ಹಿಂದೂ ನಾಯಕರ ಬಂಧನ, ಬಿಡುಗಡೆ: ಕುಮಟಾ ಬಂದ್ ರದ್ದು
ಕುಮಟಾ : ಚಂದಾವರದ ಹನುಮಂತ ದೇವರ ಮುಖ್ಯದ್ವಾರಕ್ಕೆ ಸಂಬಂದಪಟ್ಟ ಹಾಗೆ ಎರಡು ಕೋಮಿನ ಮದ್ಯೆ ಗರ್ಷಣೆ ಉಂಟಾಗಿತ್ತು. ಈ ವಿಷಯದ ಗಾಂಭೀರ್ಯತೆ ಅರಿತ ಸ್ಥಳೀಯ ಬಿ.ಜೆ.ಪಿ. ಮುಖಂಡರಾದ ಸುರಜ ನಾಯ್ಕ ಸೋನಿ ಸ್ಥಳಕ್ಕೆ ನಿನ್ನೆ ಹೋಗಿ ಪರಿಸ್ಥಿತಿ ಅವಲೋಕಿಸಿ ಸ್ಥಳೀಯ ಅಧಿಕಾರಿಗಳೊಂದಿಗೆ ಎರಡು ಕೋಮಿನ ಮುಖಂಡರ ಜೊತೆ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ವಿಷಯ ಬಗೆಹರಿಸುವಲ್ಲಿ ಯಶಸ್ವಿ ಆಗಿದ್ದರು. ಅನಂತರ ಸ್ಥಳದಿಂದ ಅವರು ವಾಪಸಾಗುವಾಗ ಕೆಲವು ಕಿಡಿಗೇಡಿ ಮುಸ್ಲಿಂ ಯುವಕರು ಅವರ ವಾಹನದ ಮೇಲೆ ಕಲ್ಲುತುರಾಟ ನಡೆಸಿ ಅವರ ಕಾರನ್ನು ಜಕಂ ಗೊಳಿಸಿ ತಮ್ಮ ಕ್ರೌರ್ಯ ಮೆರೆದಿದ್ದಾರೆ. ಈ ಕಿಡಿಗೇಡಿಗಳ ಗುಂಪು ಸುರಜರವರ ಮೇಲೆ ಹಲ್ಲೆಗೆ ಮುಂದಾದಾಗ ಸಮಯಪ್ರಜ್ಞೆ ಇಂದ ಅದ್ರಷ್ಟವಶಾತ್ ಅಪಾಯದಿಂದ ಪಾರಾಗಿ ಬಂದಿದ್ದಾರೆ.
ಈ ವಿಷಯ ತಿಳಿದೊಡನೆ ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸುರಜರವರ ಮೇಲೆ ನಡೆದ ಹಲ್ಲೆಯನ್ನು ವಿರೋದಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಸ್ಟೊತ್ತಿಗೆ ಅಲ್ಲೇ ಜಮಾಯಿಸಿದ್ದ ಪೊಲೀಸರು ವಿನಾಕಾರಣ ಲಾಟಿ ಪ್ರಹಾರ ನಡೆಸಿದರಲ್ಲದೆ, ನಂತರ ಸುರಜ ಮತ್ತು ಇನ್ನಿತರ ಹಿಂದೂ ಮುಖಂಡರನ್ನು ಬಂದಿಸಿದ್ದರು.

ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆ ಅಮಾನುಷವಾಗಿ ಲಾಟಿ ಪ್ರಹಾರ ನಡೆಸಿ, ವಿನಾಕಾರಣ ಹಿಂದೂ ಮುಖಂಡರನ್ನು ಬಂದಿಸಿದ್ದರಿಂದ ಕೆರಳಿದ ಕುಮಟ ತಾಲ್ಲೂಕಿನ ಅನೇಕ ಹಿಂದೂ ಸಂಘಟನೆಗಳು ಇಂದು 02-12-2017 ರಂದು ಕುಮಟಾ ಬಂದ್ ಗೆ ಕರೆನೀಡಿದ್ದರು. ಈ ರೀತಿ ಪರಿಸ್ಥಿತಿ ಹದಗೆಡುತ್ತಿರುವುದು ಮನಗಂಡು ಪೊಲೀಸರು ತಡರಾತ್ರಿ ಸುರಜ ಮತ್ತು ಇನ್ನಿತರ ಹಿಂದೂ ಮುಖಂಡರನ್ನು ಬಿಡುಗಡೆಗೊಳಿಸಿ ಪರಿಸ್ತಿತಿಯನ್ನು ನಿಭಾಯಿಸಿದ್ದಾರೆ. ಸದ್ಯಕ್ಕೆ ಇಂದು ನೀಡಿದ್ದ ಬಂದ್ ಕರೆಯನ್ನು ಹಿಂದೂ ಸಂಘಟನೆಗಳು ಹಿಂತೆಗೆದುಕೊಂಡಿದೆ.