logo logo

ರಾಷ್ಟ್ರಿಯ ಬಿಲ್ಲವರ ಮಹಾಮಂಡಲದ ಸನ್ಮಾನ ಕಾರ್ಯಕ್ರಮ:ನಾಮಧಾರಿ ಶಾಸಕರಿಗಿಲ್ಲ ಮನ್ನಣೆ

ಬೆಂಗಳೂರು : ಮುಲ್ಕಿ ಯಲ್ಲಿರುವ ರಾಷ್ಟ್ರಿಯ ಬಿಲ್ಲವರ ಮಹಾಮಂಡಲ(ರಿ) ಕಳೆದ ಜುಲೈನಲ್ಲಿ ಸಮಾಜದ ಸಚಿವರು ಮತ್ತು ಶಾಸಕರಿಗೆ ಅಭಿನಂದನಾ ಸಮಾರಂಭವೊಂದನ್ನು ಏರ್ಪಡಿಸಿತ್ತು. ಈ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಜಯಮಾಲಾ ಅವರನ್ನು ಸೇರಿದಂತೆ, ವಿಧಾನಪರಿಷತ್ ನ ವಿರೋಧ ಪಕ್ಷದ ನಾಯಕರಾದ ಶ್ರೀ ಶ್ರೀನಿವಾಸ ಪೂಜಾರಿ ಕೋಟ, ವಿರೋಧ ಪಕ್ಷದ ಮುಖ್ಯ ಸಚೇತಕ ರಾದ ಶ್ರೀ ವಿ.ಸುನಿಲ್ ಕುಮಾರ್ ಹಾಗೂ ಶಾಸಕರು ಗಳಾದ ಶ್ರೀ ಉಮಾನಾಥ ಕೋಟ್ಯಾನ್, ಶ್ರೀ ಹಾಲಪ್ಪ, ಶ್ರೀ ಕುಮಾರ್ ಬಂಗಾರಪ್ಪ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್ ಬೆಳ್ತಂಗಡಿ ಅವರನ್ನು ಸನ್ಮಾನಿಸಲಾಯಿತು.

ಆದರೆ, ಈ ಸನ್ಮಾನ ಕಾರ್ಯಕ್ರಮದ ಶಾಸಕರ ಪಟ್ಟಿಯಲ್ಲಿ ನಮ್ಮ ನಾಮಧಾರಿ ಸಮುದಾಯದ ಏಕೈಕ ಶಾಸಕರಾದ ಶ್ರೀ ಸುನಿಲ್ ನಾಯ್ಕ ಅವರನ್ನು ಸೇರಿಸಿರಲಿಲ್ಲ. ಇದು ಉದ್ದೇಶ ಪೂರ್ವಕವಾಗಿಯೋ ಅಥವಾ ಗೊತ್ತಾಗದೇ ಆತುರದಲ್ಲಿ ಮಾಡಿದ ಪಟ್ಟಿಯೊ? ಎಂದು ಯೋಚಿಸಲು ಹೊರಟರೆ...

ಗೊತ್ತಿರಲಿಲ್ಲ ಎನ್ನುವುದಕ್ಕೆ, ಭಟ್ಕಳ-ಹೊನ್ನಾವರ ಉಡುಪಿ ಜಿಲ್ಲೆಯ ಪಕ್ಕದಲ್ಲೇ ಹೊಂದಿಕೊಂಡಿರುವ ತಾಲ್ಲೂಕು. ಉತ್ತರ ಕನ್ನಡ ಜಿಲ್ಲೆಯ ಪೈಕಿ ಭಟ್ಕಳದ ಜನರೇ ಅತಿ ಹೆಚ್ಚು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕದಲ್ಲಿರುವದು.
ಹಾಗಿದ್ದರೆ, ಸುನೀಲ್ ನಾಯ್ಕರ ಹೆಸರು ಕೈಬಿಟ್ಟಿದ್ದು ಉದ್ದೇಶಪೂರ್ವಕವಾಗಿಯೇ? ಇರಬಹುದೇನೋ ... ನಾಮಧಾರಿಗಳ ಸಂಘಗಳು ಈಡಿಗ, ಬಿಲ್ಲವ ಸಮುದಾಯಗಳಿಗೆ ಮನ್ನಣೆ ಕೊಡುವಷ್ಟು, ಪ್ರತಿಯಾಗಿ ಆ ಸಮುದಾಯಗಳ ಸಂಘಗಳು ನಮ್ಮ ಜನರಿಗೆ ಮನ್ನಣೆ ನೀಡುವುದಿಲ್ಲ, ಎಂಬುದು ಅನೇಕ ನಾಮಧಾರಿಗಳ ಅಭಿಪ್ರಾಯವಾಗಿದೆ.

ಉದಾರಣೆಗೆ, ಪೂರ್ತಿಯಾಗಿ ನಾಮಧಾರಿಗಳೇ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಮ್ಮ ಬಹುತೇಕ ಸಂಘಗಳ ಹೆಸರಿನಲ್ಲಿ ಆರ್ಯ ಈಡಿಗ ಇರುವದು ಸಾಮಾನ್ಯ. ಜಿಲ್ಲೆಯಲ್ಲಿ ಸಂಘಗಳ ಹೆಸರಿನಲ್ಲಿ ಕೊನೆಗಾದರೂ ಕಾಣಿಸಿಕೊಳ್ಳುವ ನಾಮಧಾರಿ ಎಂಬ ಹೆಸರು, ಬೇರೆ ಯಾವುದೇ ಜಿಲ್ಲೆಯ ಈಡಿಗ ಸಂಘಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅತಿಶಯ ಎಂಬಂತೆ, ಜನಗಣತಿ ಸಂದರ್ಭದಲ್ಲಿ ಕೆಲವರು ಎಸ್ಸೇಮೆಸ್ ಮಾಡಿ ನಾಮಧಾರಿಗಳು ತಮ್ಮ ಜಾತಿಯನ್ನು ನಮೂದಿಸುವಾಗ ಈಡಿಗ ಎಂದು ಬರೆಯಬೇಕೆಂದು ಹೇಳಿದ್ದು ಉಂಟು. ಯಾರದೋ ಮಾತು ಕೇಳಿ ಜಾತಿ ಬದಲಿಸುವವರು, ಧರ್ಮವನ್ನೂ ಬದಲಿಸಬಹುದು ಅಲ್ಲವೇ?

ರಾಷ್ಟ್ರಿಯ ಬಿಲ್ಲವರ ಮಹಾಮಂಡಲ... ಈ ಹೆಸರು ತುಂಬಾ ಅರ್ಥಗರ್ಭಿತವಾಗಿದೆ, ಬಹುತೇಕ ಬಿಲ್ಲವರೇ ಇದ್ದರಿಂದ ಆ ಹೆಸರು ಸೂಕ್ತ ಎನಿಸುತ್ತದೆ. ಬಿಲ್ಲವರು ಈ ಆರ್ಯ ಈಡಿಗ ಹೆಸರಿಗೆ ಹೆಚ್ಚು ಮನ್ನಣೆ ನೀಡಿಲ್ಲ. ಎಲ್ಲರಿಗೂ ಗೊತ್ತಿರುವ ಹಾಗೆ ಬಿಲ್ಲವರ ಸಂಘದ ಹೆಸರಲ್ಲಿ ಈಡಿಗ ಅಥವಾ ನಾಮಧಾರಿ ಸೇರ್ಪಡಿಸುವ ಪದ್ಧತಿಯೇ ಇಲ್ಲ. ಅಂದಹಾಗೇ, ಬಿಲ್ಲವರ ಸಂಘಗಳು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಾಗೂ ಪುಣೆ, ಮುಂಬಯಿ ಎಲ್ಲೆಂದರಲ್ಲಿ ಇದೆ. ಅಲ್ಲಿ ಎಲ್ಲಿಯೂ ಆರ್ಯ ಈಡಿಗ ಹೆಸರು ಇಲ್ಲದಿದ್ದರೂ ಸಮುದಾಯದ ಒಂದು ಅವಿಭಾಜ್ಯ ಅಂಗವೆಂದೇ ಹೇಳಲಾಗುತ್ತದೆ. ಹಾಗೂ ಇವರ ಸಂಘಗಳು ಸರ್ಕಾರದಿಂದ ಹಾಗೂ ಆಯ್ಕೆಯಾದ ಸಮುದಾಯದ ಜನಪ್ರತಿನಿಧಿಗಳಿಂದ ನೇರವಾಗಿ ಪ್ರತಿಫಲಗಳನ್ನು ಪಡೆಯುತ್ತಲೇ ಇದೆ. ಈ ವಿಷಯದಲ್ಲಿ ಬಿಲ್ಲವರಿಂದ ನಾಮಧಾರಿಗಳು ಕಲಿಯುವುದು ಸಾಕಷ್ಟಿದೆ.

ರಾಷ್ಟೀಯ ನಾಮಧಾರಿ ಮಹಾಮಂಡಲದ ಬಗ್ಗೆ ಈಗಾಲಾದರೂ ನಾಮಧಾರಿಗಳು ಚಿಂತಿಸಬೇಕಿದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್