logo logo

ಭಟ್ಕಳ ಪುರಸಭೆ ಅಂಗಡಿ ತೆರವು ಕಾರ್ಯಾಚರಣೆ: ಅಂಗಡಿಕಾರ ಆತ್ಮಹತ್ಯೆಗೆ ಯತ್ನ

ಭಟ್ಕಳ : ಭಟ್ಕಳ ಪುರಸಭೆ ಅಂಗಡಿಗಳ ತೆರವು ಕಾರ್ಯಾಚರಣೆಯಿಂದ ಬೇಸತ್ತು ಇಂದು ಓರ್ವ ಅಂಗಡಿಕಾರ ರಾಮಚಂದ್ರ ನಾಯ್ಕ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಪ್ರಯತ್ನಸಿದ್ದಾನೆ. ಭಟ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಅಂಗಡಿಮಳಿಗೆಗಳನ್ನ ತೆರವುಗೊಳಿಸಲು ಇವತ್ತು ಬೆಳಿಗ್ಗೆ 5 ಗಂಟೆಗೆ ಬಂದಾಗ ಎಲ್ಲಾ ಅಂಗಡಿಕಾರರು ತನ್ನೊಂದಿಗೆ ಬೀದಿಗೆ ಬಿಳುವುದು ನೊಡಲು ಆಗದ ಅಂಗಡಿಕಾರ ರಾಮಚಂದ್ರ ನಾಯ್ಕ ಅಸರಕ್ಕೆರಿ ಪುರಸಭೆಯ ಮುಖ್ಯಧಿಕಾರಿ ಹಾಗೂ ಪೋಲಿಸ ಸಿಬ್ಬಂದಿ ಎದುರುಗಡೆನೆ ಸಿಮೆ ಎಣ್ಣೆ ಹಾಕಿಕೊಂಡು ಅತ್ಮಹತ್ಯೆಗೆ ಎತ್ನಿಸಿ ಸಾವು ಬದುಕಿನ ಮದ್ಯೆ ಹೊರಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರಾಮಚಂದ್ರ ನಾಯ್ಕನನ್ನು ತಪ್ಪಿಸಲು ಹೋದ ಸಾರ್ವಜನಿಕನೋರ್ವನಿಗೆ ಸಹ ಬೆಂಕಿ ತಗುಲಿ ತೀವ್ರ ಗಾಯವಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ ಬೆಂಕಿಯನ್ನು ಆರಿಸಲು ಕೆಲಕಾಲ ಯಾರೂ ಹತ್ತಿರ ಹೋಗಲಾಗಲಿಲ್ಲ. ಇದರಿಂದ ತೀವ್ರವಾಗಿ ಗಾಯಗೊಂಡ ಅಂಗಡಿಕಾರ ರಾಮಚಂದ್ರ ನಾಯ್ಕನನ್ನು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಸಲುವಾಗಿ ಮಣಿಪಾಲಕ್ಕೆ ಕರೆದೊಯ್ಯಲಾಯಿತು. ಜೀವ ಉಳಿಸಲು ಹೋದ ಇನೋರ್ವ ಸಾರ್ವಜನಿಕ ಈಶ್ವರ ನಾಯ್ಕನನ್ನು ಸಹ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ರವಾನಿಸಲಾಗಿದೆ. ಘಟನೆಯಿಂದ ಸ್ಥಳೀಯರು ಅಂಗಡಿಕಾರರು ಆಕ್ರೋಶ ಭರಿತರಾಗಿದ್ದು ಸ್ಥಳದಲ್ಲಿ ಸಂಪೂರ್ಣ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಪುರಸಭೆಯ 90% ಅಂಗಡಿಮಳಿಗೆಯಲ್ಲಿ ನಾಮಧಾರಿ ಮತ್ತು ಇತರೆ ಹಿಂದುಳಿದ ಸಮುದಾಯದವರು ತುಂಬಾ ವರ್ಷದಿಂದ ವ್ಯಾಪಾರಮಾಡಿ ಜೀವನ ನಡೆಸುತ್ತಿದ್ದರು. ಈಗ ಪುರಸಭೆಯು ಈ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದು ವ್ಯಾಪಾರವನ್ನೇ ನಂಬಿರುವ ಅಂಗಡಿಕಾರರನ್ನೂ ಅವರ ಕುಟುಂಬವನ್ನು ಬೀದಿಗೆ ಹಾಕಲು ಯೋಜನೆ ರೂಪಿಸಿದ ಹಾಗೆ ಕಾಣಿಸುತ್ತಿದೆ. ಇದರಿಂದಾಗಿ ಅಂಗಡಿಕಾರರಿಗೆ ದಿಕ್ಕುತೋಚದಂತಾಗಿ ಪ್ರತಿಭಟನೆ ನಡೆಸುತ್ತಲೇ ಇದ್ದರು ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ನಾಮಧಾರಿ ಹಿಂದುಳಿದ ಸಮುದಾಯದವರ ಬದಲು ದಲಿತರು/ಅಲ್ಪಸಂಖ್ಯಾತರು ಯಾರಾದರೂ ಇದ್ದರೆ ತಕ್ಷಣ ದೇಶದಾದ್ಯಂತ ಅಷ್ಟೇ ಅಲ್ಲದೆ ವಿಶ್ವಸಂಸ್ಥೆಯಲ್ಲೂ ಚರ್ಚೆಗೆ ಒಳಪಡುತಿತ್ತು ಎಂದು ಜನರ ಅಭಿಪ್ರಾಯ. ಸರ್ಕಾರ ವಿಳಂಬ ಮಾಡದೇ ಈ ಕೂಡಲೇ ರಾಮಚಂದ್ರ ನಾಯ್ಕಗೆ ತಕ್ಕ ಪರಿಹಾರ ನೀಡಿ, ಇದಕ್ಕೆ ಸಂಬಂಧ ಪಟ್ಟ ತೆರವು ಕಾರ್ಯಾಚರಣೆಯ ಗೊಂದಲವನ್ನು ಕೂಡಲೇ ನಿವಾರಿಸಿ ಇನ್ಯಾರೂ ಈ ರೀತಿ ಆತ್ಮಹತ್ಯೆಯಂತಹ ತಪ್ಪು ನಿರ್ಧಾರ ಕೈಗೊಳ್ಳದಂತೆ ನೋಡಿಕೊಳ್ಳಬೇಕು.

ನಾಮಧಾರಿ ರುಚಿ

MORE RECIPE...

ಬ್ಲಾಗ್