರೋಒವನ್ ನಂತಹ ವಾತಾವರಣವನ್ನು ಸೃಷ್ಟಿಸಬಹುದು ಮತ್ತು ಪ್ರೆಶರ್ ಕುಕ್ಕರ್ ಕಪ್ಪಗಾಗುವುದನ್ನು ತಡೆಗಟ್ಟಬಹುದು.
ಈಗ ಒಂದು ದೊಡ್ಡ ಪಾತ್ರೆಯಲ್ಲಿ ಸಕ್ಕರೆ, ಎಣ್ಣೆ ಮತ್ತು ಹಾಲನ್ನು ಹಾಕಿ ಸಕ್ಕರೆ ಕರಗುವವರೆಗೂ ಕಲಸಿಕೊಳ್ಳಿ.ಈಗ ಮ್ಯಾಂಗೋ ಸಿರಪ್ ಅಥವಾ ಮಾವಿನ ಹಣ್ಣಿನ ರಸ ಸೇರಿಸಿ.
ಇದಕ್ಕೆ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ , ಉಪ್ಪು , ನಿಂಬೆ ರಸ ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಹೀಗೆ ತಯಾರಾದ ಹಿಟ್ಟನ್ನು ಎಣ್ಣೆ ಸವರಿದ ಪಾತ್ರೆಯಲ್ಲಿ ಹಾಕಬೇಕು.
ಈಗ ಬಿಸಿಯಾಗಲು ಇಟ್ಟ ಕುಕ್ಕರ್ ನ ಮುಚ್ಚಳವನ್ನು ತೆಗೆಯಿರಿ ಮತ್ತು ಕೇಕ್ ಹಿಟ್ಟನ್ನು ಹಾಕಿದ ಪಾತ್ರೆಯನ್ನು ಕುಕ್ಕರ್ ನ ಒಳಗಡೆ ನಿಧಾನವಾಗಿ ಇಡಿ.
ಈಗ ಮುಚ್ಚಳವನ್ನು ಮುಚ್ಚಿ ಮೀಡಿಯಮ್ ಉರಿಯಲ್ಲಿ 30 – 45 ನಿಮಿಷ ಬೇಯಲು ಬಿಡಿ. ಉರಿ ಜಾಸ್ತಿ ಮಾಡಿದರೆ ಕುಕ್ಕರ್ ಕಪ್ಪಗಾಗಬಹುದು ಮತ್ತು ಕೇಕ್ ತಳ ಹಿಡಿಯಬಹುದು.
ಒಂದು ಚಮಚ ವನ್ನು ಬೇಯುತ್ತಿರುವ ಕೇಕ್ ನ ಮದ್ಯದಲ್ಲಿ ಚುಚ್ಚಿ ತೆಗೆಯಿರಿ, ಚಮಚದಲ್ಲಿ ಹಿಟ್ಟು ಅಂಟಿಕೊಳ್ಳದೆ ಇದ್ದರೆ ಕೇಕ್ ಬೆಂದಿದೆ ಎಂದುಕೊಳ್ಳಬಹುದು. ಈಗ ಸ್ಟೌವ್ ಆರಿಸಿ ಮತ್ತು ಹೊರಗಡೆ ತೆಗೆಯುವ ಮೊದಲು 5 ನಿಮಿಷ ಹಾಗೆ ಬಿಡಿ. ಕುಕ್ಕರ್ ನಿಂದ ತೆಗೆದ ಬಳಿಕ ಮತ್ತೆ 15 ನಿಮಿಷ ತಣ್ಣಗಾಗಲು ಬಿಡಿ. ಈಗ ರುಚಿರುಚಿಯಾದ ಘಮಘಮಿಸುವ ಮಾವಿನಹಣ್ಣಿನ ಕೇಕ್ ಸವಿಯಲು ತಯಾರಾಗಿದೆ.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್