ರವೆಉಂಡೆ
By: Suma
ಬೇಕಾಗುವ ಸಾಮಗ್ರಿಗಳು:
ರವೆ - ಎರಡು ಕಪ್
ಸಕ್ಕರೆ - ಎರಡು ಕಪ್
ಕೊಬ್ಬರಿ ತುರಿ- ಒಂದು ಕಪ್
ಹಾಲಿನ ಪುಡಿ - ನಾಲ್ಕು ದೊಡ್ಡ ಚಮಚ
ದ್ರಾಕ್ಷಿ ಮತ್ತು ಗೋಡಂಬಿ ಸ್ವಲ್ಪ ಬಾದಾಮಿ, ಏಲಕ್ಕಿ ಪುಡಿ
ರೋಸ್ ವಾಟರ್/ಗುಲಾಬಿ ನೀರು - ಒಂದು ಚಮಚ
ಕೇಸರಿ ದಳಗಳು - ಅರ್ಧ ಚಮಚ
ಸ್ವಲ್ಪ ಹಾಲು - ಅರ್ಧ ಕಪ್
ತುಪ್ಪ - ನಾಲ್ಕು ಚಮಚ
ತಯಾರಿಸುವ ವಿಧಾನ :
ದಪ್ಪ ತಳದ ಅಥವಾ ನಾನ್ ಸ್ಟಿಕ್ ಪಾತ್ರೆಯಲ್ಲಿ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಘಂ ಎನ್ನುವಂತೆ ಚೆನ್ನಾಗಿ ಹುರಿದುಕೊಳ್ಳಿ.
ಅದಕ್ಕೆ ಸಕ್ಕರೆ ಸೇರಿಸಿ,ಬೆರೆಸಿ,ಕೊಬ್ರಿತುರಿ ಮತ್ತು ಹಾಲಿನ ಪುಡಿ ಕೂಡ ಹಾಕಿ.
ದ್ರಾಕ್ಷಿ,ಗೋಡಂಬಿ,ಬಾದಾಮಿ,ರೋಸ್ ವಾಟರ್/ಗುಲಾಬಿ ನೀರು,ಕೇಸರಿ ದಳಗಳು ಮತ್ತು ಏಲಕ್ಕಿ ಪುಡಿ ಸೇರಿಸಿ,ಚೆನ್ನಾಗಿ ಬೆರೆಸಿ.
ಅದಕ್ಕೆ ತುಪ್ಪ ಮತ್ತು ಕಾಲು/ಅರ್ಧ ಕಪ್ ಹಾಲು ಹಾಕಿ ಚೆನ್ನಾಗಿ ಕೈ ಆಡಿಸಿ,ಒಂದೆರಡು ನಿಮಿಷ ಬೆರೆಸಿ,ಚೆನ್ನಾಗಿ ತಿರುವಿ,ಒಲೆಯಿಂದ ಕೆಳಗಿಳಿಸಿ.
ಸ್ವಲ್ಪ ತಣ್ಣಗಾದ ಮೇಲೆ ಹಾಲಿನ / ತುಪ್ಪದ ಕೈ ನಿಂದ ರವೆಯ ಮಿಶ್ರಣವನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು,
ನಿಮಗೆ ಯಾವ ಗಾತ್ರದ ಉಂಡೆ ಬೇಕೋ ಆ ರೀತಿ ಉಂಡೆ ತಯಾರಿಸಿ.
ರುಚಿಕರವಾದ ರವೆಉಂಡೆ ಸವಿಯಲು ತಯಾರಾಗುತ್ತದೆ. ತಣ್ಣಗಾದ ಮೇಲೆ ಸ್ವಲ್ಪ ಗಟ್ಟಿಯಾಗುತ್ತವೆ.