ಗರ್ಭಿಣಿಯರ ಆರೋಗ್ಯಕ್ಕೆ ಸಲಹೆಗಳು
By: Bhavya Naik
ಸಾಮಾನ್ಯ ಮಹಿಳೆಯರಾಗಿದ್ದಾಗ ಇರುವ ಸ್ಥಿತಿಗೂ ಗರ್ಭಿಣಿಯಾಗಿರುವಾಗಿನ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ
ಹಿರಿಯರ ಕಾಲದಿಂದಲೂ ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ಪೋಷಕ ಆಹಾರಗಳನ್ನು ನೀಡುವುದು ವಾಡಿಕೆಯಾಗಿದೆ.
ಆರೋಗ್ಯದ ರಕ್ಷಣೆಯಲ್ಲಿ ತಾಯಿಯ ಆಹಾರದ ಆಯ್ಕೆ ತುಂಬಾ ಮುಖ್ಯ. ಅಪ್ಪಿ ತಪ್ಪಿಯೂ ಗರ್ಭಾಪಾತಕ್ಕೆ ನೆರವು ನೀಡುವ ಆಹಾರಗಳನ್ನು ತಿನ್ನಬಾರದು.
ex. ಪಪ್ಪಾಯಿ, ಮೊಳಕೆ ಬಂದ ಆಲೂಗಡ್ಡೆ, ಅನಾನಸು, ಪೀಚ್ ಹಣ್ಣುಗಳು, ಬಿಳಿಎಳ್ಳು, ಕರಿ ಎಳ್ಳು, ಲೋಳೆಸರ, ನುಗ್ಗೇಕಾಯಿ, ನುಗ್ಗೇ ಸೊಪ್ಪು, ಮಾಂಸಾಹಾರದಲ್ಲಿ ಯಕೃತ್ ಮೊದಲಾದವುಗಳನ್ನು ತಿನ್ನಬಾರದು.
ಗರ್ಭಾವಧಿಯ ದಿನಗಳಲ್ಲಿ ಮಹಿಳೆಯರು ಕ್ಯಾಲೋರಿ, ಪ್ರೊಟೀನ್, ಕೊಬ್ಬಿನಾಂಶ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಡಿ, ವಿಟಮಿನ್ ಬಿ ಇರುವ ಆಹಾರ
ಪದಾರ್ಥಗಳನ್ನು ಸೇವಿಸುವುದು ಅಗತ್ಯವಾಗಿದೆ. ಈ ಪೋಷಕಾಂಶಗಳು ಕೆಲವೊಂದು ತರಕಾರಿ, ಸೊಪ್ಪು, ಹಾಲು ಮೊದಲಾದವುಗಳಲ್ಲಿದ್ದು,
ಯಾವ ಪದಾರ್ಥಗಳನ್ನು ಸೇವಿಸಬೇಕು ಎಂಬುದರ ಬಗ್ಗೆ ವೈದ್ಯರು ಸಲಹೆ ನೀಡುತ್ತಾರೆ.
ವೈದ್ಯರ ಪ್ರಕಾರ ಗರ್ಭಿಣಿ ಮಹಿಳೆಯರು ಸೇವಿಸುವ ಆಹಾರ ಪದಾರ್ಥದಲ್ಲಿ ಕೊಬ್ಬಿನಾಂಶದ ಒಟ್ಟು ಪ್ರಮಾಣವು ಕ್ಯಾಲೋರಿಯ ಶೇಕಡ 20ಭಾಗವಾಗಿರಬೇಕು.
ಅಲ್ಲದೆ ಸೇವಿಸುವ ಆಹಾರದಲ್ಲಿ ಕೊಬ್ಬಿನ ಪ್ರಮಾಣವು ನೇರವಾಗಿ 30 ಗ್ರಾಂನಲ್ಲಿರಬೇಕು. ಇದಕ್ಕಾಗಿ ತುಪ್ಪ, ಬೆಣ್ಣೆ ಮತ್ತು ಅಡುಗೆ ಎಣ್ಣೆಯನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.

ಗರ್ಭಿಣಿಯರು ತಮ್ಮ ಮೊದಲ ಮೂರು ತಿಂಗಳ ಕಾಲ ಯಾವುದೇ ರೀತಿಯ ಸೌಂದರ್ಯವರ್ಧಕಗಳನ್ನು ಬಳಸಬಾರದು. ಭ್ರೂಣದ ಮೆದುಳಿನ ಬೆಳವಣಿಗೆಯನ್ನು ರಾಸಾಯನಿಕಗಳಿಂದ ಅಪಾಯಕರವಾಗಿರುವ ಕಾರಣ ಯಾವುದೇ ರೀತಿಯ ಸೌಂದರ್ಯವರ್ಧಕಗಳಿಂದ ದೂರವಿರುವುದು ಉತ್ತಮ,
ಮೊದಲ ಮೂರು ತಿಂಗಳು -
ಈ ಸಮಯದಲ್ಲಿ, ನಿಮ್ಮ ಮಗುವಿನ ಕಿವಿಗಳು ಬರುತ್ತಾಯಿರುತ್ತದೆ, ಆದ್ದರಿಂದ ಒಳ್ಳೆಯ ಮೃದು ಸಂಗೀತ, ಮಂತ್ರಗಳು, ವೀಣೆಯ ನಾದ ಅಥವಾ ಒಳ್ಳೆ ಸಿನಿಮಾ ನೋಡುವುದು ಶ್ರೇಷ್ಟವಾದ ಮಾದರಿ. ಇದರ ತರಂಗಗಳು,
ನಿಮ್ಮ ಮಗುವಿನ ನರ ವ್ಯವಸ್ಥೆಗೆ ಅತ್ಯುತ್ತಮ.
. ತಣ್ಣನೆ ಹಾಲು ಕುಡಿಯಿರಿ, ಹುಳಿ ಹಾಗೂ ಕಹಿಯಾದ ಆಹಾರದಿಂದ ದೂರವಿರಿ, ಸುಲಭವಾಗು ಪಚನವಾಗುವ ಆಹಾರವನ್ನು ಸೇವಿಸಿ.
- ಹಾಲು, ಅನ್ನ, ಎಳನೀರು, ಗಂಜಿ, ಖೀರ, ತುಪ್ಪ ಒಳ್ಳೆಯದು.
ಮೂರರಿಂದ ಆರು ತಿಂಗಳು -
ಗರ್ಭದಲ್ಲಿರುವ ಮಗು ಅಲುಗಾಡಲು ಶುರುಮಾಡುತ್ತದೆ, ನಿಮಗೆ ಹೊಟ್ಟೆಯಲ್ಲಿ ಕಚಗುಳಿ ಉಂಟಾಗುತ್ತದೆ.
ನಿಮ್ಮ ಬೆನ್ನಿನಲ್ಲಿ ನೋವು ಕಾಣಬಹುದು ಮತ್ತು ಓಡಾಡಲು ಪ್ರಾಯಾಸವಾಗುತ್ತದೆ..
- ಒಡಲ ಕಂದನ ಆರೋಗ್ಯಕ್ಕೂ ರಕ್ತ ಅಗತ್ಯವಿರುವುದರಿಂದ ಗರ್ಭಿಣಿಯರು ಬಹುವಾಗಿ ರಕ್ತಹೀನತೆಯಿಂದ ಬಳಲುತ್ತಾರೆ. ಇದಕ್ಕೆ ಪ್ರಮುಖ ಕಾರಣ ಆಹಾರದಲ್ಲಿ ಕಬ್ಬಿಣದ ಕೊರತೆ. ಇದನ್ನು ನೀಗಿಸಲು ಬಸಲೆ ಪಾಲಕ್ ಮೊದಲಾದ ಗಾಢಹಸಿರು ಸೊಪ್ಪುಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇವಿಸಲು ಮರೆಯದಿರಿ
- ನೀರು, ನಿಮ್ಮ ಶರೀರದಲ್ಲಿ ಸಂಗ್ರಹವಾದ ಆoತರಿಕ ವಿಷವಸ್ತುಗಳನ್ನು ನಿವಾರಿಸಲು ಸಹಕರಿಸುವುದು ಮಾತ್ರವಲ್ಲದೇ ಇದು ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ
ಕಾಡುವ ಮೂತ್ರನಾಳಗಳ ಸೋoಕಿನಿದಲೂ ಕೂಡ ನಿಮ್ಮನ್ನು ರಕ್ಷಿಸುತ್ತದೆ.
- ಎಳನೀರನ್ನು ಸೇವಿಸಿ ಎಳನೀರನ್ನು ನಿಯಮಿತವಾಗಿ ಪ್ರತಿನಿತ್ಯ ಕುಡಿಯುವುದರಿಂದ ಗರ್ಭಿಣಿಯರಲ್ಲಿ ಮಲಬದ್ಧತೆ ಕಾಣಿಸಿಕೊಳ್ಳುವುದಿಲ್ಲ.
ಇನ್ನು ಕೆಲವೊಂದು ಮೂಲಗಳ ಪ್ರಕಾರ ಎಳನೀರು ಕುಡಿಯುವುದರಿಂದ ಗರ್ಭಿಣಿಯರಲ್ಲಿ ಎದೆ ಉರಿ ಕಾಣಿಸಿಕೊಳ್ಳುವುದಿಲ್ಲವಂತೆ.
- ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅನ್ನು ಪಡೆಯಲು ಎಲ್ಲಾ ವಿಧದ ಧಾನ್ಯಗಳು, ಸೋಯಾ, ಮತ್ತು ಮೊಳಕೆ ಬರಿಸಿದ ಕಾಳುಗಳನ್ನು ನಿಮ್ಮ ಊಟದ ತಟ್ಟೆಯಲ್ಲಿ ಸೇರಿಸಿಕೊಳ್ಳಿರಿ.
- ಮೊಟ್ಟೆಯಲ್ಲಿ ಅತಿ ಹೆಚ್ಚಿನ ಪ್ರೋಟೀನ್ ಅಂಶ ಇರುವ ಕಾರಣ ಇದು ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ
- ನಿಮ್ಮ ಆಹಾರದಲ್ಲಿ ತಾಜಾ ಮತ್ತು ಬಿಳಿಯ ಮೀನು ಸಾಧ್ಯವಾದಷ್ಟು ಇರಲಿ. ಮೀನಿನಲ್ಲಿರುವ ವಿಟಮಿನ್ ಇ ಮಗುವಿನ ನರವ್ಯವಸ್ಥೆ ಬಲಗೊಳ್ಳಲು ಸಹಕರಿಸುತ್ತದೆ.
- ಸೇಬಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಸಿಪ್ಪೆಯಲ್ಲಿರುವ ನಾರು ಮಗುವಿನ ಆರೋಗ್ಯಕ್ಕೂ ಉತ್ತಮ ಹಾಗೂ ಗರ್ಭಿಣಿಗೆ ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತದೆ.
. ಗೆಣಸಿನಲ್ಲಿ, ವಿಶೇಷವಾಗಿ ಕೆಂಪು ಗೆಣಸಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಫೋಲೇಟ್ ಇವೆ. ಇವು ಗರ್ಭಿಣಿಗೂ ಮಗುವಿಗೂ ಆರೋಗ್ಯಕರವಾಗಿದೆ.
- ಬಾದಾಮಿಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಇ ಮತ್ತು ಪ್ರೋಟೀನುಗಳಿವೆ. ಇವೂ ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿವೆ. ನಿತ್ಯವೂ ಒಂದೆರಡಾದರೂ ಬಾದಾಮಿಗಳನ್ನು ಗರ್ಭಿಣಿ ಸೇವಿಸಬೇಕು.
- ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿರುವುದರಿ೦ದ ಸೀತಾಫಲವು ಗರ್ಭಿಣಿ ಸ್ತ್ರೀಯರ ಪಾಲಿಗೆ ಸ೦ಜೀವಿನಿಯ೦ತಿದೆ. ಸೀತಾಫಲವು ಖನಿಜಗಳು, ವಿಟಮಿನ್, ಪ್ರೋಟೀನ್‌ಗಳು, ನಾರಿನ೦ಶ, ಶರ್ಕರಪಿಷ್ಟಗಳು, ಹಾಗೂ ಅವಶ್ಯಕ ಕೊಬ್ಬಿನಾ೦ಶಸಗಳ ರೂಪದಲ್ಲಿ ನಾನಾ ಪೋಷಕ ತತ್ವಗಳನ್ನು ಒಳಗೊ೦ಡಿರುತ್ತದೆ. ಶರೀರಕ್ಕೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಎಲ್ಲಾ ಪೋಷಕ ತತ್ವಗಳು ಯಾವುದಾದರೂ ಒ೦ದು ಹಣ್ಣಿನಲ್ಲಿ ಅಡಕಗೊ೦ಡಿರುವುದೇ ಹೌದೆ೦ದಾದರೆ ಆ ಹಣ್ಣು ಸೀತಾಫಲವಲ್ಲದೇ ಬೇರಾವುದೂ ಅಲ್ಲ.
- ಟೊಮೇಟೊ ಲೈಕೊಪೀನ್ ಎಂಬ ಶಕ್ತಿ ಶಾಲಿ ಕ್ಯಾನ್ಸರ್ ನಿವಾರಿಸುವ ಅಂಶವು ಟೊಮೇಟೊಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಗರ್ಭಿಣಿಯಾಗಿರುವಾಗ ಇವುಗಳನ್ನು ಸೇವಿಸಿದರೆ ಅದು ಮಗುವಿನ ಜನನದ ನಂತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಕೆಲವು ತಿಂಗಳುಗಳವರೆಗೆ ಇವುಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಕಾಪಾಡುತ್ತಲೆ ಇರುತ್ತವೆ.
- ಸೀಬೆ ಹಣ್ಣು ಕಬ್ಬಿಣಾ೦ಶ, ಕ್ಯಾಲ್ಸಿಯ೦, ಥೈಯಮೀನ್, ಪೊಟ್ಯಾಷಿಯ೦, ಮೆಗ್ನೀಷಿಯ೦, ಹಾಗೂ ರ೦ಜಕದ೦ತಹ ವಸ್ತುಗಳನ್ನೂ ಕೂಡಾ ಒಳಗೊ೦ಡಿದ್ದು, ಗರ್ಭಿಣಿಯರಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ.
ಕಬ್ಬಿಣದ ಅಂಶವನ್ನು ಒಳಗೊಂಡಿವೆ. ಇದು ಎರಡನೆಯ ಮತ್ತು ಮೂರನೇ ತ್ರೈಮಾಸಿಕದ ಸಮಯದಲ್ಲಿ ಜರಾಯು ಬೆಳವಣಿಗೆಗೆ ಬಹಳ ಬೇಕಾಗುತ್ತದೆ.
- ಒಂದು ಕಪ್ ಮೊಸರು ಒಂದು ಕಪ್ ಹಾಲಿನಂತೆ ಉತ್ತಮವಾಗಿರುತ್ತದೆ, ವಾಸ್ತವವಾಗಿ ಹಾಲಿಗಿಂತ ಹೆಚ್ಚಾಗಿ ಮೊಸರು ಹೆಚ್ಚು ಕ್ಯಾಲ್ಸಿಯಂ ಹೊಂದಿದೆ. ಇದಲ್ಲದೆ, ಮೊಸರು ಸಹ ಪ್ರೋಟೀನ್ ಮತ್ತು ಫೋಲಿಕ್ ಆಮ್ಲದೊಂದಿಗೆ ರಚಿಸಲ್ಪಟ್ಟಿದೆ.

ಗರ್ಭಿಣಿಯರು ಸೇವಿಸಬೇಕಾದ ಪಾನೀಯಗಳು
. ನಿಂಬು ಪಾನಿಯು ನಿಮ್ಮ ಗರ್ಭಾವಸ್ಥೆಯಲ್ಲಿ ಪರಿಪೂರ್ಣ ಪಾನೀಯವಾಗಿದೆ. ನಿಂಬೆ ಪಾನೀಯ ವಿಟಮಿನ್ ಸಿ ಯೊಂದಿಗೆ ಬಂದಿದ್ದು, ಇದು ಕಬ್ಬಿಣಾಂಶವನ್ನು ಹೆಚ್ಚು ಪರಿಣಾಮಕಾರಿ ರೀತಿಯಲ್ಲಿ ಹೀರಿಕೊಳ್ಳಲು ನಿಮ್ಮ ಜೀರ್ಣಾಂಗ ವ್ಯೂಹಕ್ಕೆ ಸಹಾಯ ಮಾಡುತ್ತದೆ.
. ಮಜ್ಜಿಗೆ ಗರ್ಭಾವಸ್ಥೆಯಲ್ಲಿ ಹೈಡ್ರೀಕರಿಸಲು ಮತ್ತು ತಂಪಾಗಿರಿಸಲು ಪರಿಪೂರ್ಣ ಪಾನೀಯವಾಗಿದೆ. ಮಜ್ಜಿಗೆಯು ವಿಟಮಿನ್ ಬಿ 12, ಪ್ರೊಟೀನ್ ಮತ್ತು ಕ್ಯಾಲ್ಸಿಯಂನೊಂದಿಗೆ ಪೂರ್ಣವಾಗಿದೆ ಮತ್ತು ಇದು ಜೀರ್ಣಕ್ರಿಯೆಯಲ್ಲಿ ಸಹಕಾರಿಯಾಗಿದೆ.
. ಹಾಲು ಮತ್ತು ಎಲ್ಲಾ ಹಾಲು ಉತ್ಪನ್ನಗಳು ಪ್ರೋಟೀನ್, ವಿಟಮಿನ್ ಮತ್ತು ಕ್ಯಾಲ್ಸಿಯಂನೊಂದಿಗೆ ತುಂಬಿವೆ. ನಿಮ್ಮ ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಹೈಡ್ರೀಕರಿಸಲು ಮತ್ತು ದೇಹವನ್ನು ತಂಪಾಗಿರಿಸಲು ಹಾಲು ಸಹಕಾರಿಯಾಗಿದೆ.
. ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಸಂದರ್ಭದಲ್ಲಿ ಎದುರಿಸುವ ಸಕಲ ಸಂಕಷ್ಟಗಳಿಗೂ ಜೀರಿಗೆ ಹಾಕಿದ ನೀರು ಅತ್ಯುತ್ತಮ ಔಷಧಿ ಎಂದೆನಿಸಿದೆ. ಇದು ಹೆಚ್ಚು ಪರಿಣಾಮಕಾರಿ ಮಾತ್ರವಾಗಿಲ್ಲದೆ ತಾಯಿ ಮತ್ತು ಭ್ರೂಣಕ್ಕೂ ಸುರಕ್ಷಿತವಾದುದಾಗಿದೆ ಎಂಬುದಾಗಿ ಜೀರಿಗೆಯ ಔಷಧೀಯ ಗುಣಗಳು ಸಾಬೀತು ಪಡಿಸಿವೆ.
. C ಜೀವಸತ್ವ ಹೇರಳವಾಗಿರುವ ಹಣ್ಣು ಕಿತ್ತಳೆಯಾಗಿದೆ. ಇದಲ್ಲದೆ, ಇದು 90% ನಷ್ಟು ನೀರು ಹೊಂದಿದೆ, ಇದು ಹೈಡ್ರೀಕರಿಸಿದ ಅಗತ್ಯವನ್ನು ಪೂರೈಸುತ್ತದೆ. ಕೆಲವು ಮಹಿಳೆಯರಲ್ಲಿ ವಾಕರಿಕೆ ಮತ್ತು ವಾಂತಿ ಮಾಡುವಿಕೆಯ ಸಮಯದಲ್ಲಿ ಇದು ಕೊಂಚ ಸಮಾಧಾನವನ್ನು ಉಂಟುಮಾಡುತ್ತದೆ. ಕಿತ್ತಳೆಯು ಫೈಬರ್ ಮತ್ತು ಫೋಲೇಟ್ ಅನ್ನು ಹೊಂದಿದೆ.