ಹಿಂದೂ ಮುಖಂಡರಾದ ಸೂರಜ್ ನಾಯ್ಕ ಹಾಗೂ ಶಂಕರ ನಾಯ್ಕ ಮೇಲಿನ ಪ್ರಕರಣ ಹಿಂಪಡೆಯಿರಿ: ಜಿಲ್ಲಾ ನಾಮಧಾರņ
ಕಾರವಾರ : ಹಿಂದೂ ಸಮಾಜದ ಮುಖಂಡ ಹಾಗೂ ಬಿಜೆಪಿಯ ಕುಮಟಾ-ಹೊನ್ನಾವರ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಸೂರಜ್ ನಾಯ್ಕ ಸೋನಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರಾದ ಭಟ್ಕಳದ ಶಂಕರ ನಾಯ್ಕ ಅವರ ಮೇಲೆ ದುರುದ್ದೇಶಪೂರ್ವಕವಾಗಿ ದಾಖಲಿಸಿರುವ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಬೇಕು, ಎಂದು ಒತ್ತಾಯಿಸಿ ಜಿಲ್ಲಾ ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಸದಸ್ಯರು ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.
ಸೂರಜ್ ನಾಯ್ಕ ಅವರು ತಮ್ಮ ಕಾಲೇಜು ಜೀವನದಿಂದಲೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಗುರತಿಸಿಕೊಂಡಿರುವವರು. ಕ್ರೀಡೆ ಹಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು, ಸಮಾಜ ಸೇವೆಗಳನ್ನು ಜಾತಿಭೇದವಿಲ್ಲದೆ ಮಾಡುತ್ತ ಬಂದಿರುವವರು. ಅವರು ಯಾವುದೇ ರೀತಿಯ ದೌರ್ಜನ್ಯ ಅಥವಾ ದಬ್ಬಾಳಿಕೆಯನ್ನು ನಡೆಸಿಲ್ಲ, ಎಂದು ತಿಳಿಸಿದರು.
ಶಂಕರ ನಾಯ್ಕ ಅವರು ಬಡವರಿಗೆ ಸಹಾಯ ಹಸ್ತ ನೀಡಿ, ಕುಂದು ಕೊರತೆಯ ಬಗ್ಗೆ ಸ್ಪಂದಿಸುತ್ತಿದ್ದರು. ಆದರೆ ದುರುದ್ದೇಶಪೂರ್ವಕವಾಗಿ ಇವರಿಬ್ಬರ ಮೇಲೆ ಪ್ರಕರಣಗಳ್ನು ದಾಖಲಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅವರಿಗೆ ನ್ಯಾಯ ದೊರಕಿಸಿ ಕೊಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಎಂದು ಆಗ್ರಹಿಸಿದರು.
ಪ್ರಮುಖರಾದ ಅಂಕೋಲಾದ ಗಜಾನನ ನಾಯ್ಕ, ಯಲ್ಲಾಪುರದ ಸೋಮೇಶ್ವರ ನಾಯ್ಕ, ಭಟ್ಕಳದ ವಾಸು ನಾಯ್ಕ, ನವೀನ ನಾಯ್ಕ, ಹರೀಶ ನಾಯ್ಕ ಬಂಕಿಕೊಡ್ಲ, ಕುಮಟಾದ ದಿವಾಕರ ನಾಯ್ಕ ಇದ್ದರು.