ರಾಷ್ಟೀಯ ಮಟ್ಟದ ಜ್ಯೂನಿಯರ್ ಅಥ್ಲೆಟಿಕ್ಸ ಚಿನ್ನ ಗೆದ್ದ ನಾಗೇಂದ್ರ ಅಣ್ಣಪ್ಪ ನಾಯ್ಕ
ಭಟ್ಕಳ : ಕೇರಳದ ತಿರುವನಂತಪುರಂ ನಲ್ಲಿ ಕಳೆದ ತಿಂಗಳು ಅಕ್ಟೋಬರನಲ್ಲಿ ಜರುಗಿದ ರಾಷ್ಟೀಯ ಮಟ್ಟದ ಜ್ಯೂನಿಯರ್ ಕ್ರೀಡಾಕೂಟದ ಅಥ್ಲೆಟಿಕ್ಸ ವಿಭಾಗದ ಗುಂಡು ಎಸೆತ ಹಾಗೂ ಚಕ್ರ ಎಸೆತದಲ್ಲಿ ಹೊಸ ದಾಖಲೆಯೊಂದಿಗೆ ಮೊದಲ ಸ್ಥಾನಗಳಿಸಿ ಎರಡು ಚಿನ್ನದ ಪದಕಗಳನ್ನು ಭಟ್ಕಳದ ಕುಮಾರ ನಾಗೇಂದ್ರ ಅಣ್ಣಪ್ಪ ನಾಯ್ಕ ಮುಡಿಗೇರಿಸಿಕೊಂಡಿದ್ದಾರೆ. ಕಳೆದ ವರ್ಷ ಕೂಡ ರಾಜ್ಯಮಟ್ಟದ ಜ್ಯೂನಿಯರ್ ಸ್ಪರ್ಧೆಯಲ್ಲಿ ಗುಂಡು ಎಸೆತ ಹಾಗೂ ಚಕ್ರ ಎಸೆತದ ಎರಡೂ ವಿಭಾಗದಲ್ಲೂ ನಾಗೇಂದ್ರ ಪದಕ ಗಳಿಸಿದ್ದರು. ಈ ಬಾರಿ ಅವರು ತನ್ನದೇ ಹೆಸರಿನಲ್ಲಿದ್ದ ರಾಜ್ಯ ಮಟ್ಡದ ಹಳೇ ದಾಖಲೆಯನ್ನು ಮುರಿದು ಚಿನ್ನದ ಪದಕವನ್ನು ಗಳಿಸಿದ್ದರು.

ನಾಗೇಂದ್ರ ಅಣ್ಣಪ್ಪ ನಾಯ್ಕ ಭಟ್ಕಳದ ಬೆಳ್ಕೆ ನಿವಾಸಿ ಶ್ರೀ ಅಣ್ಣಪ್ಪ ನಾಯ್ಕ ಹಾಗೂ ಶಾಂತಿ ನಾಯ್ಕ ದಂಪತಿಗಳ ಪುತ್ರ. ಇವರ ತಂದೆ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದು ಮುಖ್ಯವಾಗಿ ಇವರು ಕೃಷಿಯನ್ನೇ ಅವಲಂಬಿಸಿದ್ದಾರೆ. ನಾಗೇಂದ್ರರವರು ಪ್ರಸ್ತುತ ರಾಜ್ಯದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ನ್ಯೂಸ್.ನಾಮಧಾರಿ.ಕಂ ಗೆ ದೊರೆತ ಮಾಹಿತಿಗಳ ಪ್ರಕಾರ ಕುಮಾರ ನಾಗೇಂದ್ರ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆಯಲಿರುವ ಶಾಲಾ ಮಟ್ಟದ ರಾಷ್ಠೀಯ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿದ್ದು ಅವರು ಅಲ್ಲಿಯೂ ಕೂಡ ಉತ್ತಮ ಸಾಧನೆಗೈಯಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ.
ನಾಮಧಾರಿಗಳು ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ ಈ ಸಾಲಿಗೆ ಕ್ರೀಡಾಕ್ಷೇತ್ರದ ಅಥ್ಲೆಟಿಕ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗೆದ್ದ ನಾಗೇಂದ್ರ ಅಣ್ಣಪ್ಪ ನಾಯ್ಕ ಸೇರ್ಪಡೆಗೊಂಡಿರುವುದು ನಾಮಧಾರಿಗಳಿಗೆ ತುಂಬಾ ಹೆಮ್ಮೆಯ ಸಂಗತಿಯಾಗಿದೆ.