ವೆಂಕಟೇಶ ನಾಯ್ಕ ಅವರಿಗೆ ಕರ್ನಾಟಕ ಅಚಿವರ್ಸ ಪ್ರಶಸ್ತಿ
ಸಿರ್ಸಿ : ವಿಜಯ ಕರ್ನಾಟಕ ಹೊರತರುತ್ತಿರುವ Achievers of Karnataka ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿರಸಿಯ ವೆಂಕಟೇಶ ನಾಯ್ಕ ಅವರಿಗೆ ಉಪ ಮುಖ್ಯಮಂತ್ರಿ ಡಾ. ಎಚ್ ಪರಮೇಶ್ವರ ಅವರು ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.
ಉತ್ತರ ಕರ್ನಾಟಕದಲ್ಲಿ ಸ್ವಂತ ಶಕ್ತಿಯಿಂದ ಸಮಾಜದಲ್ಲಿ ತಮ್ಮ ಅಸ್ತಿತ್ವ ಎತ್ತಿ ಹಿಡಿದು, ನವ ಸಮಾಜ ಕಟ್ಟಲು ವಿಶೇಷ ಕೊಡುಗೆ ನೀಡಿದ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಶ್ರೀ ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರು ಮತ್ತು ಸ್ಕೋಡವೇಸ್ ಸಂಸ್ಥೆಯ ಕಾರ್ಯದರ್ಶೀಗಳು ಆದ ಶ್ರೀ ವೇಂಕಟೇಶ ನಾಯ್ಕರವರಿಗೆ 2018ರ ಸಾಲಿನ ಕರ್ನಾಟಕ ಅಚಿವರ್ಸ ಪ್ರಶಸ್ತಿ ಗೆ ಆಯ್ಕೆಯಾಗಿರುವುದು ನಾಮಧಾರಿಗಳಿಗೆ ಹೆಮ್ಮೆಯ ಸಂಗತಿಯಾಗಿದೆ. ವೇಂಕಟೇಶ ನಾಯ್ಕ ಅವರಿಗೆ ನಾಮಧಾರಿ.ಕಾಂ ವತಿಯಿಂದ ಹೃತ್ಪೂರ್ವಕ ಅಭಿನಂಧನೆಗಳು.