ಭಟ್ಕಳ ದೌರ್ಜನ್ಯ : ಮುಖ್ಯಮತ್ರಿಗೆ ಮನವಿ ಸಲ್ಲಿಸಲು ಬೆಂಗಳೂರು ನಾಮಧಾರಿ ಸಂಘ ಸಿದ್ಧತೆ
ಬೆಂಗಳೂರು : ಕಳೆದ ಭಾನುವಾರ ನಡೆದ ನಾಮಧಾರಿ ಸಂಘದ ಕಾರ್ಯಕಾರಿ ಸಭೆಯಲ್ಲಿ ಭಟ್ಕಳದಲ್ಲಿ ನಾಮಧಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ನಡೆಯಿತು. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು, ನಂತರ ಭಟ್ಕಳದ ಮುಖಂಡರೊಂದಿಗೆ ತೆರಳಿ ರಾಜ್ಯದ ಮುಖ್ಯಮಂತ್ರಿಗಳನ್ನು ಹಾಗೂ ಸಂಬಂಧ ಪಟ್ಟ ಮಂತ್ರಿಗಳಿಗೆ ಭೇಟಿಯಾಗಿ ಮನವಿ ಮಾಡಲು ತಯಾರಿರಲು ತೀರ್ಮಾನಿಸಲಾಯಿತು. ನಾಮಧಾರಿ ಸಮಾಜದವರ ಮೇಲೆ ಯಾವುದೇ ರೀತಿಯ ದೌರ್ಜನ್ಯವನ್ನು ಸಂಘ ಖಂಡಿಸುತ್ತದೆ ಮತ್ತು ಘಟನೆಯ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಸಮಾಜದ ಅಮಾಯಕ ಯುವಕರ ಮೇಲೆ ಹಾಕಿರುವ ಕೇಸನ್ನು ಕೂಡಲೇ ಹಿಂತೆದುಕೊಳ್ಳಲು ಸರ್ಕಾರವನ್ನು ಈ ಮೂಲಕ ಒತ್ತಾಯಿಸಲಾಗುವುದು. ನಾಮಧಾರಿ ಮುಖಂಡರು ಉತ್ತರ ಕನ್ನಡದ ಎಲ್ಲ ರಾಜಕೀಯ ಪಕ್ಷದಲ್ಲೂ ಇದ್ದಾರೆ ಹಾಗಾಗಿ ಈ ಘಟನೆಗೆ ಯಾವುದೇ ರಾಜಕೀಯ ಬಣ್ಣ ಬಳಿಯದೆ, ಎಲ್ಲ ನಾಯಕರು ಪಕ್ಷಾತೀತವಾಗಿ ನಾಮಧಾರಿ ಸಮಾಜದ ಮತ್ತು ಜನರ ಕ್ಷೇಮ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕು.
ಹೊಸದಾಗಿ ರೂಪಗೊಂಡಿರುವ ಸಂಘದ ಮಹಿಳಾ ವಿಭಾಗದಿಂದ ಡಿಸೆಂಬರ್ 31 ರಂದು ಹೊಸವರ್ಷದ ವರ್ಷಾಚರಣೆ ನಡೆಸಲು ಪ್ರಸ್ತಾವನೆ ಸಲ್ಲಿಸಲಾಯಿತು, ಈ ಕುರಿತು ಮುಂದಿನ ರೂಪರೇಷೆಯನ್ನು ಮಹಿಳಾ ವಿಭಾಗದ ಸಭೆಯಲ್ಲಿ ಸಿದ್ಧಪಡಿಸಲಾಗುವುದು. ಪ್ರದಾನ ಕಾರ್ಯದರ್ಶಿಗಳಾದ ಡಿ.ಕೆ.ನಾಯಕ ರವರು ಸಮಾಜ ಬಾಂದವರಿಗೆಲ್ಲ ದಸರಾ ಶುಭಾಶಯ ಕೋರಿದರು. ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಟಿ.ಎಚ್.ನಾಯಕ್, ಉಪಾಧ್ಯಕ್ಷರಾದ ರಾಮದಾಸ ನಾಯಕ್, ಮಾಜಿ ಅಧ್ಯಕ್ಷರಾದ ಜಿ.ಬಿ.ನಾಯಕ್, ಜಂಟಿ ಕಾರ್ಯದರ್ಶಿ ಹರೀಶ್ ಕೆ. ನಾಯ್ಕ, ಮಹಿಳಾ ವಿಭಾಗದ ಮುಖ್ಯಸ್ಥೆ ಮಂಗಲಾ ನಾಯ್ಕ ಮತ್ತು ಇನ್ನಿತರ ಕಾರ್ಯಕಾರಿ ಸದಸ್ಯರಿದ್ದರು ಭಾಗವಹಿಸಿದ್ದರು.