ಭಟ್ಕಳ ಕ್ಷೇತ್ರದಿಂದ ಸ್ಪರ್ಧಿಸಲು ಶಿವಾನಂದ ನಾಯ್ಕ ಇಂಗಿತ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮಾಜಿ ಉಸ್ತುವಾರಿ ಮಂತ್ರಿಗಳು ಶ್ರೀ ಶಿವಾನಂದ ನಾಯ್ಕರು 25/12/2017 ರಂದು ಕಾರವಾರದಲ್ಲಿ ನಡೆಸಿದ ಪತ್ರಿಕಾಗೊಷ್ಟಿ ನಡೆಸಿ ಮಾತನಾಡಿದರು. ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ತಾವು ಶಾಸಕ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿರುವುದಾಗಿ ಹೇಳಿದರು. "ನಾನು ಸಹ ಭಟ್ಕಳ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಪಕ್ಷ ಟಿಕೆಟ್ ನೀಡುವ ಭರವಸೆ ಇದೆ, ನಾನು ಭಟ್ಕಳ ಕ್ಷೇತ್ರದಿಂದ ಎರಡು ಬಾರಿ ಶಾಸಕನಾಗಿ ಪ್ರತಿನಿಧಿಸಿದ್ದೆನೆ. ಜನಬೆಂಬಲ ಈಗಲೂ ಬೆಕಾದಷ್ಟು ಇದೆ. ಹಾಗಾಗಿ ಪಕ್ಷದ ವರಿಷ್ಟರು ಜನಪ್ರೀಯತೆ ಗುರುತಿಸಿ ಟಿಕೆಟ್ ನೀಡುವ ಭರವಸೆ ಇದೆ" ಎಂದರು.
ಬಿಜೆಪಿಗೆ ಗಟ್ಟಿ ನೆಲೆ ನಮ್ಮ ಕಾಲದಲ್ಲಿ ಸಿಕ್ಕಿದೆ, ಜನಪರ ಕೆಲಸಗಳು ನಾನು ಸಚಿವನಾಗಿದ್ದ ಅವಧಿಯಲ್ಲಿ ಆಗಿವೆ ಹಾಗಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ರಾಜಕೀಯದ ಅಪಾರ ಅನುಭವವಿದ್ದು , ಅವರು ಟಿಕಟ್ ನೀಡುವಾಗ ಉತ್ತಮ ನಿರ್ಧಾರವನ್ನೇ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.