logo logo

ಆತ್ಮಹತ್ಯೆಗೆ ಯತ್ನಿಸಿದ ರಾಮಚಂದ್ರ ನಾಯ್ಕ ಚಿಕಿತ್ಸೆ ಫಲಕಾರಿಯಾಗದೆ ನಿಧನ

ಭಟ್ಕಳ : ಪುರಸಭೆಯ ಅಂಗಡಿ ಮಳಿಗೆಗಳ ತೆರವು ಕಾರ್ಯಾಚರಣೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ರಾಮಚಂದ್ರ ನಾಯ್ಕ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ. ಭಟ್ಕಳ ಪುರಸಭೆಯ ನಿರ್ದಾಕ್ಷಿಣ್ಯ ನಿರ್ಧಾರದಿಂದ ಅನೇಕ ಹಿಂದುಳಿದ ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿ, ಅನೇಕ ದಿನದಿಂದ ಪ್ರತಿಭಟನೆಗಳು ನಡೆಯುತ್ತಿದ್ದವು. ಅಂದು ಬೆಳಿಗ್ಗೆ ತೆರವು ಕಾರ್ಯಾಚರಣೆಯಿಂದ ತೀರಾ ಆತಂಕಕ್ಕೊಳಗಾದ ರಾಮಚಂದ್ರ ನಾಯ್ಕ ಮನನೊಂದು ಪುರಸಭೆಯ ಒಳಗೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದ. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಮೊದಲು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ನಂತರ ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅಲ್ಲಿ ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾರೆ.

ತನ್ನ ಸಹೋದರರೊಂದಿಗೆ ಕಬ್ಬಿನ ಹಾಲು ಮತ್ತು ಎಳನೀರು ಮಾರಾಟದ ಅಂಗಡಿ ನಡೆಸುತ್ತಿದ್ದ ರಾಮಚಂದ್ರ ತೆರವು ಕಾರ್ಯಾಚರಣೆಯಿಂದ ದಿಕ್ಕುತೋಚದೆ ಪುರಸಭೆಯ ಆಡಳಿತದ ಈ ಕ್ರಮದ ವಿರುದ್ಧ ಪ್ರತಿಭಟಿಸುತ್ತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಅಂದು 95 % ದೇಹ ಸುಟ್ಟಿದ್ದರೂ ಮಣಿಪಾಲಿನ ಮಾರ್ಗದ ಮದ್ಯೆ ಅಂಬ್ಯುಲೆನ್ಸಿನಲ್ಲಿ ಜೀವನ್ಮರಣದ ಸ್ಥಿತಿಯಲ್ಲಿಯೂ ಆತ ತನ್ನ ಸಹೋದರರ ಮುಂದಿನ ಉದ್ಯೋಗ ಮತ್ತು ಜೀವನದ ಬಗ್ಗೆ ಚಿಂತೆ ವ್ಯಕ್ತಪಡಿಸುತ್ತಿದ್ದು, ಕರುಳು ಹಿಂಡುವಂತಿತ್ತು ಎನ್ನಲಾಗಿದೆ.

ಕರ್ನಾಟಕದಲ್ಲಿ ಅಹಿಂದ ನೀತಿಯ ಸರ್ಕಾರವಿದ್ದರೂ ಈ ರೀತಿ ಹಿಂದುಳಿದ ಸಮಾಜದ ಬಡವರು ಶೋಷಣೆಗೊಳಪಡುತ್ತಿರುವುದು ತುಂಬಾ ಗಂಭೀರ ವಿಷಯವಾಗಿದೆ. ಈ ಕಾರ್ಯಾಚರಣೆಯಲ್ಲಿ, ಬಡ ವ್ಯಾಪಾರಿಗಳಿಗೆ ತಕ್ಕ ಪರಿಹಾರವನ್ನೂ ನೀಡದೆ ಈ ರೀತಿ ಒಕ್ಕಲೆಬ್ಬಿಸುವದು ಭಟ್ಕಳ ಪುರಸಭೆಯ ನೀತಿಗೆ ಹಿಡಿದ ಕನ್ನಡಿಯಂತಾಗಿದೆ. ಈ ಕುರಿತು ಕ್ಷೇತ್ರದ ಕಾಂಗ್ರೆಸ್ ಶಾಸಕರು ಮೃತರ ಕುಟುಂಬಕ್ಕೆ ಒಳ್ಳೆಯ ಪರಿಹಾರ ದೊರಕಿಸಿ ಕೊಟ್ಟು, ತೆರವು ಕಾರ್ಯಾಚರಣೆಯ ಸಮಸ್ಯೆ ಬಗೆಹರಿಸಿ ಹಿಂದುಳಿದ ವರ್ಗದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಬೇಕಾಗಿದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್