ನಿನಾದ ದಸರಾ ಕಾವ್ಯೋತ್ಸವದಲ್ಲಿ ಕವಿತಾ ರಚನೆ, ಭಾವಗೀತ ಗಾಯನ ಸ್ಪರ್ಧೆ
ಭಟ್ಕಳ : ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರು ಮುಂಬರುವ ದಸರಾ ಮಹೋತ್ಸವದಂದು ‘ದಸರಾ ಕಾವ್ಯೋತ್ಸವ” ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಪ್ರಯುಕ್ತ ಜಿಲ್ಲಾ ಮಟ್ಟದ ಕವನ ರಚನಾ ಸ್ಪರ್ಧೆ ಮತ್ತು ಭಾವಗೀತ ಗಾಯನ ಸ್ಪರ್ಧೆ ಹಮ್ಮಿಕೊಂಡಿರುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ 1500ರೂ, ದ್ವಿತಿಯ 1000ರೂ. ಮತ್ತು ತೃತಿಯ 500ರೂ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು.
ಕವನ ರಚನಾ ಸ್ಪರ್ಧೆಯಲ್ಲಿ ಭಾಗವಹಿಸುವ ಕವಿಗಳು ತಮ್ಮ ಒಂದು ಕವಿತೆಯನ್ನು ದಿನಾಂಕ 8/9/2017ರ ಒಳಗೆ ಕಳಿಸತಕ್ಕದ್ದು. ನಂತರ ಬಂದ ಕವನಗಳನ್ನು ಪರಿಗಣಿಸಲಾಗುದಿಲ್ಲ.
ಭಾವಗೀತ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸುವ ಗಾಯಕರು ದಿನಾಂಕ 5/9/2017ರ ಒಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು. ನೊಂದಾಯಿಸಿಕೊಂಡ ಗಾಯಕರಿಗೆ ನಂತರ ಸ್ಪರ್ಧೆ ನಡಯುವ ಸ್ಥಳ ಮತ್ತು ದಿನಾಂಕವನ್ನು ತಿಳಿಸಲಾಗುವುದು ಎಂದು ನಿನಾದ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಪರ್ಧಿಗಳು ಸಂಪರ್ಕಿಸುವ ವಿಳಾಸ: ಶ್ರೀಮತಿ ರೇಷ್ಮಾ ಉಮೇಶ. ಸಂಚಾಲಕರು ‘ನಿನಾದ ಸಾಹಿತ್ಯ ಸಂಗೀತ ಸಂಚಯ” ತೀರ್ಥ ನಿವಾಸ ಅಮಚೆ ಚಿತ್ರಾಪುರ. ಶಿರಾಲಿ ಭಟ್ಕಳ -581354
ಮೋಬೈಲ್ ನಂಬರ್ 9945840552,