logo logo

ಬೆಂಗಳೂರು ನಾಮಧಾರಿ ಸಂಘದ ವತಿಯಿಂದ ಹೊಸವರ್ಷಾಚರಣೆ

ಬೆಂಗಳೂರು : ಇದೇ ಡಿಸೆಂಬರ್ 31ರಂದು ಸಂಜೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನೊಳಗೊಂಡ ಹೊಸವರ್ಷಾಚರಣೆಯನ್ನು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಸಂಜೆ 06ಗಂಟೆಗೆ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ನಾಮಧಾರಿ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ನಂತರ ಹೊಸ ವರ್ಷದ ಸಂಭ್ರಮಾಚರಣೆ ರಾತ್ರಿ ಊಟದೊಂದಿಗೆ ರಾತ್ರಿ 9 ಗಂಟೆಗೆ ಮುಕ್ತಾಯವಾಗಲಿದೆ ಎಂದು ಕಾರ್ಯಕಾರಿ ಸಭೆಯಲ್ಲಿ ನಿರ್ಣಯಿಸಲಾಯಿತು. ಸಂಘದ ಸದಸ್ಯರಿಗಷ್ಟೇ ಸೀಮಿತವಾಗಿರದೆ ನಾಮಧಾರಿ ಸಮಾಜದವರಿಗೆಲ್ಲ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು.
logo

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ರುಪಾಯಿ 250/- ರಂತೆ ಪ್ರವೇಶ ಶುಲ್ಕ ಇಡಲಾಗಿದೆ ಎಂದು ಸಂಘದ ಕಾರ್ಯದರ್ಶಿಗಳಾದ ಡಿ.ಕೆ.ನಾಯಕರವರು ನ್ಯೂಸ್.ನಾಮಧಾರಿ.ಕಂ ಗೆ ತಿಳಿಸಿದ್ದಾರೆ. ಪ್ರವೇಶ ಶುಲ್ಕಕ್ಕೆ ತಕ್ಕ ಉತ್ತಮ ಊಟೋಪಚಾರದ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ನಾಮಧಾರಿ ಬಾಂದವರು ಈ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬೇಡಿಕೊಂಡಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಇದೇ ಮೊದಲ ಬಾರಿಗೆ ಬೆಂಗಳೂರಿನ ನಾಮಧಾರಿ ಸಂಘದ ವತಿಯಿಂದ ಈ ರೀತಿ ಸಾಂಸ್ಕ್ರತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷದ ಸರ್ವಸದಸ್ಯರ ಸಭೆಯಂದು ಸಂಘದಲ್ಲಿ ಮಹಿಳೆಯರ ಸಮನಾದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಮಹಿಳಾ ವಿಭಾಗವನ್ನು ಶುರುಮಾಡಿದ್ದರು, ಈಗ ಇದೇ ಮಹಿಳಾ ವಿಭಾಗದ ಸದಸ್ಯರಿಗೆ ಸದರಿ ಕಾರ್ಯಕ್ರಮದ ವಸ್ತುವಾರಿಯನ್ನು ವಹಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮದ್ಯಪಾನ ನಿಷೆದಿಸಲಾಗಿದ್ದು, ಮದ್ಯಪ್ರಿಯರಿಗೆ ಬಹುಷಃ ಬೇಸರ ಎನಿಸಬಹುದು.

ನಾಮಧಾರಿ ರುಚಿ

MORE RECIPE...

ಬ್ಲಾಗ್