logo

ಸಪೋಟ ಹಣ್ಣಿನ 10 ಉಪಯೋಗಗಳು (ಆರೋಗ್ಯವರ್ಧನೆಗೆ ಸಪೋಟ ಹಣ್ಣು ತಿನ್ನಿ) --

By: Vinuta Hareesh
ಚಿಕ್ಕು ಹಣ್ಣು ಆರೋಗ್ಯಕ್ಕೆ ಬಹಳ ಶ್ರೇಷ್ಠ, ಆ ಅಂಶಗಳನ್ನು ಕುರಿತು ತಿಳಿದುಕೊಳ್ಳೋಣ...
ಈ ಹಣ್ಣಿನಲ್ಲಿ ಜೀವಸತ್ವಗಳು -ವಿಟಮಿನ್ಸ್, ಖನಿಜಾಂಶಗಳು ಮತ್ತು ಟ್ಯಾನಿನ್ ಇವುಗಳು ಸಮೃದ್ಧವಾಗಿವೆ.

Benifits:-
1. ವಿಟಮಿನ್ -ಎ ಅಂಶವನ್ನು ಹೊಂದಿರುವ ಸಪೋಟ ಸೇವಿಸುವುದರಿಂದ ಕಣ್ಣಿನ ಆರೋಗ್ಯ ವೃದ್ಧಿಯಾಗುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ವಿಟಮಿನ್ ಎ ವಯಸ್ಸಾದಮೇಲೆ ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ.

2. ಈ ಹಣ್ಣಿನಲ್ಲಿ ಪಾಲಿಫೆನೋಲಿಕ್ ಉತ್ಕರ್ಷಣನಿರೋಧಕ ಇರುವುದರಿಂದ ಅನೇಕ ವಿರೋಧೀ ವೈರುಸ್, ವಿರೋಧೀ ಪರಾವಲಂಬಿ ಮತ್ತು ವಿರೋಧೀ ಬ್ಯಾಕ್ಟೀರಿಯ ಗುಣಗಳನ್ನು ಹೊಂದಿದೆ. ಈ ನಿರೋಧಕಗಳು ಬ್ಯಾಕ್ಟೀರಿಯ
ಮನುಷ್ಯನ ದೇಹದೊಳಕ್ಕೆ ಪ್ರವೇಶ ಮಾಡುವುದನ್ನು ತಡೆಯುತ್ತದೆ.

3. ಇದು ಶೀತ ಮತ್ತು ಕೆಮ್ಮು ನಿವಾರಣೆಗೆ ಸಹಾಯಮಾಡುತ್ತದೆ.

4. ಸಪೋಟ ಹಣ್ಣಿನಲ್ಲಿರುವ ವಿಟಮಿನ್ ಎ ಮತ್ತು ಬಿ ಗಳು ದೇಹದ ಓಳಗಿನ ಲೋಳೆಯ ಒಳಪದರದ ಆರೋಗ್ಯವನ್ನು ಕಾಪಾಡುವುದಲ್ಲದೆ, ಚರ್ಮದ ರಚನೆಯ ಆರೋಗ್ಯವನ್ನೂ ಸಹಾ ಕಾಪಾಡುತ್ತದೆ.
ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು (ಆಂಟಿ ಆಕ್ಸಿಡೆಂಟ್ಸ್), ನಾರಿನಾಂಶಗಳು ಮತ್ತು ಪೋಷಕಾಂಶಗಳು ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನೊದಗಿಸುತ್ತವೆ, ಮತ್ತು ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ನೀಗಿಸಲು ಸಹಾಯಮಾಡುತ್ತದೆ.

5. ಈ ಹಣ್ಣಿನ ಬೀಜಗಳ ಪುಡಿಯಲ್ಲಿ ಮೂತ್ರವರ್ಧಕ ಗುಣಗಳಿರುವುದರಿಂದ ಮೂತ್ರಪಿಂಡದಲ್ಲಿ ಉಂಟಾಗುವ ಕಲ್ಲುಗಳನ್ನು ಉಚ್ಚಾಡಿಸಲು ಸಹಾಯಮಾಡುತ್ತದೆ. ಹಾಗೆಯೇ ಮೂತ್ರಪಿಂಡ ರೋಗಗಳ ವಿರುದ್ಧ ರಕ್ಷಣೆ ನೀಡುತ್ತದೆ..

6. ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಸೋಂಕುಗಳು ಬರುವುದನ್ನು ತಡೆಯುತ್ತದೆ.

7. ಸಪೋಟಹಣ್ಣಿನಲ್ಲಿ ಗ್ಲೂಕೋಸ್ ಅಂಶವು ಅಧಿಕವಾಗಿರುವುದರಿಂದ ಶಕ್ತಿನೀಡುವುದಕ್ಕೆ ಸಹಕಾರಿಯಾಗಿದೆ.

8. ಸಪೋಟದಲ್ಲಿರುವ ಅತಿ ಹೆಚ್ಚಿನ ಟ್ಯಾನಿನ್ ಅಂಶವು ಪ್ರಮುಖ ಉರಿಯೂತ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ಇದು ಅನ್ನನಾಳದ ಉರಿಯೂತ, ಕರುಳಿನ ಉರಿಯೂತ, ಕೆರಳಿಸುವ ಕರುಳಿನ ಸಹಲಕ್ಷಣಗಳು ಮತ್ತು ಜಠರದ ಉರಿಯೂತಗಳಂತಹ ರೋಗಗಳನ್ನು ತಡೆಗಟ್ಟಿ
ಜೀರ್ಣಾಂಗದ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ. ಇದು ಯಾವುದೇ ಊತ ಮತ್ತು ನೋವುಗಳನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ.

9. ಇದರಲ್ಲಿರುವ ಪ್ರಬಲ ನಿದ್ರಾಜನಕ ಉದ್ರೇಕಗೊಂಡಿರುವ ನರಗಳನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆಮಾಡುತ್ತದೆ. ಆದ್ದರಿಂದ ನಿದ್ರಾಹೀನತೆ, ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಇದು ಬಹಳ ಒಳ್ಳೆಯದು.

10. ಈ ಹಣ್ಣಿನಲ್ಲಿ ಧಾರಾಳವಾಗಿರುವ ಕಾರ್ಬೋಹೈಡ್ರೇಟ್ಸ್ ಮತ್ತು ಪೋಷಕಾಂಶಗಳು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ವಾಕರಿಕೆ, ದೌರ್ಬಲ್ಯ ಮತ್ತು ತಲೆತಿರುಗುವ ಲಕ್ಷಣಗಳನ್ನು ಕಡಿಮಾಡಲು ಸಹಾಯವಾಗುತ್ತದೆ.



ನ್ಯೂಸ್ ಲಿಸ್ಟ್

MORE RECIPE...

ಬ್ಲಾಗ್