logo

ಹಸಿ ಶೆಟಲಿ ತವಾ ಪ್ರೈ

By: VINUTA
ಅಗತ್ಯವಿರುವ ಸಾಮಾಗ್ರಿಗಳು:
*ಬಿಡಿಸಿ ಸ್ವಚ್ಛಗೊಳಿಸಿದ ಸೀಗಡಿ: 200 ಗ್ರಾಂ
*ಒಣಮೆಣಸು: ಸುಮಾರು ಏಳು (ಬ್ಯಾಡಗಿ ಅತ್ಯುತ್ತಮ ಆಯ್ಕೆ. ಕಾಶ್ಮೀರಿ ಚಿಲ್ಲಿ ಆದರೆ ಎಂಟು, ಇತರ ಮೆಣಸಾದರೆ ಐದು ಅಥವಾ ಆರು ಸಾಕು)
*ಕೊತ್ತೊಂಬರಿ ಬೀಜ-ಎರಡು ದೊಡ್ಡಚಮಚ
*ಕಾಯಿತುರಿ: ಅರ್ಧ ಕಪ್
*ಕಾಳುಮೆಣಸಿನ ಪುಡಿ-ಕಾಲು ಚಿಕ್ಕ ಚಮಚ
*ಕೊತ್ತೊಂಬರಿ ಪುಡಿ: ಕಾಲು ಚಿಕ್ಕಚಮಚ
*ಟೊಮೇಟೊ-ಮಧ್ಯಮ ಗಾತ್ರದ್ದು -ಮೂರು (ಚೆನ್ನಾಗಿ ಹಣ್ಣಾಗಿರಬೇಕು. ಕೊಂಚ ಕಾಯಿ ಇದ್ದರೂ ಗಸಿ ಹುಳಿಯಾಗುತ್ತದೆ)
*ಈರುಳ್ಳಿ - ಒಂದು ಕಪ್ (ಚಿಕ್ಕದಾಗಿ ಹೆಚ್ಚಿದ್ದು)
*ಶುಂಠಿ ಬೆಳ್ಳುಳ್ಳಿ ಪೇಸ್ಟ್- ಒಂದು ದೊಡ್ಡಚಮಚ
*ಉಪ್ಪು-ರುಚಿಗನುಸಾರ
*ಎಣ್ಣೆ- ಎರಡು ದೊಡ್ಡ ಚಮಚ (ಮೆಕ್ಕೆ ಜೋಳ, ಸೂರ್ಯಕಾಂತಿ ಅಥವಾ ನೆಲಗಡಲೆ ಸೂಕ್ತ, ಪಾಮ್, ವನಸ್ಪತಿ ಬೇಡವೇ ಬೇಡ)
*ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು

ವಿಧಾನ: *ಒಂದು ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿಮಾಡಿ. ಬಳಿಕ ಸೀಗಡಿಯನ್ನು ಹಾಕಿ ಸುಮಾರು ಐದು ನಿಮಿಷ ಹುರಿಯಿರಿ.
ಕೊಂಚ ಕಂದು ಬಣ್ಣ ಬರುತ್ತಿದ್ದಂತೆ ಇಳಿಸಿ ಒಂದು ಪಾತ್ರೆಯಲ್ಲಿ ಮುಚ್ಚಿಡಿ
*ಮಿಕ್ಸಿಯ ಜಾರ್‌ನಲ್ಲಿ ಕೊತ್ತೊಂಬರಿ, ಒಣಮೆಣಸು, ಕಾಯಿತುರಿ ಮತ್ತು ಕೊಂಚ ನೀರು ಹಾಕಿ ಚೆನ್ನಾಗಿ ಅರೆಯಿರಿ. ಇದನ್ನು ಒಂದು ಚಿಕ್ಕ ಪಾತ್ರೆಯಲ್ಲಿ ಸಂಗ್ರಹಿಸಿ
*ಮಿಕ್ಸಿಯ ಜಾರ್‌ನ ನೀರು ತೆಗೆದು ಮೂರು ಟೊಮಾಟೋಗಳನ್ನು ನೀರು ಹಾಕದೇ ಅರೆಯಿರಿ. ನುಣ್ಣನೆಯ ದ್ರವವಾದ ಬಳಿಕ ಪಕ್ಕಕ್ಕಿಡಿ (ಮಾರುಕಟ್ಟೆಯಲ್ಲಿ ಸಿಗುವ ಟೊಮೇಟೊ ಪ್ಯೂರಿಯನ್ನು ಸಹಾ ಬಳಸಬಹುದು)
*ಈಗ ಸೀಗಡಿ ಹುರಿದ ಪಾತ್ರೆಯಲ್ಲಿ ಉಳಿದ ಎಣ್ಣೆಯನ್ನು ಹಾಕಿ ನೀರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಧನಿಯ ಪುಡಿ, ಕಾಳುಮೆಣಸಿನ ಪುಡಿ ಹಾಕಿ ಚಿಕ್ಕ ಉರಿಯಲ್ಲಿ ನೀರುಳ್ಳಿ ಕೆಂಪಗಾಗುವವರೆಗೆ ಹುರಿಯಿರಿ. ಸತತವಾಗಿ ತಿರುವುತ್ತಲೇ ಇರಬೇಕು, ಇಲ್ಲದಿದ್ದರೆ ತಳದಲ್ಲಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸುಟ್ಟು ರುಚಿ ಕಹಿಯಾಗುತ್ತದೆ.
*ಇನ್ನು ಅರೆದ ಟೊಮಾಟೋ ಹಾಕಿ ತಿರುವುದನ್ನು ಮುಂದುವರೆಸಿ. ಬಳಿಕ ಉಪ್ಪು ಹಾಕಿ
*ಟೊಮೇಟೊ ಬೆಂದಿದೆ ಎನ್ನಿಸಿದಾಗ (ಗುಳ್ಳೆಗಳು ಏಳುವುದು ಹೆಚ್ಚಾಗುತ್ತದೆ) ಹುರಿದ ಸೀಗಡಿಗಳನ್ನು ಹಾಕಿ ಮಸಾಲೆಯನ್ನು ಸೇರಿಸಿ
*ನಡುನಡುವೆ ಕೊಂಚ ತಿರುವುತ್ತಾ ಸುಮಾರು ಹತ್ತರಿಂದ ಹದಿನೈದು ನಿಮಿಷ ಬೇಯಿಸಿ. ಅನ್ನದೊಂದಿಗೆ ಸೇವಿಸುವುದಾದರೆ ನಿಮಗೆ ಬೇಕಾದ ಹದಕ್ಕೆ ನೀರು ಸೇರಿಸಿ.
*ಬಳಿಕ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಿಸಿಬಿಸಿಯಿದ್ದಂತೆಯೇ ಬಡಿಸಿ, ಮೆಚ್ಚುಗೆ ಗಳಿಸಿ. ಸ್ವಾದಿಷ್ಟಕರ ಸೀಗಡಿ ಮೀನಿನ ಕರಿ ಸಲಹೆ:
*ಸೀಗಡಿಯನ್ನು ಸ್ವಚ್ಛಗೊಳಿಸುವಾಗ ಬೆನ್ನುಹುರಿಯನ್ನು ಪೂರ್ಣವಾಗಿ ತೆಗೆಯುವುದೇ ಕಷ್ಟಕರವಾದ ಕೆಲಸ. ಇದಕ್ಕಾಗಿ ಮರದ ಚೂಪಾದ ಟೂಥ್ ಪಿಕ್ ಬಳಸಿದರೆ ಈ ಕೆಲಸ ಸುಲಭವಾಗಿ ಆಗುತ್ತದೆ.
*ಒಂದು ವೇಳೆ ಈ ಹುರಿ ಮಧ್ಯೆ ತುಂಡಾದರೆ ಟೂಥ್ ಪಿಕ್‌ನಿಂದ ತುಂಡಾದ ಭಾಗದ ಮೇಲಿನ ಪೊರೆಯನ್ನು ಸೀಳಿ ತುಂಡಾದ ಹುರಿಯೊಳಗೆ ನುಗ್ಗಿಸಿ ಮೇಲಕ್ಕೆತ್ತಿ, ಉಳಿದ ಭಾಗ ಸುಲಭವಾಗಿ ಬರುತ್ತದೆ.

*ಈ ವಿಧಾನದಲ್ಲಿ ಒಣಮೆಣಸನ್ನು ಬಳಸಿರುವುದರಿಂದ ರಾತ್ರಿ ಊಟದಲ್ಲಿ ಸೇವಿಸಿದರೆ ಊಟದ ಬಳಿಕ ಮೊಸರನ್ನು ಅಥವಾ ಮಜ್ಜಿಗೆಯನ್ನು ಕಡ್ಡಾಯವಾಗಿ ಸೇವಿಸಿ,
ಇಲ್ಲದಿದ್ದರೆ ಹೊಟ್ಟೆಯಲ್ಲಿ ಉರಿಯುಂಟಾಗಬಹುದು

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್