ಅರ್ಥ್ ಹೀರೋ ಚಂದ್ರಕಾಂತ ಆರ್. ನಾಯ್ಕ
ದಾಂಡೇಲಿ : ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ (RBS) ನೀಡುವ ಪ್ರತಿಷ್ಠಿತ 'ಅರ್ಥ್ ಹೀರೋಸ್ 2017' ಅಂತಾರಾಷ್ಟ್ರೀಯ ಪ್ರಶಸ್ತಿ ದಾಂಡೇಲಿಯ ಕಾಳಿ ಹುಲಿ ಯೋಜನೆಯ ಉಪ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಂದ್ರಕಾಂತ ಆರ್. ನಾಯ್ಕ ರವರಿಗೆ ದೊರಕಿದ್ದು ನಾಮಧಾರಿ ಸಮುದಾಯಕ್ಕಷ್ಟೇ ಅಲ್ಲ ಇಡೀ ಉತ್ತರ ಕನ್ನಡ ಹಾಗೂ ಕರ್ನಾಟಕಕ್ಕೆ ಗೌರವ ತಂದುಕೊಟ್ಟಿದೆ.
ದಿಲ್ಲಿಯಲ್ಲಿ ನಡೆದ ಪ್ರಶಸ್ತಿಯ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲು ವೇದಿಕೆ ಏರಿದ ಸಿ.ಅರ್.ನಾಯ್ಕರವರಿಂದ ಬಂದ ಮೊದಲ ಮಾತು ಸ್ವಚ್ಛ ಕನ್ನಡದಲ್ಲಿ, "ಎಲ್ಲರಿಗೂ ನನ್ನ ನಮಸ್ಕಾರ ..." ಎಂದು, ಸಮಾರಂಭದಲ್ಲಿ ಕನ್ನಡದ ಕಲರವ ಹರಡಿದರು. ಜೊತೆಗೆ ಹೆತ್ತ ತಂದೆ, ತಾಯಿಯವರಿಗೆ ನಮನ ಸಲ್ಲಿಸಿದರಲ್ಲದೆ, ಕೆಲಸ ಮಾಡುತ್ತಿರುವ " ಕರ್ನಾಟಕ ಅರಣ್ಯ ಇಲಾಖೆಗೆ" ಧನ್ಯವಾದ ಸಲ್ಲಿಸಿದರು. ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿರುವ ವಾಚರ್ ಗಳಿಂದ ಹಿಡಿದು, ಗಾರ್ಡ್, ಫ್ಯೂನ್, ಹಿರಿಯ ಅಧಿಕಾರಿಗಳು, ಸೇವೆಸಲ್ಲಿಸಿತ್ತುರುವ ಜಾಗದ ನಾಗರೀಕರಿಂದ ಹಿಡಿದು, ಡಿಪಾರ್ಟ್ಮೆಂಟ್ನಗೆ ಅಕ್ರಮ ಸಾಕಾಣಿಕೆ ತಡೆಯುವ ಮಾಹಿತಿಯನ್ನು ಕೊಡುವವರಿಂದ ಹಿಡಿದು ಬೆಳೆಯಲು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಾಯ, ಸಲಹೆ ನೀಡಿದವರನ್ನು ವೇದಿಕೆ ಮೇಲೆ ಸ್ಮರಿಸಿದರು.

ಮೂಲತಃ ಕುಮಟಾ ಸಾಣಿಕಟ್ಟಾದವರಾದ ಚಂದ್ರಕಾಂತ ನಾಯ್ಕರು 2000 ನೇ ಇಸ್ವಿಯಲ್ಲಿ ಅರಣ್ಯ ಇಲಾಖೆ ಸೇರ್ಪಡೆಹೊಂಗಿದ್ದರು. ಉರಗ ಪ್ರೇಮಿಯಾದ ಇವರು ಅತ್ಯಂತ ಅಪಾಯಕಾರಿಯಾದ ಸರ್ಪಗಳಾದ ಕಾಳಿಂಗ ಸರ್ಪದಂತ ನೂರಾರು ಸರ್ಪಗಳನ್ನು ಕಾಪಾಡಿದ್ದಾರೆ. ಜಿಲ್ಲೆಯ ಹಲವೆಡೆ ಕಾರ್ಯ ನಿರ್ವಹಿಸಿದ ಇವರು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ.
--------------------------------------------------------------------------------
ಸಿ.ಅರ್.ನಾಯ್ಕ ರವರೇ, ಮತ್ತೊಮ್ಮೆ ಸಾಧಿಸಿ ತೋರಿಸಿದರಿ, ನೀವು ಕೇವಲ ನಮ್ಮ ಉತ್ತರ ಕನ್ನಡದಷ್ಟೇ ಅಲ್ಲ..ಸಮಸ್ತ ಕರ್ನಾಟಕದ ಹೆಮ್ಮೆ..
ಸಂಸ್ಕಾರ..ಸನ್ನಡತೆ, ಕೇವಲ ಡಿಗ್ರಿ ಪಡೆದವರ ಸೊತ್ತಲ್ಲ ಪದವಿ ಎನ್ನುವುದು ನೆಪಮಾತ್ರ..ನಿಮ್ನದೇ ಡೈಲಾಗಿನ ಪ್ರಕಾರ " I am UCBA...ಅಂದ್ರೆ I am Nd U capable to beat actual situation ಅಂತಾ..
(ಚಿತ್ರ ಮತ್ತು ಮಾಹಿತಿ: ಅಶೋಕ್ ಬಿ. ನಾಯ್ಕ)