ಜಪಾನಿನ ಪ್ರಧಾನಿ ಭೇಟಿಯ ಯಶಸ್ಸಿನಲ್ಲಿ ರಾಜೇಶ ನಾಯ್ಕ
ಬೆಂಗಳೂರು : ನಮ್ಮ ನಾಮಧಾರಿ ಸಮಾಜದ ಹೆಮ್ಮೆಯ ಶ್ರೀ ರಾಜೇಶ ನಾಯ್ಕ IFS ರವರು ಜಪಾನಿನ ಪ್ರಧಾನಿಯವರು ಭಾರತ ಭೇಟಿಯ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಯಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಭಾರತ ಸರ್ಕಾರದ ವಿದೇಶಾಂಗ ಇಲಾಖೆಯಲ್ಲಿ ಅಂಡರ್ ಸೆಕ್ರೆಟರಿ (ಜಪಾನ) ಆಗಿ ಸೇವೆಸಲ್ಲಿಸುತ್ತಿರುವ ಇವರು ಕಳೆದ ಒಂದು ತಿಂಗಳಿನಿಂದ ಜಪಾನ ಪ್ರಧಾನಿಯವರ ಪ್ರವಾಸದ ಎಲ್ಲ ಪೂರ್ವಸಿದ್ದತೆಯಲ್ಲಿ ಹಗಲಿರುಳು ಶ್ರಮಪಟ್ಟಿದ್ದಾರೆ. ಜಪಾನಿ ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ ವಿದೇಶಾಂಗ ಇಲಾಖೆಯ ಏಕೈಕ ಅಧಿಕಾರಿ ಆಗಿರುವುದರಿಂದ ಭಾರತ ಸರ್ಕಾರ ಇವರ ಮೇಲೆ ಈ ವಿಶೇಷ ಹೊಣೆಗಾರಿಕೆಯನ್ನು ವಹಿಸಿತ್ತು ಎನ್ನಲಾಗಿದೆ. ಭಾರತದ ಪ್ರಪ್ರಥಮ ಬುಲೆಟ್ ರೈಲಿನ ಯೋಜನೆಯಾದ, ಮುಂಬಯಿ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಸಾಕಾರಗೊಳಿಸುವಲ್ಲಿ ರಾಜೇಶ ನಾಯ್ಕರವರ ಶ್ರಮ ಶ್ಲಾಘನೀಯ. ದೇಶ ಸೇವೆಯಲ್ಲಿ ಸದಾ ತೊಡಗಿಕೊಂಡಿರುವ, ಇಡೀ ದೇಶವೇ ಮೆಚ್ಚುವಂತ ಕೆಲಸ ಮಾಡುತ್ತಿರುವ ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಪಡೆಯುತಿದ್ದು ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಉತ್ತರ ಕನ್ನಡದ ಸಿದ್ಧಾಪುರದ ವಕೀಲರಾದ ಶ್ರೀ ಏನ್.ಡಿ.ನಾಯ್ಕರ ಮಗನಾದ ರಾಜೇಶ್ ಏನ್. ನಾಯ್ಕ ಇವರು 2009 ಸಿ.ಎಸ್.ಈ. ಬ್ಯಾಚ್ ನಲ್ಲಿ 260 ರಾಂಕ್ ಪಡೆದು ಐ.ಎಫ್.ಎಸ್. ಅಧಿಕಾರಿಯಾಗಿದ್ದಾರೆ. ಸಿದ್ಧಾಪುರದಲ್ಲೇ ಇವರು ಪ್ರಾರ್ಥಮಿಕ ವಿದ್ಯಾಭ್ಯಾಸ ಮತ್ತು ಶಿರಸಿಯಲ್ಲಿ ಪ್ರೌಢಶಿಕ್ಷಣ ಮುಗಿಸಿ ಇವರು, ಪಿಸಿಎಂಎಸ್ ವಿಭಾಗದಲ್ಲಿ ಪಿಯುಸಿಯನ್ನು ಸಿದ್ಧಾಪುರದಲ್ಲೇ ಮುಗಿಸಿದ ಇವರು, ಪಿಯುಸಿಯಲ್ಲಿ 90% ಅಂಕಪಡೆದರೂ ಪದವಿಗೆ ಬಿ.ಎ. ಆಯ್ಕೆಮಾಡಿಕೊಂಡಿದ್ದರು. ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ಥಾನಕೋತ್ತರ ಪದವಿಯ ಅಂತಿಮ ವರ್ಷದಲ್ಲಿದ್ದಾಗಲೇ ಕೆ.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಯಶಸ್ಸುಗಳಿಸಿದ್ದರು.
ಅತಿ ಚಿಕ್ಕ ವಯಸಿನ್ನಲ್ಲೇ ಈ ಹುದ್ದೆಗೇರಿದ ಇವರು ಇನ್ನು ಹೆಚ್ಚಿನ ಯಶಸ್ಸನ್ನುಗಳಿಸಲೆಂದು ಹಾರೈಕೆ.