ನಾಮಧಾರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರ
ಕುಮಟಾ : ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಣಯಿಸುವ ಪರೀಕ್ಷೆಯಾದ ಎಸ್.ಎಸ್.ಎಲ್.ಸಿ.ಯ ವಾರ್ಷಿಕ ಪರೀಕ್ಷೆ ಬಹುತೇಕ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ, ಬಹಳ ಹಿಂದಿನ ಕಾಲದಿಂದಲೂ ಕಾಡುತ್ತಲೇ ಇದೆ. ಆದ್ದರಿಂದ, ನಾಮಧಾರಿ ಸಮುಧಾಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಮುಂಬರುವ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಮಾನಸಿಕ ಹಾಗೂ ಶೈಕ್ಷಣಿಕ ಸ್ತೈರ್ಯ ತುಂಬುವ ಉದ್ದೇಶದಿಂದ ಕುಮಟಾ ನಾಮಧಾರಿ ಸಂಘ ಪ್ರತಿವರ್ಷದಂತೆ ಈ ವರ್ಷವೂ ಪರೀಕ್ಷಾ ಪೂರ್ವಸಿದ್ಧತಾ ಶಿಬಿರವನ್ನು ಏರ್ಪಡಿಸಿದೆ.
ಈ ಮಾರ್ಚ್ ತಿಂಗಳ 17 ಮತ್ತು 18 ರಂದು ಕುಮಟಾ ಬಗ್ಗೋಣ ರಸ್ತೆಯಲ್ಲಿರುವ ನಾಮಧಾರಿ ಸಭಾಭವನದಲ್ಲಿ ನಾಮಧಾರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರ ಏರ್ಪಡಿಸಲಾಗಿದೆ. ತಾಲೂಕು ನಾಮಧಾರಿ ನೌಕರರ ಸಂಘದ ವತಿಯಿಂದ ಆಯೋಜಿಸಲಾದ ಈ ಕಾರ್ಯಾಗಾರವನ್ನು, 17ನೇ ತಾರೀಕಿನಂದು ಬೆಳಿಗ್ಗೆ 9ಗಂಟೆಗೆ, ಕುಮಟಾ ತಾಲೂಕಿನ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷರಾದ ಜೈವಂತ ಸಾರಂಗ ನಾಯ್ಕ ಉದ್ಘಾಟನೆ ಮಾಡಲಿದ್ದಾರೆ.

ತಾಲೂಕಿನ ನಾಮಧಾರಿ ನೌಕರರ ಸಂಘದ ಅಧ್ಯಕ್ಷರಾದ ಏನ್.ಆರ್.ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭಕ್ಕೆ ಅಥಿತಿಗಳಾಗಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ವೀಣಾ ಸೂರಜ್ ನಾಯ್ಕ ಸೋನಿ ಹಾಗೂ ರತ್ನಾಕರ್ ನಾಯ್ಕ. ಉಪನ್ಯಾಸಕರಾದ ಉದಯ ನಾಯ್ಕ, ಉದ್ದಿಮೆದಾರರಾದ ಎಚ್.ಅರ್.ನಾಯ್ಕ ಮತ್ತು ಎಚ್.ಏನ್. ನಾಯ್ಕ ಆಗಮಿಸಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ನಾಮಧಾರಿ ವಿಧ್ಯಾರ್ಥಿಗಳು ಈ ಪರೀಕ್ಷಾ ಪೂರ್ವಸಿದ್ಧತಾ ಕಾರ್ಯಾಗಾರದಲ್ಲಿ ಭಾಗವಹಿಸಿ ಕಾರ್ಯಾಗಾರದ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕಾಗಿದೆ.