ಬಾಳೆಹಣ್ಣಿನ ಉಪಯೋಗ
By: Vijay Kumar Naik
1. ಬಾಳೆಹಣ್ಣು ಸುಲಭವಾಗಿ ಜೀರ್ಣಿಸುವುದು ಮತ್ತು ದೇಹ ಶಕ್ತಿ ಹೆಚ್ಚಿಸುವುದು.
2. ಊಟದ ನಂತರ ಒಂದೆರಡು ಪಕ್ವವಾದ ಬಾಳೆಹಣ್ಣು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುವುದು, ಧಾತು ವೃದ್ಧಿಯಾಗುವುದು, ಮಾಂಸ ವೃದ್ಧಿಯಾಗುವುದು.
3. ಬಾಳೆಕಾಯಿ ತಿರುಳನ್ನು ಹಾಲಿನಲ್ಲಿ ಬೇಯಿಸಿ ತಿನ್ನುವುದರಿಂದ ಮೂಲವ್ಯಾಧಿ, ಹೊಟ್ಟೆ ಹುಣ್ಣು, ಮಲವಿಸರ್ಜನೆಯ ನಂತರ ಆಸನಾಗ್ರಹದಲ್ಲಾಗುವ ಉರಿ ಮತ್ತು ನೋವು ಶಮನವಾಗುವುದು.
4. ಗರ್ಭಿಣಿಯರು ಬಾಳೆಹಣ್ಣನ್ನು ಕ್ರಮವಾಗಿ ಸೇವಿಸುವುದರಿಂದ ರಕ್ತ ಪುಷ್ಟಿಯಾಗುವುದು ಮತ್ತು ಸುಖಪ್ರಸವಕ್ಕೆ ದಾರಿಯಾಗುವುದು.
5. ಬಾಳೆಹಣ್ಣನ್ನು ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಸೇವಿಸುತ್ತಿದ್ದರೆ ಕೆಮ್ಮು, ಎದೆನೋವು ಕಡಿಮೆಯಾಗುವುದು.