ಪುಷ್ಪಾ ನಾಯ್ಕ ಪ್ರದೇಶ ಕಾಂಗ್ರೇಸ್ ಸಮಿತಿ ಕಾರ್ಯದರ್ಶಿಯಾಗಿ ನೇಮಕ
ಬೆಂಗಳೂರು : ರಾಜ್ಯ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಹೊನ್ನಾವರದ ಪುಷ್ಪಾ ನಾಯ್ಕ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನಗರಬಸ್ತಿಕೇರಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಪುಷ್ಪಾ ನಾಯ್ಕ ಆಯ್ಕೆಯಾಗಿದ್ದರು. ಪುಷ್ಪಾ ನಾಯ್ಕರವರ ಕಾರ್ಯವೈಕರಿಗೆ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದ್ದು, ಪಕ್ಷದಲ್ಲಿ ಇನ್ನೂ ಹೆಚ್ಚಿನ ಅಧಿಕಾರ ದೊರಕಿದಂತಾಗಿದೆ.
ಈ ಬಗ್ಗೆ ಕಾಂಗ್ರೇಸ್ ನ ರಾಷ್ಟ್ರಧ್ಯಕ್ಷರಾದ ರಾಹುಲ್ ಗಾಂಧಿಯವರು ಈ ಕುರಿತು ಅಧಿಕೃತ ಆದೇಶ ನೀಡಿದ್ದಾರೆಂದು ತಿಳಿದು ಬಂದಿದೆ.