logo logo

ಮಂಗಳೂರಿನ ರ‌್ಯಾಲಿಯಲ್ಲಿ ಭಟ್ಕಳದ ಸುನೀಲ್ ನಾಯ್ಕ

ಭಟ್ಕಳ : ಭಟ್ಕಳ : ಮಂಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಅಮಾಯಕವಾಗಿ ಹತ್ಯೆ ಮಾಡಿದ್ದನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ದ ಯುವಮೋರ್ಚ ಘಟಕ ಹಮ್ಮಿಕೊಂಡ ಮಂಗಳೂರು ಚಲೋ ಕಾರ್ಯಕ್ರಮದ ವೇದಿಕೆಯಲ್ಲಿ ಸುನೀಲ್ ಬಿ ನಾಯ್ಕ ಭಾಗವಹಿಸಿದರು. ಮಂಗಳೂರಿನಲ್ಲೂ ತಮ್ಮ ಛಾಪು ಮೂಡಿಸಿದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಘಟಕದ ಪ್ರದಾನ ಕಾರ್ಯದರ್ಶಿ ಸುನಿಲ್ ನಾಯ್ಕ, ತಾವು ಪಾಲ್ಗೊಳ್ಳುವ ಮೂಲಕ ತಮ್ಮ‌ ಹಿಂದೂ ಪರ ಹೋರಾಟವನ್ನು ತೋರಿಸಿಕೊಟ್ಟಿದ್ದಾರೆ.

ಸುನೀಲ್‌ ನಾಯ್ಕ‌ ಈ ಹಿಂದಿನಿದಲ್ಲೂ ಹಿಂದೂ ಸಂಘಟನೆಯಲ್ಲಿ‌ ತಮ್ಮನ್ನು ತಾವು ತೊಡಗಿಸಿ ಕೊಂಡು ಬಂದವರು. ಹಿಂದೂ ಜನತೆಗೆ ಏನಾದರೂ ತೊಂದರೆ ಆಗಿದೆ ಎಂದು ತಿಳಿದರೆ ಅಲ್ಲಿ ಮೊದಲಿಗೆ ಕಾಣಸಿಗುವವರು ಸುನೀಲ್. ಅದೆ ಮಾದರಿಯಲ್ಲಿ ಹಿಂದು ಯುವಕರ ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ನಡೆದ ಬಿಜೆಪಿ ಯುವ‌ ಮೋರ್ಚ ಪ್ರತಿಭಟನೆ ರ‌್ಯಾಲಿಯಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಹಿಂದು ಪರ ಹೋರಾಟ ವನ್ನು‌ ಇಮ್ಮಡಿಗೊಳಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ನಡೆದ ರ‌್ಯಾಲಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸುನಿಲ್ ನಾಯ್ಕ, ಸೂರಜ್ ನಾಯ್ಕ ಹಾಗೂ ಇನ್ನಿತರರು ನಾಯಕರುಗಳು ಪೋಲೀಸರ ಬೆದರಿಕೆಯ ನಡುವೆಯೂ ರ‌್ಯಾಲಿ ನಡೆಸಿ ರಾಜ್ಯ ಬಿಜೆಪಿಯ ಹಿಂದೂ ಪರಹೋರಾಟದಲ್ಲಿ ಜಿಲ್ಲೆಯ ಹೆಸರನ್ನು ಎತ್ತಿ ಹಿಡಿದಿದ್ದಾರೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್