logo

ಹಲಸಿನ ಎಲೆಯ ಕೊಟ್ಟೆ ಕಡುಬು ರೆಸಿಪಿ!

By: Sandya
ಕರಾವಳಿ, ಮಲೆ ನಾಡಿನ ಕಡೆ ಸ್ವಲ್ಪ ಹೆಚ್ಚಾಗಿ ಮಾಡುತ್ತಾರೆ.. ಹಲಸಿನ ಮರದ ಎಲೆಯಿಂದ ತಯಾರಿಸಿದ ಕೊಟ್ಟೆಯಲ್ಲಿ ಮಾಡಿದ ತಿಂಡಿ ಯಾದುದರಿಂದ
ಕೊಟ್ಟೆ ಕಡುಬು ಎಂದು ಕರೆಯುತ್ತಾರೆ .

ಬೇಕಾಗುವ ಪದಾರ್ಥ :

ಉದ್ದಿನಬೇಳೆ - 1 ಕಪ್
ಇಡ್ಲಿ ರವೆ - 2 ಕಪ್
ಉಪ್ಪು ರುಚಿಗೆ ತಕ್ಕಸ್ಟು
ಹಲಸಿನ ಎಲೆ

ಮಾಡುವ ವಿಧಾನ :

ಮೊದಲು ಉದ್ದಿನ ಬೇಳೆಯನ್ನು 5 ಗಂಟೆ ನೆನೆಯಲು ಇಡಬೇಕು.

ನಂತರ ಗ್ರೈಂಡರ್ / ಮಿಕ್ಸಿ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ .

ನಂತರದಲ್ಲಿ ಇಡ್ಲಿ ರವೆಯನ್ನು 10 ನಿಮಿಷ ನೀರಿನಲ್ಲಿ ನೆನೆಸಿಟ್ಟು, ನಂತರ ಹಿಂಡಿ ತೆಗೆದು ಉದ್ದಿನ ಹಿಟ್ಟಿಗೆ ಚೆನ್ನಾಗಿ ಮಿಶ್ರಣ ಮಾಡಿಡಬೇಕು.

ಮರದಿಂದ ಎಲೆ ತೆಗೆದ ಮೇಲೆ ನೀರಲ್ಲಿ ಸರಿಯಾಗಿ ತೊಳೆದು ಒರೆಸಿ ಇಟ್ಟು, ಎಲೆಗಳನ್ನು ನಾಲ್ಕು ನಾಲ್ಕರಂತೆ ಜೋಡಿಸಿಟ್ಟು ಕೊಳ್ಳಿ..

ಹಲಸಿನ ನಾಲ್ಕು ಎಲೆಗಳ ತುದಿಗಳನ್ನು ಚಿಕ್ಕ ಕಡ್ಡಿ ಸಹಾಯದಿಂದ ಮೊದಲು ಜೋಡಿಸಿಕೊಳ್ಳಿ., ನಂತರ ವೃತ್ತಾಕಾರವಾಗಿ (ಎಲೆಯ ಹಿಂಭಾಗ ಕೊಟ್ಟೆಯ ಒಳಮೈಗೆ ಬರುವಂತೆ) ಎಲೆಗಳನ್ನು ಜೋಡಿಸುತ್ತಾ ಬಂದರೆ ಕೊಟ್ಟೆ ಸಿದ್ಧ.
( ಕೊಟ್ಟೆಯನ್ನು ಜೋಡಿಸುವಾಗ ಯಾವುದೇ ಕಾರಣಕ್ಕೂ ತೂತು ಇರಬಾರದು. ತೂತು ಇದ್ದರೆ ಹಿಟ್ಟು ಸೋರಿ ಹೋಗುತ್ತದೆ.)

ನಂತರ ಈ ಹಿಟ್ಟನ್ನು 7-9ಗಂಟೆ(ಫುಲ್ ನೈಟ್ ) ನೆನೆಯಲು ಬಿಡಿ.

ಬೆಳಿಗ್ಗೆ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಹಲಸಿನ ಎಲೆಯ ಕೊಟ್ಟೆಗೆ ತುಂಬಿಕೊಳ್ಳಿ..

ಹಬೆಯಲ್ಲಿ ಮುಕ್ಕಾಲು ಗಂಟೆ ಬೇಯಿಸಿ .

ಇದನ್ನು ಚಟ್ನಿ ಮತ್ತು ಕಾಯಿ ಹಾಲಿನ ಜೊತೆ ತಿನ್ನಲು ರುಚಿಯಾಗಿರುತ್ತದೆ .


ಕಾಯಿ ಹಾಲು ತಯಾರಿಸುವ ವಿಧಾನ -
ಒಂದು ತುರಿದ ತೆಂಗಿನ ಕಾಯಿ, ತುರಿದ ಬೆಲ್ಲ / ಸಕ್ಕರೆ, ಏಲಕ್ಕಿ ಪುಡಿ, ರುಚಿಗೆ ಉಪ್ಪು, ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ತಿರುಗಿಸಿ ಅದರಿಂದ ಹಾಲನ್ನು ಹಿಂಡಿ ತೆಗೆಯಿರಿ.

ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್