ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ
ಬೆಂಗಳೂರು : ರವಿವಾರ ದಿನಾಂಕ 03 ಸೆಪ್ಟೆಂಬರ್ 2017 ರಂದು ಶ್ರೀ ರಾಮ ಕ್ಷೇತ್ರ, ನಿತ್ಯಾನಂದನಗರ, ಧರ್ಮಸ್ಥಳ ದಲ್ಲಿ ಶ್ರೀ ರಾಮ ಕ್ಷೇತ್ರದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 9 ನೇ ವರ್ಷದ ಸದ್ಗುರು ಪಟ್ಟಾಭಿಷೇಕದ ವರ್ಧಂತ್ಯುತ್ಸವ ಸಮಾರಂಭ ನೆರವೇರಲಿವೆ. ಈ ಕಾರ್ಯಕ್ರಮವನ್ನು ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡರು ಉದ್ಘಾಟಿಸಲಿದ್ದು, ಬೆಳ್ತಂಗಡಿ ಶಾಸಕರಾದ ಶ್ರೀ ಕೆ. ವಸಂತ ಬಂಗೇರರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಸಚಿವರಾದ ಶ್ರೀ ಕಾಗೋಡು ತಿಮ್ಮಪ್ಪ, ಸಚಿವರಾದ ಶ್ರೀ ಬಿ.ರಮಾನಾಥ ರೈ, ಸಚಿವರಾದ ಶ್ರೀ ಪ್ರಮೋದ್ ಮದ್ವರಾಜ್, ರಾಜ್ಯಸಭಾ ಸದಸ್ಯರಾದ ಶ್ರೀ ಬಿ.ಕೆ.ಹರಿಪ್ರಸಾದ್, ಸಂಸದರಾದ ಶ್ರೀ ಶ್ರೀ ನಳಿನ್ ಕುಮಾರ್ ಕಟೀಲ್, ರಾಜ್ಯ ಆರ್ಯ ಇದೀಗ ಸಂಗಡ ಅಧ್ಯಕ್ಷರಾದ ಶ್ರೀ ತಿಮ್ಮೇಗೌಡರು, ಶಾಸಕರುಗಳಾದ ಶ್ರೀ ವಿನಯ ಕುಮಾರ ಸೊರಕೆ, ಶ್ರೀ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಶ್ರೀ ಜೆ.ಡಿ.ನಾಯ್ಕ, ಶ್ರೀ ಶಿವಾನಂದ ನಾಯ್ಕರು ಇನ್ನಿತರರು ಆಗಮಿಸಲಿದ್ದಾರೆ.
ದಕ್ಷಿಣ ಅಯೋದ್ಯೆ ಎಂಬ ಖ್ಯಾತಿಯನ್ನು ಹೊಂದಿದ ಶ್ರೀರಾಮ ಕ್ಷೇತ್ರ, ನಿತ್ಯಾನಂದನಗರ, ಧರ್ಮಸ್ಥಳ.ಶ್ರೀ ಕ್ಷೇತ್ರದ ಶ್ರೀರಾಮ ದೇವರ ದೇವಸ್ಥಾನ ವಿಶ್ವಮಾನ್ಯತೆಯನ್ನು ಹೊಂದಿದ ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರವಾಗಿದೆ.1927 ರಲ್ಲಿ ಮುಂಬೈಯ ವಜ್ರೇಶ್ವರಿಯ ಭಗವಾನ್ ನಿತ್ಯಾನಂದರು ಈ ಕ್ಷೇತ್ರಕ್ಕೆ ಆಗಮಿಸಿ ಇಲ್ಲಿ ಒಂದು ದಿವಸ ತಂಗಿದ್ದು, ಈ ಭೂಮಿಯನ್ನು ಪಾವನಗೊಳಿಸಿದರು. ಶ್ರೀಕ್ಷೇತ್ರದ ನಿರ್ಮಾತೃ ಶಕ್ತಿ ಜಗದ್ಗುರು ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಾಧನೆಯಿಂದ ಆಕರ್ಷಿತರಾದ ಬೆಂಗಳೂರು, ಉತ್ತರ ಕನ್ನಡ ಭಾಗದ ನಾಮಧಾರಿಗಳು, ಈಡಿಗರು, ದಕ್ಷಿಣ ಕನ್ನಡದ ಬಿಲ್ಲವರು ಹಾಗು ಇತರೆ ಜನಾಂಗದ ನಾಯಕರು, ಬುದ್ದಿಜೀವಿಗಳು, ಸಾಧು ಸಂತರು ಒಟ್ಟಾಗಿ ಸೇರಿ ಗುರುಗಳನ್ನು ತಮ್ಮ ಕುಲಗುರುಗಳಾಗಿ ಸ್ವೀಕರಿಸಿದರು. ಕೇರಳದ ಶಿವಗಿರಿಯ ಶ್ರೀ ನಾರಾಯಣ ಗುರು ಮಹಾಪೀಠದ ಗುರುಗಳಾದ ಶ್ರೀ ಪ್ರಕಾಶಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಆಗಮಿಸಿದ 30 ಸಂತರು ಹಾಗೆ ಉತ್ತರ ಭಾರತದಿಂದ ಆಗಮಿಸಿದ ಅನೇಕ ಸಾಧು-ಸಂತರ ಸಮ್ಮುಖದಲ್ಲಿ ಶಾಸ್ತ್ರೋತ್ತವಾಗಿ ಗುರುಪೀಠವನ್ನು ನಿರ್ಮಾಣ ಮಾಡಿ, 22 ಜನವರಿ 2008 ರಂದು ಶ್ರೀಗಳನ್ನು ಜಗದ್ಗುಗಳಾಗಿ ಸ್ವೀಕರಿಸಿ ಶ್ರದ್ದಾಭಕ್ತಿಯ ಗುರುವಂದನೆಯನ್ನು ಅರ್ಪಿಸಿದ್ದರು. ಪೂಜ್ಯ ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಮಾದಿಯ ನಂತರ ಈ ಪವಿತ್ರವಾದ ಶ್ರೀರಾಮಕ್ಷೇತ್ರ ಗುರುಪೀಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಮಾಡಿದವರು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08256 - 277162 , 277600