ಪರೇಶ ಮೆಸ್ತ ಕುಟುಂಬದ ಸಹಾಯಕ್ಕೆ ದಾವಿಸಿದ ಯಶೊಧರ ನಾಯ್ಕ
ಹೊನ್ನಾವರ : ಜಿಲ್ಲೆಯ ಹಿರಿಯ ಬಿ.ಜೆ.ಪಿ. ಮುಖಂಡರಾದಂತ ಯಶೊಧರ ನಾಯ್ಕರವರು ಇಂದು ಹೊನ್ನಾವರದಲ್ಲಿ ಮೃತರಾದ ದುರ್ದೈವಿ ಪರೇಶ ಮೆಸ್ತರವರ ಮನೆಗೆ ತೆರಳಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರೇಶ ಮೆಸ್ತರವರ ಆತ್ಮಕ್ಕೇ ಶಾಂತಿ ಕೋರಿದರು. ಇದೇ ಸಂದರ್ಬದಲ್ಲಿ ಸಂತ್ರಸ್ತ ಕುಟುಂಬಕ್ಕೆ ತಮ್ಮ ಸ್ವಂತ ಕೈಯಿಂದ 50,000/- ಧನಸಹಾಯವನ್ನು ನೀಡಿದರೆಂದು ತಿಳಿದುಬಂದಿದೆ.
ಅಮಾನುಷವಾಗಿ ಹತ್ಯೆಯಾಗಿರುವ ಪರೇಶ ಮೇಸ್ತ ಸಾವಿನ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಪಾರ ಜನಾಕ್ರೋಶಕ್ಕೆ ಕಾರಣವಾಗಿದೆ. ಶಾಂತಿಯ ಉರು ಆಗಿದ್ದ ಹೊನ್ನಾವರ ಮತಾಂದರ ಪುಂಡಾಟಿಕೆಗೆ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ. ಈ ಹತ್ಯೆಗೆ ಸಂಬಂದಿಸಿದಂತೆ ಅನೇಕ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಎಂ ಸಿದ್ದರಾಮಯ್ಯನವರ ಪ್ರವಾಸದ ನಂತರ ಈ ಕೋಮುಗಲಭೆ ಸೃಷ್ಟಿಯಾಗಿದೆ ಎಂಬಂತೆ, ಸಿಎಂ ಜಿಲ್ಲೆ ಪ್ರವಾಸದೊಂದಿಗೆ ಈ ಕೋಮುಗಲಭೆಯನ್ನು ತಳಕು ಹಾಕಲಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಪೊಲೀಸರು ಹಿಂದೂ ಸಮಾಜದವರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ದೇಶದ್ಯಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮದ್ಯೆ ಪರೇಶ ಮೇಸ್ತರವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಈ ಸಾವಿಗೆ ನ್ಯಾಯ ಕೊಡಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆ. ಸ್ಥಳೀಯ ಮುಖಂಡರಾದ ಸುರಜ ನಾಯ್ಕ ಸೋನಿ ಮತ್ತು ಸುನಿಲ ನಾಯ್ಕ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತರಾಗಿರುವ ಅನಂತಕುಮಾರರವರ ಆಶ್ವಾಸನೆ ಪರಿಸ್ತಿತಿಯಿಂದ ಕಂಗೆಟ್ಟಿರುವ ಹಿಂದೂಗಳಿಗೆ ಸ್ವಲ್ಪಮಟ್ಟಿಗೆ ಸಮಾದಾನ ತಂದಿದೆ.