ಯಲ್ಲಾಪುರ ನಾಮಧಾರಿ ಸಂಘದಿಂದ ಪ್ರತಿಭಟನೆ
ಯಲ್ಲಾಪುರ : ಇಂದು ಯಲ್ಲಾಪುರದ ಸಮಗ್ರ ನಾಮಧಾರಿ ಸಂಘ ಹಾಗೂ ಯುವ ನಾಮಧಾರಿ ಸಂಘದ ವತಿಯಿಂದ ಭಟ್ಕಳ ದಲ್ಲಿ ನಾಮಧಾರಿ ಬಂಧುಗಳ ಮೇಲೆ ನಡೆದ ದೌರ್ಜನ್ಯ ಮತ್ತು ನಾಮಧಾರಿ ಯುವಕರ ಮೇಲೆ ಸುಳ್ಳು ಆಪಾದನೆ ಮಾಡಿ ದರೋಡೆ ಕೇಸ್ ಹಾಕಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು ಹಾಗೂ ಇದೆ ಸಮಯದಲ್ಲಿ ಮೃತ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಸರ್ಕಾರವು 10ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಲಾಯಿತು. ಯಲ್ಲಾಪುರ ನಾಮಧಾರಿಗಳು ಸಮಾಜ ಹಿರಿಯರಾದ ಶ್ರೀ ಶೇಷು ಈರಾ ನಾಯ್ಕ ಇವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಯಲ್ಲಾಪುರ ತಾಲೂಕಿನ ದಂಡಾಧಿಕಾರಿಗಳಿಗೆ ಮನವಿ ನೀಡಿದರು.