logo logo

ಕುವೆಂಪು ಜಯಂತಿ: ಗೂಗಲ್ ಕನ್ನಡಾಕ್ಷರದಲ್ಲಿ

ಬೆಂಗಳೂರು : ವರಕವಿ ಕುವೆಂಪುರವರ ನೇ ಜನ್ಮದಿನೋತ್ಸವದ ಪ್ರಯುಕ್ತ ಜಾಲತಾಣಗಳ ರಾಜ ಗೂಗಲ್ ತನ್ನ ವೆಬ್ ಸೈಟ್ ನಲ್ಲಿ ಕನ್ನಡಿಗರಿಗೆ ಮತ್ತು ಕುವೆಂಪುರವರಿಗೆ ಅತಿಗೌರವ ಸೂಚಿಸುತ್ತ ಕನ್ನಡಲ್ಲೇ ಗೂಗಲ್ ಎಂದು ಬರೆದು ಕುವೆಂಪುರವರ ಭಾವಚಿತ್ರವನ್ನು ಹಾಕಿದ್ದಾರೆ.
ಅಂತರ್ಜಾಲ ಬಳಕೆಯಲ್ಲಿ ಕನ್ನಡಿಗರ ಪ್ರಾಬಲ್ಯ ದಿನೇದಿನೇ ಹೆಚ್ಚುತ್ತಿದೆ. ಅಷ್ಟಲ್ಲದೇ, ಮೊದಲು ಇಂಗ್ಲಿಷ್ ವೆಬ್ಸೈಟ್ ಗಳನ್ನು ಬಳಸುತ್ತಿದ ಕನ್ನಡಿಗರು ಈಗ ಕನ್ನಡ ವೆಬ್ಸೈಟ್ ಗಳನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ. ಇದಲ್ಲದೆ ಜಿಯೋ ಸೇವೆ ಶುರುವಾದಾಗಿನಿಂದ ಇಂಟರ್ನೆಟ್ ಎಂಬುದು ಜನಸಾಮಾನ್ಯರ ಜೀವನದಲ್ಲಿ ಹಾಸುಹೊಕ್ಕಾಗಿ ಬಿಟ್ಟಿದೆ.
ನವೆಂಬರ ಒಂದರಂದು ಕನ್ನಡ ರಾಜ್ಯೋತ್ಸವದಂದು ಗೂಗಲ್ ಮ್ಯಾಪ್ (ನಕ್ಷೆ) ನಲ್ಲಿ ಕಸ್ತೂರಿ ಕನ್ನಡಾಕ್ಷರಗಳು ಗೋಚರಗೊಂಡವು. ತಮಿಳು, ತೆಲಗು ಬಾಷಾಕ್ಷರಗಳು ಆಗಾಗಲೇ ಗೂಗಲ್ ನಕ್ಷೆಯಲ್ಲಿ ಲಭ್ಯವಿದ್ದು ಕನ್ನಡ ಅಕ್ಷರಗಳೂ ಬೇಕೆಂದು ಟೆಕ್ಕಿ ಕನ್ನಡಿಗರಿಂದ ಅಂತರ್ಜಾಲದಲ್ಲಿ ಅಭಿಯಾನಗಳನ್ನು ನಡೆಸಲಾಗಿತ್ತು, ಆದರೆ ಏನು ಪ್ರಯೋಜನವಾಗಿರಲಿಲ್ಲ. ಎಲ್ಲಿಯವರೆಗೂ ಕನ್ನಡಿಗರ ಬಲ ಪ್ರದರ್ಶನವಾಗಲಿಲ್ಲವೋ ಅಲ್ಲಿಯವರೆಗೂ ಕಾಯಬೇಕಾಯ್ತು. ಈ ಹಿಂದೆ ಕನ್ನಡಿಗರ ಕಣ್ಮಣಿ ರಾಜಣ್ಣರವರ ಜನ್ಮದಿನದಂದೂ ಇದೇರಿತಿ ಗೌರವ ಸೂಚಿಸಿದ್ದು ನೆನೆಸಬಹುದು. ಅದೇ ದಿನದಿಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜನ್ಮದಿನವಾಗಿದ್ದರೂ ರಾಜಣ್ಣನವರಿಗೆ ಆ ಗೌರವವನ್ನು ನೀಡಿ ಕನ್ನಡಿಗರಿಗೆ ಪ್ರಾಮುಖ್ಯತೆಯನ್ನು ಗೂಗಲ್ ನೀಡಿದೆ.
ಕನ್ನಡ ರಾಜ್ಯ, ಕನ್ನಡ ಭಾಷೆಗೆ ಹೆಚ್ಚೇನೂ ಸಂಬಂದವಿಲ್ಲದ ಸಂಸ್ಥೆಯೊಂದು ಕನ್ನಡದ ವರಕವಿ ಜನ್ಮದಿನಾಚರಣೆ ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ರಾಜಕೀಯ ಲಾಭಕ್ಕಾಗಿ ಸಂಬಂದವಿಲ್ಲದವರ ಜಯಂತಿ ಮಾಡುವ ಸದ್ಯದ ಪರಿಸ್ಥಿತಿಯಲ್ಲಿ ಇದೊಂದು ಉತ್ತಮ ಬೆಳವಣಿಗೆ. ದನ್ಯವಾದ ಗೂಗಲ್

ನಾಮಧಾರಿ ರುಚಿ

MORE RECIPE...

ಬ್ಲಾಗ್