ಮಂಗಳೂರು ಬೈಕ್ ರ‌್ಯಾಲಿಯಲ್ಲಿ ಸೂರಜ್ : ನುಡಿದಂತೆ ನಡೆದ ಸೋನಿ
ಕುಮಟಾ : ಮಂಗಳೂರು: ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ‌್ಯಾಲಿಗೆ ರಾಜ್ಯ ಸರ್ಕಾರ್ ಹ್ಯಾಡ್ ಬ್ರೇಕ್ ಹಾಕಿತ್ತು. ನಿನ್ನೆ ಸಹ ಸಾಕಷ್ಟು ಜನರನ್ನ ಖಾಕಿ ಪಡೆ ತಡೆಹಿಡಿದಿತ್ತು. ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸುವ ಸಮಯದಲ್ಲಿ ಎಲ್ಲರನ್ನು ಬಂಧಿಸಲಾಗಿತ್ತು. ಆಗ ಹಿಂದೂ ಹೋರಾಟಗಾರ ಸೂರಜ್ ಖಾಕಿ ಪಡೆ ನಮ್ಮನ್ನು ಎಷ್ಟೆ ತಡೆದ್ರು ನಾವು ಮಂಗಳೂರು ಮುಟ್ಟತ್ತೀವಿ ಅಂತಾ ಎದೆ ತಟ್ಟಿ ಹೇಳಿದ್ರು.
ಆದರೆ ಈ ಖಾಕಿಗಳು ಅದೆಷ್ಟೆ ಸರ್ಪಗಾವಲು ಹಾಕಿದ್ರು ಹಿಂದೂ ಸಂಘಟನೆಗಾಗಿ ಹಿಂದೂಗಳ ಹತ್ಯೆ ಖಂಡಿಸುವುದಕ್ಕಾಗಿ ಸೂರಜ ಹಾಗೂ ಬಿಜೆಪಿಯ ಕೆಲವು ಮುಂಖಡರು ತಮ್ಮ ಪ್ರಾಣದ ಹಂಗನ್ನು ತೊರೆದು ರ‌್ಯಾಲಿಯಲ್ಲಿ ಭಾಗವಹಿಸಿದ್ದಾರೆ.
ಸೂರಜ್ ಸೋನಿ ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲಿನಿಂದಲ್ಲೂ ಹಿಂದೂಗಳ ಪರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಹಿಂದೂಗಳ ರಕ್ಷಣೆಗೆ ಅವರು ಯಾವ ಹೋರಾಟಕ್ಕೂ ಹಿಂದೆ ಸರಿಯೋದಿಲ್ಲ ಎನ್ನುವ ಮಾತಿದೆ. ಇಂದು ಸಹ ಮಂಗಳೂರಿಲ್ಲಿಯೂ ಸಹ ತಮ್ಮ ಹೋರಾಟ ಕಿಚ್ಚನ್ನು ತೋರಿಸಿದ್ದಾರೆ. ಇಲ್ಲಿಗೆ ಬರುವ ಸಮಯದಲ್ಲಿ ಹೆದ್ದಾರಿಯಲ್ಲಿ ಖಾಕಿ ಪಡೆ ಅವರನ್ನು ತಡೆಯಲು ಸಾಕಷ್ಟು ಪ್ರಯತ್ನ ಮಾಡಿದೆಯಂತೆ ಆದರೆ ಅವರು ಹಾಗೂ ಅವರ ತಂಡ ಯಾವ ಬೆದರಿಕೆಗೆ ಹೆದರದೆ. ಕುಮಟದಲ್ಲಿ ಹೇಳಿದಂತೆ ಪೊಲೀಸರು ನಮ್ಮ ಹೋರಾಟವನ್ನು ತಡೆದ್ರು ನಾವು ಮಂಗಳೂರು ತಲುಪುತ್ತವೆ ಎಂದು ಹೇಳಿದಂತೆ ಮಾಡಿತೋರಿಸಿದ್ದಾರೆ.