logo logo

ಉಮೇಶ ಮುಂಡಳ್ಳಿ ತಂಡದ ನಿನಾದ ದಸರಾ ಕಾವ್ಯೋತ್ಸವ ಅದ್ದೂರಿಯಾಗಿ ಸಂಪನ್ನ

ಭಟ್ಕಳ : ಜಿಲ್ಲೆಯ ಎಲ್ಲಾ ಸಹೃದಯ ಸಾಹಿತ್ಯ ಸಂಗೀತ ಪ್ರೇಮಿಗಳ ಸಹಕಾರ ಆಶಿರ್ವಾದದೊಂದಿಗೆ ಇಂದು ಅದ್ದೂರಿಯಾಗಿ ನಿನಾದ ದಸರಾ ಕಾವ್ಯೋತ್ಸವ ಸಂಪನ್ನಗೊಂಡಿತು. ಹಿರಿಯ ಸಾಹಿತಿ ಬಿ.ಪಿ.ಶಿವಾನಂದ ರಾವ್ ಅಧ್ಯಕ್ಷತೆ ವಹಿಸಿ ಪ್ರಚಾರ ಗೀಳು ಹಚ್ಚಿಕೊಂಡು ಬೇಕಾಬಿಟ್ಟಿ ಕಾರ್ಯಕ್ರಮ ಮಾಡುವಲ್ಲಿ ಯಾವುದೇ ಸಾರ್ಥಕ್ಯ ಇರಲು ಸಾಧ್ಯ ವಿಲ್ಲ. ಆದರೆ ನಿನಾದ ಇಂದು ಸಂಘಟಿಸಿದ ದಸರಾ ಕಾವ್ಯೋತ್ಸವ ಅರ್ಥಪೂರ್ಣ ವಾಗಿದ್ದು.ನಿಜವಾದ ಸಹೃದಯ ಸಾಹಿತಿಗೆ ಸಂಗಿತಗಾರನಿಗೆ ಮಾತ್ರ ಇದು ಸಾಧ್ಯ ಎಂದರು.
ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಸ್ಕೇರಿ ಎಂ.ಕೆ.ನಾಯಕರನ್ನು ಪ್ರೀತಿಯಿಂದ ನಿನಾದ ಕಡೆಯಿಂದ ಸನ್ಮಾನಿಸಲಾಯಿತು.
ಜಿಲ್ಲೆಯ ಅತ್ಯಂತ ಸತ್ವಯುತ ಸಂಘಟನೆಗಳಲ್ಲಿ ನಿನಾದ ಕೂಡ ಒಂದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.ನಾವೆಲ್ಲರೂ ಈ ನಿನಾದಕ್ಕೆ ಪ್ರೋತ್ಸಾಹಿಸೋಣ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ನಿನಾದ ಇಂದು ನಮ್ಮ ಜಿಲ್ಲೆಯ ಸ್ವತ್ತು. ನಿನಾದ ಕೇವಲ ಮುಂಡಳ್ಳಿ ದಂಪತಿಗಳಿಗೆ ಮಾತ್ರ ಸೀಮೀತ ಅಲ್ಲ. ನಿನಾದದಲ್ಲಿ ಜಿಲ್ಲೆಯ ಹಿರಿಕಿರಿಯ ಪ್ರತಿಭೆಗಳು ಇನ್ನೂ ಮುಂದೆ ಬೆಳಗಲಿದೆ ಎಂದರು.
ಮುಖ್ಯ ಅತಿಥಿ ಅಮೃತ ರಾಮರಥ್ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ಎಂ.ಡಿ.ಪಕ್ಕಿ,ಲೇಖಕಿ ಶಿಕ್ಷಕಿ ರಾಜಮ್ಮ ಹಿಚ್ಕಡ್, ಲೇಖಕಿ ಸಾವಿತ್ರಿ ನಾಯ್ಕ, ಅಶ್ವಿನಿ ಕೋಡಿಬೈಲ್, ಭಾರತಿ ಮೂಡಭಟ್ಕಳ ಮುಂಬಯಿ, ಸಿಮ್ರಾನ್ ನಾಯಕ. ಪರಮೇಶ್ವರ ಹೆಗಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಆಸುಕವಿ ಜಿಲ್ಲೆಯ ಯಶಸ್ವಿ ನಿರೂಪಕ ಪರಮೇಶ್ವರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಗೋಪಾಲ್ ನಾಯ್ಕ ಪ್ರಾರ್ಥಿಸಿದರು.
ಭಾಗವಹಿಸಿದ ಕವಿತಾ ಬಹುಮಾನ ಪಡೆದ ಕವಿಗಳೊಂದಿಗೆ ಅನೇಕ ಕವಿಗಳು ಕವಿತೆ ವಾಚಿಸಿದರು.
ನಿನಾದ ತಂಡದ ಉಮೇಶ ಮುಂಡಳ್ಳಿ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಂಡಳ್ಳಿಯವರೊಂದಿಗೆ ಪ್ರತೀಕ್ಷಾ ಕಡ್ಲೆ, ಶ್ರೇಯಾ ಹೆಬ್ಬಾರ.ತನುಜಾ ನಾಯ್ಕ, ಅರ್ಚನಾ ಹೆಬ್ಬಾರ ಭಾವಗೀತೆ ಹಾಡಿದರು. ವಿನಾಯ ಭಂಡಾರಿ ಕೊಳಲು.ಸುದರ್ಶನ ಪೈ ತಬಲಾ, ಪರಮೇಶ್ವರ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು.
ಕಾರ್ಯಕ್ರಮ ನೆರೆದ ಎಲ್ಲಾ ಜನರ ಮೆಚ್ಚುಗೆ ಪಾತ್ರವಾಗಿ ಅರ್ಥ ಪೂರ್ಣ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಪಡೆಯಿತು.

ನಾಮಧಾರಿ ರುಚಿ

MORE RECIPE...

ಬ್ಲಾಗ್