logo logo

ಅಂಕೋಲದಲ್ಲಿ ಬಂಗಾರಪ್ಪ ಜನ್ಮ ದಿನಾಚರಣೆ

ಅಂಕೋಲ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ೮೫ನೇ ಜನ್ಮ ದಿನಾಚರಣೆಯನ್ನು ಕಳೆದ ಬುಧವಾರ ಅಂಕೋಲಾ ನಾಮಧಾರಿ ಸಮಾಜದ ವತಿಯಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಅಧ್ಯಕ್ಷರಾದ ಕೆ. ಎಲ್. ನಾಯ್ಕ, ಉಮೇಶ್ ಲಾಯರ್, ಸುರೇಶ ನಾಯ್ಕ ಅಸ್ಲೆಗದ್ದೆ, ಪ್ರಕಾಶ್ ನಾಯ್ಕ ಜೋಗಲ್ಸ್, ಪಾಂಡುರಂಗ ನಾಯ್ಕ ಅಂಬೆಹಿತ್ಲ, ಪರಶುರಾಮ್ ಬಾಳೆಗುಳಿ, ರಾಜೇಶ್ ಮಿತ್ರ ನಾಯ್ಕ ತೆಂಕಣಕೇರಿ ಹಾಗೂ ಇನ್ನಿತರರು ಪಾಲ್ಗೊಡಿದ್ದರು.
ಬಂಗಾರಪ್ಪನವರು ಉತ್ತರ ಕನ್ನಡ ಅದರಲ್ಲೂ ಅಂಕೋಲದೊಂದಿಗೆ ವಿಶೇಷ ಸಂಬಂಧ ಹೊಂದಿದ್ದರು. ಅವರು ರಾಜಕೀಯ ಜೀವನದಲ್ಲಿ ಕ್ರಾಂತಿ ರಂಗ ಪಕ್ಷ ಹುಟ್ಟುಹಾಕುವ ಮೊದಲು

logo

ಉತ್ತರ ಕನ್ನಡದ ಮುಖಂಡರ ಪರಿಚಯಕ್ಕಾಗಿ ಮೊಟ್ಟ ಮೊದಲು ಘಟ್ಟದ ಕೆಳಗೆ ಬಂದಾಗ ಅಂಕೋಲದ ತೆಂಕಣಕೇರಿಯ ಕೇಶವ ದುರ್ಗಾ ನಾಯ್ಕರವರ ಮನೆಯಲ್ಲಿ ನಾಟಿ ಕೋಳಿ ಸಾರಿನ (ಅವರ ನೆಚ್ಚಿನ) ಔತಣಕೂಟದಲ್ಲಿ ಪಾಲ್ಗೊಂಡಿದ್ದರು. ಬಂಗಾರಪ್ಪರವರೊಂದಿಗೆ ನಿವೃತ್ತ ನ್ಯಾಯಮೂರ್ತಿ ಎ. ಎಚ್. ನಾಯ್ಕ ಮತ್ತು ಸಮಾಜದ ಮುಖಂಡರಾದ ನ್ಯಾಯವಾದಿ ಬಿ.ಡಿ.ನಾಯ್ಕರವರು ಪಾಲ್ಗೊಂಡಿದ್ದರು.

ನಾಮಧಾರಿ ರುಚಿ

MORE RECIPE...

ಬ್ಲಾಗ್