ಆಡ್ಲೂರು ರಾಜು ಅಷ್ಟೇ ಅವರ ಚರ್ಮಾಯಿಗೆ ಹೆಬ್ಬಗೋಡಿ ಗೋಪಾಲ್ ಮತ್ತು ಎಂ ಜಮುನ ದತ್ತಿ ಬಹುಮಾನ
ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ 2016 ರ ಸಾಲಿನ ಸಾಹಿತಿ ಹೆಬ್ಬುಗೊಡಿ ಗೋಪಾಲ್ ಮತ್ತು ಎಂ ಜಮುನ ದತ್ತಿ ಪುಸ್ತಕ ಬಹುಮಾನ ಪ್ರದಾನ ಮತ್ತು ಕವಿಗೋಷ್ಠಿಯನ್ನು ರವಿವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕುವೆಂಪು ಸಭಾಂಗಣದಲ್ಲಿ ನೆರವೇರಿಸಲಾಯಿತು. ಮುಖ್ಯ ಅತಿಥಿಯಾಗಿ ನಾಡೋಜ ಡಾ ಮಹೇಶ್ ಜೋಶಿ ಅವರು ಪುಸ್ತಕ ದತ್ತಿ ಬಹುಮಾನಗಳನ್ನೂ ವಿತರಿಸಿ ಬಹುಮಾನ ಪಡೆದ ಸಾಹಿತಿಗಳಿಗೆ ಗೌರವಿಸಿದರು.
ಕಾದಂಬರಿ ವಿಭಾಗದಲ್ಲಿ ನಮ್ಮ ಸಮಾಜದ ಆಡ್ಲೂರು ರಾಜು ಅಷ್ಟೇ ಅವರ 'ಚರ್ಮಾಯಿ' ಕಾದಂಬರಿ ಮತ್ತು ಡಾ ಕೆ ವಿ ರಾಜೇಶ್ವರಿ ಅವರ 'ಆಸೆಯೆಂಬ ಕುದುರೆಯನ್ನೇರಿ' ಕಾದಂಬರಿಗೆ ಮಹೇಶ್ ಜೋಶಿ ಅವರು ಮತ್ತು ಹೇಬುಗೊಡಿ ಗೋಪಾಲ ಅವರು ದತ್ತಿ ಬಹುಮಾನ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಡಾ ಬಿ ಇಂದಿರದೇವಿ, ಡಾ ಮೂಡ್ನಾಕೂಡು ಚಿನ್ನಸ್ವಾಮಿ, ಹೆಬ್ಬುಗೊಡಿ ಗೋಪಾಲ್ ಇನ್ನಿತರರು ಉಪಸ್ಥಿತರಿದ್ದರು. ಪ್ರಸಸ್ತಿ ಪ್ರಧಾನ ಸಮಾರಂಭವನ್ನ ಬುದ್ದ ಬಸವ ಗಾಂಧಿ ಟ್ರಸ್ಟ್ ಅಧ್ಯಕ್ಷರಾದ ಎಸ್ ರಾಮಲಿಂಗೇಶ್ವರ(ಸಿಸಿರಾ) ಅವರು ಅಚ್ಚುಕ್ಕಟಾಗಿ ನಡೆಸಿಕೊಟ್ಟರು.