ಸೂರಜ್ ನಾಯ್ಕ ಸೋನಿ ಕುಮಟಾ ಕ್ಷೇತ್ರದ ನೆಚ್ಚಿನ ಅಭ್ಯರ್ಥಿ
ಕುಮಟಾ : ಕಳೆದ ಬಾರಿ ನಾಮಧಾರಿ ಜಾತಿಯ ಯುವ ಮುಖಂಡರಾಗಿ ಹೊರಹೊಮ್ಮಿ ಚುನಾವಣೆಯಲ್ಲಿ ಸ್ಪರ್ಧಿಸಿದವರು ಸೂರಜ್ ನಾಯ್ಕ ಸೋನಿ. ಪ್ರಚಾರ, ಪರಿಚಯ ಮತ್ತು ರಾಜಕೀಯ ವರಸೆಯ ಅನುಭವದ ಕೊರತೆಯ ಕಾರಣವೇನೋ, ಚುನಾವಣೆ ಎದುರಿಸಿದ ಸೂರಜ್ ಸೋನಿ ಗೆ ಪ್ರಥಮ ಅನುಭವ ಅಷ್ಟು ಚೆನ್ನಾಗಿ ಏನೋ ಇರಲಿಲ್ಲ. ಆದರೆ, ಅಲ್ಲಿಂದ ಮುಂದೆ ಅವರು ಸಾದನೆ ಮಾಡಿ ಜಿಲ್ಲೆಯ ಹಿಂದೂ ಮುಖಂಡರಾಗಿ ಬೆಳೆದಿದ್ದಾರೆ, ಹಾಗೇ ಪಕ್ಷವನ್ನೂ ಸಂಘಟಿಸಿದ್ದಾರೆ.

ಪಡೆದ ಸೋಲನ್ನು ಸ್ಪರ್ಧಾ ಮನೋಭಾವದಿಂದ ಒಪ್ಪಿಕೊಂಡ ಅವರು, ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ವರ್ಷಗಳ ಕಾಲ ಕ್ಷೇತ್ರದ ಎಲ್ಲಾ ಭಾಗಕ್ಕೂ ಸ್ವತಃ ನಿರಂತರ ಭೇಟಿ ನೀಡಿ, ಎಲ್ಲಾ ವರ್ಗದವರ ಸುಖ ದುಃಖಗಳಲ್ಲಿ ಸಮನಾಗಿ ಬಾಗಿಯಾಗಿ ಪಕ್ಷದ ಸಂಘಟನೆಗಾಗಿ ಹಗಲಿರುಳು ಎನ್ನದೇ ದುಡಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿ ಅನೇಕ ಹೋರಾಟ ಕೂಡ ಮಾಡಿದ್ದಾರೆ. ಅದರಲ್ಲೂ ಹಿಂದೂಗಳ ಹಾಗೂ ಹಿಂದೂ ಸಮಾಜದ ಹಿತಕ್ಕಾಗಿ ಸೋನಿ ತೆಗೆದುಕೊಂಡ ಕೆಲವು ದಿಟ್ಟ ನಿರ್ದಾರ ಮತ್ತು ಹೋರಾಟದಿಂದ ಅವರು ಇತರೆ ಧರ್ಮದವರ ಕೆಂಗಣ್ಣಿಗೆ ಗುರಿಯಾಗ ಬೇಕಾಯಿತು. ಈ ಕಾರಣಕ್ಕಾಗಿ ಕೆಲವೊಂದು ಘಟನೆಯಲ್ಲಿ ಅವರ ಮೇಲೆ, ಅವರ ವಾಹನದ ಮೇಲೆಯೂ ದುಷ್ಕರ್ಮಿಗಳಿಂದ ಹಲ್ಲೆಗಳು ನಡೆದಿವೆಯಂತೆ. ಪಕ್ಷ ಸಂಘಟನೆ ಹಾಗೂ ಹಿಂದೂಪರ ಹೋರಾಟಗಳಿಂದ ಎಷ್ಟೆಲ್ಲಾ ಕಷ್ಟ, ಆತಂಕ ಮತ್ತು ಅಪಾಯ ಎದುರಿಸಿದ ಕ್ಷೇತ್ರದಲ್ಲಿ ಪಕ್ಷದ ನೆಲೆ ಗಟ್ಟಿಗೊಳಿಸಿದ ಸೂರಜ್ ಸೋನಿ, ಈಗ ಚುನಾವಣಾ ಟಿಕೆಟ್ ಗಾಗಿ ಹೊಸದಾಗಿ ಪಕ್ಷ ಸೇರಿದವರೊಂದಿಗೆ ಸ್ಪರ್ಧೆ ಎದುರಿಸುವಂತಾಗಿದೆ.
ಕಳೆದ ತಿಂಗಳ ಕುಮಟಾ-ಹೊನ್ನಾವರ ಗಲಭೆಯಲ್ಲಿ ಅನೇಕ ಅಮಾಯಕ ಮುಗ್ಧ ಹಿಂದೂ ಯುವಕರು ಬಂಧನಗೊಳಗಾಗಿದ್ದರು. ಸೋನಿ ಅವರನ್ನೂ ಬಂಧಿಸುವ ಸಾಕಷ್ಟು ಪ್ರಯತ್ನವೂ ನಡೆದಿತ್ತು ಎನ್ನಲಾಗಿದೆ. ಅಂತಹ ಪ್ರಕ್ಷುಬ್ಧ ಪರಿಸ್ತಿತಿಯಲ್ಲೂ ಇವರು ಅಮಾಯಕ ಹಿಂದೂ ಯುವಕರ ರಕ್ಷಣೆಗೆ ಪರೋಕ್ಷವಾಗಿ ಸ್ಪಂದಿಸಿ, ತಮ್ಮ ಸಹೋದರನನ್ನು ಬಂದನಕ್ಕೊಳಗಾದವರ ಸಹಾಯಕ್ಕೆ ಕಳುಹಿಸಿದ್ದರು. ಅದಕ್ಕೂ ಮೊದಲು ಭಟ್ಕಳದ ನಗರಸಭೆ ತೆರವು ಕಾರ್ಯಾಚರಣೆಯನ್ನೂ ಪ್ರತಿಭಟಿಸಿ ಬಡವರ ಪರವಾಗಿ ಸಾಕಷ್ಟು ಹೊರಟ ನಡೆಸಿದ್ದು ಇಲ್ಲಿ ಸ್ಮರಿಸಲೇಬೇಕು. ಹೀಗೆ ಹೇಳುತ್ತಹೊದರೆ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇವರ ಒಳ್ಳೆಯ ಕಾರ್ಯಗಳಿಂದ ಈಗ ಕುಮಟಾದಲ್ಲಿ ಬಿಜೆಪಿ ಸೀಟ್ ಗೆ ಬೇಡಿಕೆ ಹೆಚ್ಚಿದೆಯಂತೆ, ಹಿಂದೂಗಳ ಮುಖಂಡರಾಗಿ ಜಿಲ್ಲೆಯಲ್ಲಿ ಹೆಸರುವಾಸಿಯಾಗುತ್ತಿರುವ ಸೂರಜ್ ಸೋನಿ ಬದಲು ಬೇರೆಯವರಿಗೆ ಟಿಕೆಟ್ ಕೊಡಿಸಲು ಕೆಲವರು ತೆರೆಮರೆಯಲ್ಲಿ ಸಂಚು ನಡೆಸಿದ್ದಾರೆನ್ನಲಾಗಿದೆ.
ಹೌದು, ಸದ್ಯಕ್ಕೆ ಎದ್ದಿರುವ ಉಹಪೋಹಗಳ ಪ್ರಕಾರ, ಕುಮಟಾದ ಮಾಜಿ ಶಾಸಕರಾದ ದಿನಕರ ಶೆಟ್ಟಿಯವರಿಗೆ ಕಮಲ ಪಾಳಯದ ಟಿಕೆಟ್ ಸಿಗುವ ಸಾದ್ಯತೆಗಳಿವೆ, ಅಂತೆ. ಶೆಟ್ಟಿಯವರು ಹೆಚ್ಚಾಗಿ ಜಾತ್ಯತೀತ ಹಿನ್ನೆಲೆಯಿಂದ ಬಂದಿರುವವರು, ರಾಮಕೃಷ್ಣ ಹೆಗಡೆ, ಅರ್ ವಿ ದೇಶಪಾಂಡೆ ಯವರಿಗೆ ಆಪ್ತರಾಗಿದ್ದವರಂತೆ. ರಾಜಕೀಯ ಜೀವನದಲ್ಲಿ ಮೊದಲೆರಡು ಬಾರಿ ಚುನಾವಣೆ ಸೋತರೂ ಮೂರನೆ ಬಾರಿ ಆಯ್ಕೆಯಾಗಿ ಶಾಸಕರಾಗಿದ್ದ ಇವರು, ಪುನಃ ಮತ್ತೊಮ್ಮೆ ಸೋತು ಮಾಜಿ ಶಾಸಕರಾಗಿದ್ದಾರಂತೆ. ಕ್ಷೇತ್ರದ ಮತದಾರರು ಕಮಲದ ಕಡೆಗೆ ಹೆಚ್ಚು ಒಲವು ತೋರಿದ್ದು ತಿಳಿದೋ, ಏನೋ ಗೊತ್ತಿಲ್ಲ, ತಮ್ಮ ಜಾತ್ಯತೀತ ಮನಸ್ಥಿತಿಗೆ ಸರಿಹೊಂದುವ ಜಾತ್ಯತೀತ ಜನತಾದಳವನ್ನು ಬಿಟ್ಟು, ಈಗಾಗಲೇ ಬಿಜೆಪಿ ಸೇರಿದ್ದಾರೆ.
ವಿಧಾನಸಭೆ ಚುನಾವಣೆಗಳ ಇತಿಹಾಸವನ್ನು ಅವಲೋಕಿಸುವುದಾದರೆ, ಹಿಂದೆ ಚಿತ್ತರಂಜನ್ ದಾಸ್ ಸಮಯದಲ್ಲಿ ಮತ್ತು ಚಿತ್ತರಂಜನ್ ರವರ ಕೊಲೆಯ ನಂತರ ನಡೆದ ಚುನಾವಣೆಗಳಲ್ಲಿ ಹಿಂದುತ್ವ ಅದಾರಿತವಾಗಿ ಮತಚಲಾವಣೆ ನಡೆದಿದ್ದು ಇತಿಹಾಸ. ಆದರೆ ಈ ಬಾರಿ ನಡೆದ ಕೆಲವು ಅಹಿತಕರ ಘಟನೆಗಳಿಂದ ಬೇಸತ್ತ ಹಿಂದೂಗಳು, ಇನ್ನೊಮ್ಮೆ ಇತಿಹಾಸ ಮರುಕಳಿಸಿ, ಹಿಂದುತ್ವ ಆಧಾರಿತ ಮತಚಲಾವಣೆ ಮಾಡುವ ಸಾಧ್ಯತೆಗಳು ಹೆಚ್ಚು ಎಂದು ತಿಳಿದುಬಂದಿದೆ. ಸ್ಥಳಿಯ ಸಮೀಕ್ಷೆ ಪ್ರಕಾರ ಕ್ಷೇತ್ರದ ಬಿಜೆಪಿ ವರ್ಚಸ್ಸಿಗೆ ಸೂರಜ್ ಅತಿ ಸೂಕ್ತ ಅಭ್ಯರ್ಥಿ ಆಗಿದ್ದಾರೆ.
ಇನ್ನೂ ರಾಜಕೀಯ ಲೆಕ್ಕಾಚಾರ ಮಾಡುವುದಾದರೆ, ಹಾಲಿ ಶಾಸಕರಾದ ಶಾರದಾ ಶೆಟ್ಟಿಯವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ಬಹುತೇಕ ಖಚಿತವಂತೆ. ಒಂದೊಮ್ಮೆ, ಕೈ ಮತ್ತು ಕಮಲ ಎರಡೂ ಪಕ್ಷಗಳ ಅಭ್ಯರ್ಥಿಗಳಾಗಿ ಇಬ್ಬರು ಶೆಟ್ಟಿ ಸಮಾಜದವರೇ ಪ್ರತಿಸ್ಪರ್ದಿಗಳಾದರೇ ಸಹಜವಾಗಿ, ಇಬ್ಬರ ಸ್ಪರ್ಧೆಯಲ್ಲಿ ತೆನೆಹೊತ್ತ ಮಹಿಳೆಗೆ ಗೆಲುವು ಬಹುತೇಕ ನಿಶ್ಚಿತ.

ಮೇಲ್ಜಾತಿಯವರ ಹಿಡಿತದಲ್ಲಿರುವ ಪಕ್ಷ, ಎಂಬ ಆರೋಪ ಸದಾ ಎದುರಿಸುತ್ತಿರುವ ಪಕ್ಷ ಬಿಜೆಪಿ, ಹಿಂದುಳಿದ ವರ್ಗದವರನ್ನು ಕೇವಲ ಹೋರಾಟಕ್ಕೆ ಮತ್ತು ಇತರೆ ಕಠಿಣ ಕೆಲಸಗಳಿಗೆ ಉಪಯೋಗಿಸಿಕೊಂಡು, ಚುನಾವಣೆ ಸಂದರ್ಭದಲ್ಲಿ ಬೇರೆಯವರಿಗೆ ಟಿಕೆಟ್ ನೀಡುತ್ತದೆ, ಎಂಬುದು ಬಹುತೇಕರ ಅನಿಸಿಕೆ. ಇದನ್ನು ಬಿಜೆಪಿ ಸುಳ್ಳು ಎಂದು ನಿರೂಪಿಸಬೇಕೇ ಹೊರತು ಅನವಶ್ಯಕವಾಗಿ ಹಿಂದುಳಿದ ಸಮಾಜಗಳ ಕೆಂಗಣ್ಣಿಗೆ ಗುರಿಯಾಗಬಹುದು. ಬಿಜೆಪಿ ಕುಮಟಾ ಕ್ಷೇತ್ರದಲ್ಲಿ ನಾಮಧಾರಿ ಸಮಾಜಕ್ಕೆ ದ್ರೋಹ ಮಾಡಿದಲ್ಲಿ ಇದರ ಪರಿಣಾಮ ಉತ್ತರ ಕನ್ನಡ ಜಿಲ್ಲಾದ್ಯಂತ ಎದುರಿಸುವ ಎಲ್ಲಾ ಸಾದ್ಯತೆಗಳಿವೆ.
ಸೂರಜ್ ನಾಯ್ಕ ಸೋನಿ ನಡೆಸಿದ ಸತತ ಹೋರಾಟ ಮತ್ತು ಸಹಾಯ ಮನೋಭಾವದಿಂದ ಹಾಗೇ ಬದಲಾದ ರಾಜಕೀಯ ಸನ್ನಿವೇಶದಿಂದ ಕುಮಟಾ ಕ್ಷೇತ್ರದಲ್ಲಿ ಈಗ ಬಿಜೆಪಿ ಅಲೆ ಎದ್ದಿದೆ. ಈ ಅಲೆಯ ಸದುಪಯೋಗ ಪಡೆದುಕೊಳ್ಳುತ್ತ, ಸೂರಜ್ ನಾಯ್ಕ ಸೋನಿ ಅವರಿಗೆ ಚುನಾವಣಾ ಟಿಕೆಟ್ ನೀಡಿದಲ್ಲಿ ಬಿಜೆಪಿಗೆ ಕುಮಟಾ ಕ್ಷೇತ್ರದ ಒಂದು ಶಾಸಕ ಸ್ಥಾನ ಶತಪ್ರತಿಷತ್ ಖಚಿತ.