logo logo

ಹಿರಿಯ ನಾಮಧಾರಿ ಮುಖಂಡ ದಾಮೋದರ ಗರ್ಡಿಕರ್ ಇನ್ನಿಲ್ಲ

ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ನಾಮಧಾರಿ ಸಮಾಜದ ಹಿರಿಯ ಮುಖಂಡ ದಾಮೋದರ ನಾರಾಯಣ ನಾಯ್ಕ ಗರ್ಡಿಕರ್ ಅವರು ಇಂದು ನಿಧನರಾಗಿದ್ದಾರೆ. ಭಟ್ಕಳದ ಶಾಸಕರಾದ ಸುನೀಲ್ ಬಿ. ನಾಯ್ಕ ಅವರ ಸೋದರ ಮಾವ ಆದ ದಾಮೋದರ ಅವರು ಕಳೆದ ಕೆಲ ದಿನಗಳ ಹಿಂದೆ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದೆರಡು ದಿನಗಳಿಂದ ಅವರ ಆರೋಗ್ಯ ತೀವ್ರ ಗಂಬಿರವಾಗಿತ್ತು, ಇಂದು ಚಿಕಿತ್ಸೆಗೆ ಅವರ ದೇಹ ಸ್ಪಂದಿಸದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ, ಎನ್ನಲಾಗಿದೆ.

ನಾಮಧಾರಿ ಸಮುಧಾಯದ ಮುಖಂಡ ನಾರಾಯಣ ನಾಯ್ಕ ಗರ್ಡಿಕರ್ ಅವರ ಎರಡನೇ ಪುತ್ರರಾದ ಇವರು ಚಿಕ್ಕ ವಯಸ್ಸಿನಲ್ಲೇ ಸಾರ್ವಜನಿಕ ಬದುಕಿಗೆ ಪದಾರ್ಪಣೆ ಮಾಡಿದ್ದರು. ಜಿಲ್ಲಾ ಪಂಚಾಯತದ ಅಧ್ಯಕ್ಷರಾಗಿ, ಜಿಲ್ಲಾ ಪಂಚಾಯತ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ, ಮುಂಡಳ್ಳಿಯ ಸತ್ಯನಾರಾಯಣ ಸೇವಾ ಮಂಡಲದ ಅಧ್ಯಕ್ಷರಾಗಿ, ಪಿಎಲ್ ಡಿ ಬ್ಯಾಂಕ್ ನ ನಿರ್ದೇಶಕರ ಹುದ್ದೆ ಸೇರಿದಂತೆ ಹಲವು ಸಂಘ - ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಅವರು ಸೇವೆ ಸಲ್ಲಿಸಿದ್ದರು. ಬಹುತೇಕ ದಾಮಣ್ಣ ಎಂದೇ ಕರೆಯಲ್ಪಡುತ್ತಿದ್ದ ಇವರು ಈಗ ನೆನಪು ಮಾತ್ರ.

ಅಗಲಿದ ನಾಯಕ ದಾಮಣ್ಣ ರಿಗೆ ನಾಮಧಾರಿ.ಕಂ ತಂಡ ಶ್ರದ್ಧಾಂಜಲಿ ಸಲ್ಲಿಸುತ್ತದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ... ಓಂ ಶಾಂತಿ

ನಾಮಧಾರಿ ರುಚಿ

MORE RECIPE...

ಬ್ಲಾಗ್