logo logo

ನಾಮಧಾರಿ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ: ಕುಮಟಾ ನಾಮಧಾರಿ ನೌಕರರ ಸಂಘ

ಕುಮಟಾ : ನಾಮಧಾರಿ ಪಿ.ಯು.ಸಿ. ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರವನ್ನು ನಿನ್ನೆ, ಅಕ್ಟೊಬರ್ 13 ರಂದು ಕುಮಟಾದ ಬಗ್ಗೋಣ ರಸ್ತೆಯಲ್ಲಿರುವ ನಾಮಧಾರಿ ಸಭಾಭವನದಲ್ಲಿ ಉದ್ಘಾಟಿಸಲಾಯಿತು. ತಾಲೂಕಾ ಆರ್ಯ ಈಡಿಗ ನಾಮಧಾರಿ ನೌಕರರ ಸಂಘ ಆಯೋಜಿಸಿದ್ದ ಮೂರುದಿನದ ಈ ಶಿಬಿರವನ್ನು ಕುಮಟಾದ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷರಾದ ಶ್ರೀ ಜೈವಂತ ಎಸ್. ನಾಯ್ಕ ನಿನ್ನೆ ಉದ್ಘಾಟಿಸಿದರು. ನೌಕರರ ಸಂಘದ ಅಧ್ಯಕ್ಷರಾದ ಶ್ರೀ. ಏನ್. ಆರ್. ನಾಯ್ಕ ಅಧ್ಯಕ್ಷತೆವಹಿಸಿದ್ದ ಈ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ವೀಣಾ ಸೂರಜ್ ನಾಯ್ಕ ಸೋನಿ, ಕುಮಟಾ ಎ.ಸಿ.ಎಫ್. ಶ್ರೀ ಎಸ್.ವಿ.ನಾಯ್ಕ, ಬೆನಕ ಕನ್ಸಲ್ಟ್ಯಾನ್ಸಿಯ ಶ್ರೀ ಎಚ್.ಏನ್. ನಾಯ್ಕ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಈ ಶಿಬಿರ 13, 14 ಮತ್ತು 15 ರಂದು ಮೂರುದಿನ ನಡೆಯಲಿದ್ದು, ಸ್ಥಳೀಯ ನಾಮಧಾರಿ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಸರಿಯಾಗಿ ರೂಪಿಸಿಕೊಳ್ಳಲು ತುಂಬಾ ಸಹಾಯಕಾರಿಯಾಗಲಿದೆ. ಕುಮಟಾ ನಾಮಧಾರಿ ನೌಕರರ ಸಂಘವು ಈ ರೀತಿ ಅನೇಕ ಪ್ರಶಂಸಾರ್ಹ ಕಾರ್ಯಕ್ರಮವನ್ನು ನಡೆಸುತ್ತಿದ್ದು ನ್ಯೂಸ್.ನಾಮಧಾರಿ.ಕಂ ನಲ್ಲಿ ಈ ಕುರಿತು ಈಗಾಗಲೇ ಸುದ್ದಿ ಪ್ರಕಟವಾಗಿತ್ತು. ಕೇವಲ ಪ್ರೋತ್ಸಾಹ ಧನ ನೀಡುವುದರಿಂದ ಸಮಾಜದ ಹಾಗೂ ಸಮಾಜದ ವಿದ್ಯಾರ್ಥಿಗಳ ಅಭಿವೃದ್ಧಿಯಾಗುವುದಿಲ್ಲ, ಧನ ಸಹಾಯದೊಂದಿದೆ ಉತ್ತಮ ಮಾರ್ಗದರ್ಶನ ಮತ್ತು ತರಬೇತಿಯೂ ಅಷ್ಟೇ ಅವಶ್ಯಕ. ಇದನ್ನು ಮನಗಂಡು ಈ ಬಗ್ಗೆ ಹೆಚ್ಚಿನ ಕಳಕಳಿ ವಹಿಸುತ್ತಿರುವ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಇತರೆ ಸಂಘಗಳಿಗೆ ಮಾದರಿ.

ನಾಮಧಾರಿ ರುಚಿ

MORE RECIPE...

ಬ್ಲಾಗ್