logo logo

ನ್ಯಾಯಕ್ಕಾಗಿ ಭಟ್ಕಳದಲ್ಲಿ ನಾಮಧಾರಿಗಳ ಬ್ರಹತ್ ಪ್ರತಿಭಟನೆ

ಭಟ್ಕಳ : ನಿನ್ನೆ ಭಟ್ಕಳದ ನಾಮಧಾರಿ ಸಮಾಜದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಹಿಂದೂ ಸಮಾಜಗಳ ಸಹಯೋಗದೋಂದಿಗೆ ಭಟ್ಕಳದಲ್ಲಿ ಕರೆನೀಡಿದ್ದ ಬೃಹತ್ ಮೌನ ಪ್ರತಿಭಟನೆಯಲ್ಲಿ ಭಟ್ಕಳದ ಹಾಗೂ ಸುತ್ತಮುತ್ತಲಿನ ಹತ್ತು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ನ್ಯಾಯಕ್ಕಾಗಿ ಧರಣಿ ಕೂತರು. ಭಟ್ಕಳದ ಪುರಸಭೆಯ ದೌರ್ಜನ್ಯಕ್ಕೆ ಮನನೋಂದು ಹುತಾತ್ಮನಾದ ಬಡ ಅಂಗಡಿಕಾರ ರಾಮಚಂದ್ರ ನಾಯ್ಕ ಆಸರಕೇರಿ ಯವರ ಕುಟುಂಬಕ್ಕೆ ಸೂಕ್ತವಾದ ನ್ಯಾಯ ನೀಡುವಂತೆ ಆಗ್ರಹಿಸಿ ಹಾಗೂ ಅಂದು ಪುರಸಭೆಯ ದೌರ್ಜನ್ಯದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರ ಮೇಲೆ ಭಟ್ಕಳದ ಪೋಲೀಸ್ ಇಲಾಖೆ ಹೇರಿರುವ ಜಾಮೀನು ರಹಿತವಾದ ದರೋಡೆಯಂತ ಪ್ರಕರಣಗಳನ್ನು ಕೂಡಲೇ ಕೈ ಬಿಡುವಂತೆ ಆಗ್ರಹಿಸಲಾಯಿತು. ಮತ್ತು ದೌರ್ಜನ್ಯಕ್ಕೆ ಕಾರಣರಾಗಿರುವ ಪುರಸಭೆಯ ಭೃಷ್ಟ ಅಧಿಕಾರಿಗಳನ್ನು ಬಂಧಿಸಿ ಬಡ ಅಂಗಡಿಕಾರರಿಗೆ ಸೂಕ್ತವಾದ ನ್ಯಾಯವನ್ನು ನೀಡುವಂತೆ ಆಗ್ರಹಿಸಲಾಯಿತು. ಭಟ್ಕಳದ ನಾಮಧಾರಿ ಸಮಾಜದ ನೇತೃತ್ವದಲ್ಲಿ ಬೃಹತ್ ಮೌನ ಮೆರವಣಿಗೆ ಹಾಗೂ ಧರಣಿಯನ್ನು ಹಮ್ಮಿಕೋಳ್ಳಲಾಗಿತ್ತು.

ಪ್ರತಿಭಟನೆಗೆ ಸ್ಪಂದಿಸಿ, ಈ ಎಲ್ಲಾ ದೌರ್ಜನ್ಯದ ವಿರುದ್ಧ ಸೂಕ್ತವಾದ ನ್ಯಾಯವನ್ನು ದೋರಕಿಸಿಕೋಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಅಧಿಕಾರಿಗಳು ಕೊಟ್ಟ ಆಶ್ವಾಸನೆಯನ್ನು ಸೂಕ್ತ ಸಮಯದಲ್ಲಿ ಈಡೇರಿಸದೇ ಹೋದಲ್ಲಿ ಮುಂದೆ ಜಿಲ್ಲಾದ್ಯಂತ ಪ್ರತಿಭಟನೆಯನ್ನು ಹಮ್ಮಿ ಕೊಳ್ಳುವ ಬಗ್ಗೆ ಚರ್ಚಿಸಲಾಯಿತೆಂದು ತಿಳಿದುಬಂದಿದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್