logo logo

ಚೀನಾ ವಸ್ತುಗಳ ಬಹಿಷ್ಕರಿಸಿ ಅಭಿಯಾನ : ನಾಮಧಾರಿ ಮಿತ್ರ ಬಳಗ ಶಿರಾಲಿ

ಭಟ್ಕಳ : ಚೀನಾ ವಸ್ತುಗಳ ಬಹಿಷ್ಕರಿಸಿ ನಾಮಧಾರಿ ಮಿತ್ರ ಬಳಗ (ರಿ) ಶಿರಾಲಿ,ಭಟ್ಕಳ ದಿನಾಂಕ 20-08-2017 ರಂದು ಸಂಜೆ 05-00ಕ್ಕೆ ಬೃಹತ್ ಸಾರ್ವಜನಿಕ ಸಮಾರಂಭ ಆಯೋಜಿಸಿದೆ. ಸ್ವದೇಶಿ ಜಾಗರಣ ಮಂಚ್ ಭಟ್ಕಳ ಇದರ ಸಹಯೋಗದಲ್ಲಿ ನಡೆಯುವ ಈ ರಾಷ್ಟ್ರೀಯ ಸ್ವದೇಶೀ ಸುರಕ್ಷಾ ಅಭಿಯಾನ ಭಟ್ಕಳದ ಶಿರಾಲಿಯ ಸಾರದಹೊಳೆ ನಾಮಧಾರಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ನಾಮಧಾರಿ ಮಿತ್ರ ಬಳಗದ ಕಾರ್ಯದರ್ಶಿಗಳಾದ ಶ್ರೀ ದಾಸ ನಾಯ್ಕ ಹರಕಲಿಯವರು ತಿಳಿಸಿದರು.
'ಭಾರತವನ್ನು ರಕ್ಷಿಸೋಣ, ಭಾರತೀಯ ಸೈನಿಕರನ್ನು ರಕ್ಷಿಸೋಣ' ಎಂಬ ಘೋಷಣೆಯ ಈ ರಾಷ್ಟೀಯ ಸ್ವದೇಶಿ ಸುರಕ್ಷಾ ಅಭಿಯಾನ ಜನರಲ್ಲಿ ದೇಶಭಕ್ತಿಯನ್ನು ಜಾಗ್ರತಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ನಾಮಧಾರಿ ಮಿತ್ರ ಬಳಗದವರು ತಮ್ಮ ದೇಶಭಕ್ತಿ ಮತ್ತು ದೇಶದ ರಕ್ಷಣೆಯಲ್ಲಿ ತಮ್ಮಲ್ಲಿರುವ ಕಾಳಜಿಯನ್ನು ಈ ಮೂಲಕ ವ್ಯಕ್ತಪಡಿಸಿ ತಕ್ಕಮಟ್ಟಿಗೆ ದೇಶಸೇವೆ ಮಾಡುವ ಉದ್ದೇಶ ಹೊಂದಿದ್ದಾರೆ.
ಗಡಿಯಲ್ಲಿ ತಂಟೆ ತಕರಾರು ನಡೆಸಿ ಪಾಕಿಸ್ತಾನಕ್ಕೆ ಭಯೋತ್ಪಾದನೆಗೆ ಕುಮ್ಮುಕ್ಕು ನೀಡುತ್ತಾ ಸದಾ ಭಾರತದ ಭದ್ರತೆಯ ವಿಷಯದಲ್ಲಿ ತಲೆನೋವಾಗಿರುವ ಚೀನಾ ದೇಶಕ್ಕೆ ಆರ್ಥಿಕವಾಗಿ ಪೆಟ್ಟು ನೀಡಲು ದೇಶಾದ್ಯಂತ ಮೇಡ್ ಇನ್ ಚೀನಾ ವಸ್ತುಗಳ ಬಹಿಷ್ಕಾರ ಅಭಿಯಾನ ನಡೆಯುತ್ತಿದ್ದು ತಕ್ಕಮಟ್ಟಿಗೆ ಯಶಸ್ಸು ಕಂಡಿದೆ, ಜನರು ಚಿಲ್ಲರೆ ರೂಪಾಯಿಯ ಚೀನಾ ನಿರ್ಮಿತ ವಸ್ತುಗಳನ್ನ ಖರೀದಿಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ಚೀನಾ ಮೊಬೈಲ್ ಫೋನ್ ಗಳ ಷೋರೂಮ್ ಗಳು ದಿನೇ ದಿನೇ ನಾಯಿಕೊಡೆಯಂತೆ ಹೆಚ್ಚುತ್ತಿದ್ದು ಜನ ಮುಗಿಬಿದ್ದು ಸಾವಿರಾರು ರೂಪಾಯಿ ಕೊಟ್ಟು ಚೀನಾ ಮೊಬೈಲ್ ಖರೀದಿ ಮಾಡುವುದು ಮಾತ್ರ ಜಾಸ್ತಿಯಾಗಿದೆ ಎಂಬುದು ವಿಪರ್ಯಾಸ.

ನಾಮಧಾರಿ ರುಚಿ

MORE RECIPE...

ಬ್ಲಾಗ್